ಉಳ್ಳಾಲ ; ತಿಮಿಂಗಿಲ ಮಾದರಿಯ ಕಡಲು ಹಂದಿ ಪತ್ತೆ !

04-02-21 01:27 pm       Mangalore Correspondent   ಕರಾವಳಿ

ಉಳ್ಳಾಲ ಸಮುದ್ರ ಕಿನಾರೆಯಲ್ಲಿ ಕಡು ನೀಲಿ ಬಣ್ಣದ ತಿಮಿಂಗಿಲ ಕಳೇಬರ ಪತ್ತೆಯಾಗಿದೆ. 

ಉಳ್ಳಾಲ, ಫೆ.4 : ಉಳ್ಳಾಲ ಮೊಗವೀರ ಪಟ್ಣದ ಸಮುದ್ರ ಕಿನಾರೆಯಲ್ಲಿ ಕಡು ನೀಲಿ ಬಣ್ಣದ ತಿಮಿಂಗಿಲ ಮಾದರಿಯ ಬೃಹತ್ ಕಡಲು ಹಂದಿಯ ಕಳೇಬರ ಪತ್ತೆಯಾಗಿದೆ. 

ಸಮುದ್ರದಲ್ಲಿರುವ ಕಡಲು ಹಂದಿಗಳು ಸಾಧಾರಣವಾಗಿ ತಿಮಿಂಗಿಲಗಳನ್ನೇ ಹೋಲುತ್ತವೆ. ತಿಮಿಂಗಿಲದ್ದೇ ಒಂದು ಪ್ರಭೇದವಾಗಿದ್ದು ಸ್ಥಳೀಯರು ಆಡುಭಾಷೆಯಲ್ಲಿ ಕಡಲು ಹಂದಿ ಎನ್ನುತ್ತಾರೆ. ಸ್ಥಳೀಯ ಮೀನುಗಾರರ ಪ್ರಕಾರ, ಇದು ತಿಮಿಂಗಿಲ ಅಲ್ಲ. ಕಡಲು ಹಂದಿಯಂತೆ. ಸುಮಾರು ಹತ್ತು ಫೀಟ್ ಉದ್ದವಿದೆ. 

ಸ್ಥಳೀಯರು ತಿಮಿಂಗಿಲದ ಕಳೇಬರವನ್ನು ಕಡಲಿಗೆ ದೂಡಿರುವುದಾಗಿ ತಿಳಿದು ಬಂದಿದೆ. ಆದರೆ, ಇದು ಹೆಚ್ಚು ಕೊಳೆತಿರಲಿಲ್ಲ. ಹೀಗಾಗಿ ಸತ್ತು ಹೆಚ್ಚು ದಿನ ಆಗಿರಲಿಕ್ಕಿಲ್ಲ. ಸಾಮಾನ್ಯವಾಗಿ ತಿಮಿಂಗಿಲಗಳ ದೊಡ್ಡ ಗಾತ್ರದವಾಗಿದ್ದು ಅದು ಸತ್ತು ಆಳ ಸಮುದ್ರದಿಂದ ದಡಕ್ಕೆ ಬರುವಾಗ ಹಲವು ದಿನಗಳಾಗುತ್ತವೆ. ಹೀಗಾಗಿ ಕಳೇಬರ ಸಂಪೂರ್ಣ ಕೊಳೆತು ವಾಸನೆ ಬರುತ್ತದೆ. 

ಇದೇ ಜಾತಿಯ ತಿಮಿಂಗಿಲಗಳು ಕಳೆದ ವರ್ಷ ಆಸ್ಟ್ರೇಲಿಯಾ, ಆಫ್ರಿಕಾದ ಕೆಲವು ಭಾಗಗಳಲ್ಲಿ ರಾಶಿ ರಾಶಿಯಾಗಿ ಸತ್ತು ಬಿದ್ದಿದ್ದು ಸುದ್ದಿಯಾಗಿತ್ತು.

A huge dead blue whale was found at Mogaveerapatna beach at Ullal in Mangalore.