ಬ್ರೇಕಿಂಗ್ ನ್ಯೂಸ್
27-01-21 12:13 pm Mangalore Correspondent ಕರಾವಳಿ
ಮಂಗಳೂರು, ಜ. 27: ಗುರುಪುರವನ್ನು ಸುತ್ತಿಕೊಂಡು ಹರಿಯುವ ಫಲ್ಗುಣಿ ನದಿಯ ನೀರು ದಿಢೀರ್ ಕಪ್ಪುಬಣ್ಣಕ್ಕೆ ತಿರುಗಿದೆ. ಕೆಲವು ಕಡೆ ನೀರಿನಲ್ಲಿ ಮೀನುಗಳು ಸತ್ತು ಬಿದ್ದಿರುವುದು ಕಂಡುಬಂದಿದೆ.
ಇತ್ತ ನದಿ ನೀರು ಕಲುಷಿತ ಆಗಿರುವ ಮಧ್ಯೆಯೇ ಉಳಾಯಿಬೆಟ್ಟು, ಗುರುಪುರ, ಕಾರಮೊಗರು, ಏತಮೊಗರು ಆಸುಪಾಸಿನ ಪ್ರದೇಶಗಳಲ್ಲಿ ನದಿ ತೀರದ ನಿವಾಸಿಗಳ ಬಾವಿ ನೀರು ಕೂಡ ಕಪ್ಪಾಗಿದ್ದು ಮಾಲಿನ್ಯ ಮಿಶ್ರಿತವಾಗಿರುವುದು ಕಂಡುಬಂದಿದೆ.
ಗೋಳಿದಡಿಗುತ್ತಿನ ಶ್ರೀ ಮಹಾಕಾಲೇಶ್ವರ ದೇವರ ಉಜ್ಜೈನಿ ತೀರ್ಥಬಾವಿಯ ನೀರು ಸಂಪೂರ್ಣವಾಗಿ ಕಲುಷಿತವಾಗಿದೆ. ಎಂಆರ್ ಪಿಎಲ್, ಎಸ್ ಇಝೆಡ್ ವ್ಯಾಪ್ತಿಯ ಕಾರ್ಖಾನೆಗಳಿಂದ ನದಿಗೆ ಬಿಡುತ್ತಿರುವ ನೀರಿನಿಂದಾಗಿ ಮಳವೂರು ಡ್ಯಾಂನಲ್ಲಿ ಮತ್ತು ನದಿಯ ನೀರು ಕಪ್ಪಾಗಿದೆ. ಅಲ್ಲದೆ, ಆಸುಪಾಸಿನ ಬಾವಿಗಳ ನೀರು ಮಲಿನವಾಗಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಗುರುಪುರ, ಕಂದಾವರ, ಗಂಜಿಮಠ ಹಾಗೂ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಫಲ್ಗುಣಿ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನದಿ ನೀರನ್ನು ಶುದ್ದೀಕರಿಸಿ ಪೂರೈಕೆ ಮಾಡಲಾಗುತ್ತದೆ ಎಂದು ಪಂಚಾಯತ್ ಅಧಿಕಾರಿಗಳು ಹೇಳುತ್ತಿದ್ದರೂ ಈ ನೀರು ಕುಡಿಯಲು ಯೋಗ್ಯವಲ್ಲ. ಶುದ್ದೀಕರಣ ಘಟಕವೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ದೂರಿನ ಪ್ರಕಾರ, ಉಪ ತಹಶೀಲ್ದಾರ್ ಶಿವಪ್ರಸಾದ್ ಮತ್ತು ಕಂದಾಯ ನಿರೀಕ್ಷಕ ನವನೀತ ಮಾಳವ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ಹಿಂದೆ ಪಿಲಿಕುಳ ನಿಸರ್ಗಧಾಮದ ಬಳಕೆಗೆ ನೀಡಲಾಗುತ್ತಿದ್ದ ಮಂಗಳೂರು ನಗರಪಾಲಿಕೆಯ ವ್ಯಾಪ್ತಿಯ ತ್ಯಾಜ್ಯ ನೀರನ್ನು ಈಗ ಪಚ್ಚನಾಡಿಯಿಂದ ಮಂಜಲ್ಪಾದೆಯಾಗಿ ಫಲ್ಗುಣಿ ನದಿಗೆ ನೇರವಾಗಿ ಬಿಡಲಾಗುತ್ತಿದೆ. ಶುದ್ಧೀಕರಿಸದೆ ನೀರನ್ನು ಕೊಡುತ್ತಿದ್ದುದಕ್ಕೆ ಪಿಲಿಕುಳ ನಿಸರ್ಗಧಾಮ ಆಡಳಿತ ಆಕ್ಷೇಪಿಸಿ, ಪಾಲಿಕೆಯ ತ್ಯಾಜ್ಯ ನೀರನ್ನೇ ನಿರಾಕರಿಸಿತ್ತು. ಆನಂತರ ತ್ಯಾಜ್ಯ ನೀರನ್ನು ಮಂಜಲ್ಪಾದೆಯಿಂದ ನೇರವಾಗಿ ಫಲ್ಗುಣಿ ನದಿಗೆ ಬಿಡಲಾಗುತ್ತಿದೆ.
ಈ ಬಗ್ಗೆ ಹಿಂದೊಮ್ಮೆ ಮೂಡುಶೆಡ್ಡೆಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದೂ ಆಗಿತ್ತು. ಈಗ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು ಕಾರ್ಖಾನೆಗಳ ತ್ಯಾಜ್ಯದ ಜೊತೆಗೆ ಇಂಥ ತ್ಯಾಜ್ಯ ನೀರಿನ ಮಾಲಿನ್ಯವೂ ಕಾರಣವಾಗಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಇನ್ನೂ ಜಾಗೃತಗೊಂಡಿಲ್ಲ.
Factories Pollution surrounding river Phalguni in Mangalore has turned the river black by killing large number of fishes.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 02:39 pm
HK News Staffer
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm