ಪಾಲಿಕೆ ಅಧಿಕಾರಿ ಮನೆಗೆ ಎಸಿಬಿ ದಾಳಿ ; ಎರಡೆರಡು ಮನೆ, ನಿವೇಶನ, ಮೂರು ಕೋಟಿಗೂ ಹೆಚ್ಚು ಆಸ್ತಿ ಪತ್ತೆ

02-02-21 06:21 pm       Mangalore Correspondent   ಕರಾವಳಿ

ಮಂಗಳೂರು ಮ.ನ,ಪಾ. ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಜಯರಾಜ್ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಅಪಾರ ಪ್ರಮಾಣದ ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು, ಫೆ.2: ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕರಾಗಿರುವ ಜಯರಾಜ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಅಪಾರ ಪ್ರಮಾಣದ ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಬಿಜೈ ಕಾಪಿಕಾಡಿನಲ್ಲಿ ಅಪಾರ್ಟ್ಮೆಂಟಿನಲ್ಲಿ ಒಂದು ಫ್ಲ್ಯಾಟ್, ಪಡೀಲಿನಲ್ಲಿ ಮತ್ತೊಂದು ಮನೆ, ಮತ್ತೆರಡು ಕಡೆ ನಿವೇಶನಗಳನ್ನು ಹೊಂದಿರುವುದು ಪತ್ತೆಯಾಗಿದೆ. ಅಲ್ಲದೆ, ಬಿಜೈನ ಮನೆಯಲ್ಲಿ 7.5 ಲಕ್ಷ ರೂ. ನಗದು ಮತ್ತು 1.5 ಕೋಟಿ ರೂ. ಮೊತ್ತದ ಡಿಡಿ ಇನ್ನಿತರ ಆಸ್ತಿ ದಾಖಲೆ ಪತ್ರ, ಪತ್ನಿಯ ಖಾತೆಯಲ್ಲಿ ಒಂದು ಕೋಟಿ ರೂ. ಹಣ ಹಾಗೂ ಪತ್ನಿಯ ಕೇರಳದ ಮನೆಯಲ್ಲಿ 160 ಗ್ರಾಮ್ ಚಿನ್ನಾಭರಣ ಪತ್ತೆಯಾಗಿದೆ.

ಜಯರಾಜ್ ಮೈಸೂರಿನಲ್ಲಿಯೂ ಮತ್ತೊಂದು ನಿವೇಶನ ಹೊಂದಿರುವುದು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಕೇರಳದ ಮಾಹೆಯಲ್ಲಿ ಜಯರಾಜ್ ಪತ್ನಿ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಅಲ್ಲಿ ಕ್ವಾಟ್ರಸ್ ಹೊಂದಿದ್ದಾರೆ. ಅಲ್ಲಿನ ಮನೆಗೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಜಯರಾಜ್ ಮೂಲತಃ ಕೇರಳದವನಾಗಿದ್ದು, ಕಳೆದ ಆರು ವರ್ಷಗಳಿಂದ ಮಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಜಂಟಿ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾನೆ. 

Read: ಮಂಗಳೂರಿನಲ್ಲಿ ಎಸಿಬಿ ರೈಡ್ ; ಮಹಾನಗರ ಪಾಲಿಕೆಯ ಅಧಿಕಾರಿ ಮನೆ, ಕಚೇರಿ ಪರಿಶೀಲನೆ

The ACB officials have gathers more than three crores wealth in the Raid on MCC Joint Director Jayaraj here in Mangalore.