ಬ್ರೇಕಿಂಗ್ ನ್ಯೂಸ್
30-01-21 12:22 pm Mangalore Correspondent ಕರಾವಳಿ
ಮಂಗಳೂರು, ಜ.30 : ದುಬೈನಲ್ಲಿ ಕಳೆದ ಎಂಟು ತಿಂಗಳಿಂದ ಕೋಮಾದಲ್ಲಿದ್ದು, ಕಳೆದ ವಾರ ನಿಧನರಾದ ಮಂಗಳೂರು ಮೂಲದ ವ್ಯಕ್ತಿಯ ಮೃತದೇಹವನ್ನು ತಾಯ್ನಾಡಿಗೆ ಕಳುಹಿಸುವಲ್ಲಿ ಅನಿವಾಸಿ ಭಾರತೀಯರ ತಂಡ ಯಶಸ್ವಿಯಾಗಿದೆ.
ಮಂಗಳೂರಿನ ಕಾವೂರು ನಿವಾಸಿಯಾಗಿರುವ, ಅನಿವಾಸಿ ಕನ್ನಡಿಗ ದಿಲೀಪ್ (55) ಅವಿವಾಹಿತರಾಗಿದ್ದು ತಾಯಿ ಮತ್ತು ಅವಿವಾಹಿತ ಸಹೋದರಿಯರ ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದರು. 15 ವರ್ಷಗಳಿಂದ ದುಬೈನಲ್ಲಿ ದುಡಿಯುತ್ತಿದ್ದ ದಿಲೀಪ್, ಕಳೆದ ಏಪ್ರಿಲ್ ತಿಂಗಳಿನಲ್ಲಿ ಬ್ರೈನ್ ಸ್ಟ್ರೋಕ್‌ನ ಪರಿಣಾಮ ಕೋಮಾವಸ್ಥೆಗೆ ತಲುಪಿದ್ದರು’ ಎಂದು ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್ ತಿಳಿಸಿದ್ದಾರೆ.
ಸತತ ಎಂಟು ತಿಂಗಳಿಂದ ಕೋಮಾ ಸ್ಥಿತಿಯಲ್ಲಿದ್ದ ದಿಲೀಪ್ ಕುಮಾರ್ ಕಳೆದ ಶುಕ್ರವಾರ ನಿಧನರಾದರು. ಅವರ ಮೃತದೇಹವನ್ನು ಇಂಡಿಯನ್ ಕಾನ್ಸುಲೇಟ್ ದುಬೈ, ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್), ಕನ್ನಡಿಗಾಸ್ ಫೆಡರೇಷನ್, ಇಂಡಿಯನ್ ಅಸೋಸಿಯೇಷನ್ ಅಜ್ಮಾನ್ ನೆರವಿನಿಂದ ಕೋವಿಡ್ ಸಂದರ್ಭದಲ್ಲಿ ಪಡೆಯಬೇಕಾದ ಎಲ್ಲ ಅನುಮತಿ ಪತ್ರಗಳನ್ನು ಪಡೆದು ತಾಯ್ನಾಡಿಗೆ ಕಳುಹಿಸಲಾಗಿದೆ.

ದಿಲೀಪ್ ಆರೋಗ್ಯದ ಕುರಿತು ಅಬ್ದುಲ್ ಕರೀಮ್ ನೇತೃತ್ವದ ಕೆಸಿಎಫ್ ತಂಡ ಕಾಳಜಿ ವಹಿಸುತ್ತಿತ್ತು. ಅವರ ತಾಯಿ, ಸಹೋದರಿಯರು ಮಗನ ಮುಖವನ್ನು ಕೊನೆಯ ಬಾರಿ ನೋಡಬೇಕು. ಹೇಗಾದರೂ ಮೃತದೇಹ ಕಳುಹಿಸಿ ಎಂದು ಕೋರಿಕೊಂಡಿದ್ದು ಕೋವಿಡ್ ಸಂದರ್ಭದಲ್ಲಿ ಮೃತದೇಹವನ್ನು ತಾಯ್ನಾಡಿಗೆ ತಲುಪಿಸಲು ಇತರೇ ಅನಿವಾಸಿ ಕನ್ನಡಿಗರ ಸಹಾಯ ಕೇಳಿತ್ತು.
ಕೂಡಲೇ ಕೆಎನ್‌ಆರ್‌ಐ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮತ್ತು ದುಬೈ ಕಾನ್ಸುಲೇಟ್ ಕಚೇರಿಯ ಕಾನ್ಸುಲ್ ಜಿತೇಂದ್ರ ಸಿಂಗ್ ನೇಗಿ ಅವರನ್ನು ಸಂಪರ್ಕಿಸಿದ್ದು ತಕ್ಷಣವೇ ಸ್ಪಂದಿಸಿ ಕಾನ್ಸುಲೇಟ್ ಮೂಲಕ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಅಜ್ಮಾನ್ ಇಂಡಿಯನ್ ಅಸೋಸಿಯೇಷನ್‌ನ ಛಾಯಾದೇವಿ ಕೃಷ್ಣಮೂರ್ತಿಯವರು ದಿಲೀಪ್ ವೀಸಾ, ಇಮಿಗ್ರೇಷನ್, ಡೆತ್ ಸರ್ಟಿಫಿಕೇಟ್ ಪಡೆಯಲು ಸಹಕರಿಸಿದರು. ಇದೆಲ್ಲರ ಫಲವಾಗಿ ದಿಲೀಪ್ ಮೃತದೇಹ ದುಬೈನಿಂದ ಮಂಗಳೂರಿಗೆ ತಲುಪಿದೆ ಎಂದು ಹಿದಾಯತ್ ಹೇಳಿದರು.
ದಿಲೀಪ್ ಸಹೋದರಿ ಕಿಡ್ನಿ ಸಮಸ್ಯೆಯಿಂದ ಡಯಾಲಿಸಿಸ್ ಮಾಡಿಸುತ್ತಿದ್ದರು. ಸೋದರನ ಆದಾಯವನ್ನೇ ನಂಬಿದ್ದ ಕುಟುಂಬ ದಿಲೀಪ್ ಆಸ್ಪತ್ರೆಗೆ ದಾಖಲಾದ ನಂತರ ಹಣದ ಕೊರತೆಯಿಂದ ಡಯಾಲಿಸಿಸ್ ಮಾಡಲಾಗದೆ ಮುಂದೂಡುತ್ತಿದ್ದಾರೆ. ಮದುವೆ ವಯಸ್ಸು ಮೀರಿದ ಸಹೋದರಿ ಮತ್ತು ತಾಯಿಗೆ ಆಸರೆ ಇಲ್ಲದಾಗಿದೆ.
The mortal remains of Dilip Kumar,57, a pastry chef working in Dubai, arrived at Mangaluru on Thursday. Dilip died on January 22, and Karnataka Cultural Foundation (KCF) and International Kannadigas Federation (IKF) helped in organising Dilip’s last journey from Dubai to Mangaluru.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm