ಬ್ರೇಕಿಂಗ್ ನ್ಯೂಸ್
03-02-21 12:53 pm Mangalore Correspondent ಕರಾವಳಿ
ಮಂಗಳೂರು, ಫೆ.3 : ನಗರದ ಪಡೀಲ್ ಸಮೀಪದ ಅಡ್ಯಾರ್ ಎಂಬ ಊರಿನ ಮೂಲ ಹೆಸರು ಅಡಿಯಾರ ಎಂಬುದಾಗಿತ್ತು. ಹಿಂದಿನ ಕಾಲದಲ್ಲಿ ಅತ್ಯಂತ ಫಲವತ್ತಾದ ಭೂಮಿಯಾಗಿತ್ತು ಎನ್ನುವ ಅಂಶ ಅಲ್ಲಿ ಪತ್ತೆಯಾದ ಶಾಸನವೊಂದರಿಂದ ತಿಳಿದುಬಂದಿದೆ.
ಅಡ್ಯಾರ್ ಗ್ರಾಮದ ಸೋಮನಾಥ ಕಟ್ಟೆ ಎಂಬ ಸ್ಥಳದಲ್ಲಿ ಆಳುಪ ದೊರೆ ಮೂರನೇ ಕುಲಶೇಖರನಿಗೆ ಸೇರಿದ್ದು ಎನ್ನಲಾದ ಶಾಸನ ಕಲ್ಲನ್ನು ಸ್ಥಳೀಯ ಯುವಕರು ಪತ್ತೆ ಮಾಡಿದ್ದಾರೆ. ಸಂಶೋಧನಾರ್ಥಿ
ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಈ ಶಾಸನವನ್ನು ಓದಿ, ಹಿಂದೆ ಮಂಗಳೂರು ರಾಜ್ಯವನ್ನು ಆಳುತ್ತಿದ್ದ ಆಳುಪ ರಾಜ ಕುಲಶೇಖರನ ಕಾಲದಲ್ಲಿ ಆಗಿರುವ ಶಾಸನ ಎಂದು ಹೇಳಿದ್ದಾರೆ. ಮಣ್ಣಿನಲ್ಲಿ ಹುದುಗಿ ಹೋಗಿದ್ದ ಶಾಸನವನ್ನು ಸ್ಥಳೀಯ ಯುವಕರು ಮತ್ತು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು ಸಹಕಾರದಿಂದ ಮಣ್ಣಿನಿಂದ ಹೊರತೆಗೆದು ನೇರವಾಗಿ ನಿಲ್ಲಿಸಲಾಗಿದೆ.
ನಾಲ್ಕು ಅಡಿ ಎತ್ತರ ಮತ್ತು ಎರಡು ಅಡಿ ಅಗಲ ಇದ್ದು ಗ್ರಾನೈಟ್ ಶಿಲೆಯಲ್ಲಿ ಕೆತ್ತಲಾದ ಶಾಸನ ಕಲ್ಲಿನಲ್ಲಿ ಅಚ್ಚ ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಶಾಸನವು 19 ಸಾಲುಗಳನ್ನು ಹೊಂದಿದ್ದು , ಆ ಕಾಲದಲ್ಲಿ ಕನ್ನಡ ಲಿಪಿ ಮತ್ತು ಕನ್ನಡ ಭಾಷೆ ಪ್ರಚಲಿತದಲ್ಲಿತ್ತು ಎಂಬುದನ್ನು ಸೂಚಿಸುತ್ತದೆ.
ಶಾಸನದಲ್ಲಿ ಮೂರನೇ ಕುಲಶೇಖರನನ್ನು ಶ್ರೀ ಮತ್ಸ್ಯಾಂಡ್ಯ ಚಕ್ರವರ್ತಿರಾಯ ಗಜಾಂಕುಶ ವೀರ ಕುಲಶೇಖರ ಎಂದು ಸಂಭೋದಿಸಲಾಗಿದೆ. ಶಾಸನದಲ್ಲಿ ಸಾಧಾರಣ ಸಂವತ್ಸರದ ಧನು ಮಾಸ ೨ ನೆಯ ಆದಿತ್ಯವಾರ ಎಂಬುದಾಗಿ ಕಾಲಮಾನದ ಉಲ್ಲೇಖವನ್ನು ಮಾಡಲಾಗಿದೆ. ವೀರ ಕುಲಶೇಖರ ಮಂಗಳೂರ ರಾಜ್ಯವನ್ನು ಆಳುತ್ತಿದ್ದ ಸಂದರ್ಭದಲ್ಲಿ ಅಡಿಯಾರ ಪ್ರದೇಶದ ಬೆದೆಕಾರು (ಮಳೆಗಾಲದಲ್ಲಿ ಬೆಳೆಯುವ ತರಿ ಭೂಮಿ) ಭೂಮಿಗಳನ್ನು ದಾನ ಕೊಟ್ಟಿರುವ ಉಲ್ಲೇಖವನ್ನು ಈ ಶಾಸನದಲ್ಲಿ ಮಾಡಲಾಗಿದೆ. ಶಾಸನದ ಕೊನೆಯಲ್ಲಿ ಈ ಶಾಸನವನ್ನು ಯಾರು ಹಾಳು ಮಾಡುವರೋ ಅವರು ಗಂಗೆ ಮತ್ತು ವಾರಣಾಸಿಯಲ್ಲಿ ಸಹಸ್ರ ಗೋವುಗಳನ್ನು ಕೊಂದ ದೋಷಕ್ಕೆ ಹೋಗುವರು ಎಂಬ ಶಾಪ ವಾಕ್ಯವನ್ನು ಬರೆಯಲಾಗಿದೆ. ಈ ದಾನವನ್ನು ಗುರುವಣಪ್ಪ ಒಡೆಯನು ಮಾಡಿದ ಎಂಬುದನ್ನು ಶಾಸನದಲ್ಲಿ ತಿಳಿಸಲಾಗಿದೆ.
ಮುಖ್ಯವಾಗಿ ಶಾಸನದಲ್ಲಿ ಉಲ್ಲೇಖಗೊಂಡ ಅಡಿಯಾರ ಎಂಬ ಹೆಸರಿನ ಊರು ಪ್ರಸ್ತುತ ಚಾಲ್ತಿಯಲ್ಲಿರುವ ಅಡ್ಯಾರ್ ಆಗಿರುವ ಸಾಧ್ಯತೆಯಿದೆ. ಅಲ್ಲದೆ, ಅಡ್ಯಾರ್ ಹೆಸರಿನ ಪೂರ್ವದ ಹೆಸರಾಗಿರಬಹುದು ಎಂದು ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬುಧವಾರ ಬೆಳಗ್ಗೆ ಕ್ಷೇತ್ರಕಾರ್ಯ ಶೋಧನೆ ಕೆಲಸ ನಡೆದಿದ್ದು ಈ ಸಂದರ್ಭದಲ್ಲಿ ವಿಶ್ವಾಸ್, ವಿನೀತ್, ರಿಖಿಲ್, ಪ್ರಸನ್ನ, ರತನ್, ಸುಜಿತ್, ಸುರೇಶ್ ಶೆಟ್ಟಿ ಅವರು ಸಹಕಾರ ನೀಡಿದ್ದರು.
Historic Monument Stone of Veera Kulashekara found at Adyar in Mangalore. A large crowd has gathered to see the Historic Stone.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm