ಬ್ರೇಕಿಂಗ್ ನ್ಯೂಸ್
06-02-21 05:17 pm Mangalore Correspondent ಕರಾವಳಿ
ಮಂಗಳೂರು, ಫೆ.6: ಮಂಗಳೂರು ಕಮೀಷನರೇಟ್ ಅಧೀನದ ಸಿಸಿಬಿ ಪೊಲೀಸರು ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಆರೋಪಿಗಳ ಐಷಾರಾಮಿ ಕಾರುಗಳನ್ನು ಹಿರಿಯ ಅಧಿಕಾರಿಗಳು ಶಾಮೀಲಾಗಿ ಮಾರಾಟ ಮಾಡಿರುವ ಆಘಾತಕಾರಿ ಪ್ರಕರಣ ವರದಿಯಾಗಿದ್ದು, ಅಂದಿನ ಪೊಲೀಸ್ ಕಮೀಷನರ್ ವಿಕಾಸ್ ಕುಮಾರ್, ನಗರದ ಎಸಿಪಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿರುವುದರಿಂದ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದ ರಿಯಲ್ ಎಸ್ಟೇಟ್, ಹಣ ದ್ವಿಗುಣ ಪ್ರಕರಣದ ಆರೋಪಿಗಳಿಗೆ ಸೇರಿದ ಬಿಎಮ್ ಡಬ್ಲ್ಯೂ, ಜಾಗ್ವಾರ್ ಸಹಿತ ಮೂರು ಐಶಾರಾಮಿ ಕಾರುಗಳನ್ನು ಪೊಲೀಸರು ಮಾರಾಟ ಮಾಡಿರುವ ಪ್ರಕರಣವನ್ನು ಮಂಗಳೂರು ನಗರದ ನೂತನ ಪೊಲೀಸ್ ಕಮೀಷನರ್ ಬಯಲಿಗೆಳಿದಿದ್ದಾರೆ. ತನಿಖೆಗೂ ಆದೇಶಿಸಿದ್ದಾರೆ. ಈ ಕುರಿತು ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರೀಕ್ಷಕರು ವರದಿ ಕೇಳಿರುವ ಕುರಿತು ಸುದ್ದಿಯಾಗಿದೆ. ಇದು ಅತ್ಯಂತ ಆಘಾತಕಾರಿ ಘಟನೆಯಾಗಿದ್ದು, ಜನಸಾಮಾನ್ಯರು ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣಗೊಂಡಿದೆ.
ಮಂಗಳೂರಿನಿಂದ ತಿಂಗಳ ಹಿಂದೆಯಷ್ಟೆ ವರ್ಗಾವಣೆಗೊಂಡಿರುವ ಆಗಿನ ಕಮೀಷನರ್ ವಿಕಾಸ್ ಕುಮಾರ್ ಮೇಲೆ ಇದೊಂದೇ ಪ್ರಕರಣ ಅಲ್ಲದೆ ಭ್ರಷ್ಟಾಚಾರದ, ಸೆಟಲ್ ಮೆಂಟ್ ಹೆಸರಿನಲ್ಲಿ ಹಣ ಸುಲಿಗೆಯ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದವು. ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಹಳೆಯ ಆರೋಪಿಗಳಿಂದ, ದಂಧೆ ನಿರತರಿಂದ ಅಪಾರ ಪ್ರಮಾಣದ ಹಣ ವಸೂಲಿ ಮಾಡಿರುವ ಪ್ರಕರಣಗಳನ್ನು ಮುಚ್ಚಿ ಹಾಕಿರುವ ವದಂತಿಗಳು ನಗರದಲ್ಲಿ ಹರಿದಾಡಿದ್ದವು. ಸಿಸಿಬಿಯನ್ನು ಮುಂದಿಟ್ಟು ಇಂತಹ ಹಲವು ಅಕ್ರಮ ಡೀಲಿಂಗ್ ನಡೆಸಿರುವ ಅನುಮಾನಗಳು ಈಗ ಎಲ್ಲೆಡೆ ಹರಿದಾಡುತ್ತಿದೆ. ಇದು ಪೊಲೀಸ್ ಇಲಾಖೆಯ ವೃತ್ತಿಪರತೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.
ಈಗಿನ ಕಮೀಷನರ್ ಶಶಿಕುಮಾರ್ ಪ್ರಕರಣದ ತನಿಖೆಗೆ ಆದೇಶಿಸಿ ಜನರಲ್ಲಿ ಭರವಸೆ ಹುಟ್ಟಿಸಿದರೂ, ಈ ಪ್ರಕರಣದಲ್ಲಿ ಐಜಿಪಿ ದರ್ಜೆಯ ಐಪಿಎಸ್ ಅಧಿಕಾರಿಯ ಹೆಸರಿರುವುದರಿಂದ, ರಾಜಕೀಯ ನಂಟಿನ ಅನುಮಾನಗಳೂ ವ್ಯಕ್ತವಾಗಿದ್ದು ಪಾರದರ್ಶಕ ತನಿಖೆಗಾಗಿ ಪ್ರಕರಣವನ್ನು ದಕ್ಷ ಅಧಿಕಾರಿಗಳಿರುವ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ. ರಾಜಕೀಯ ಪ್ರಭಾವ ಬಳಸಿ ಈಗಿನ ಕಮೀಷನರ್ ಶಶಿ ಕುಮಾರ್ ರ ಕೈಗಳನ್ನು ಕಟ್ಟಿಹಾಕಿ, ಪ್ರಕರಣವನ್ನು ಸರಕಾರ ಮುಚ್ಚಿ ಹಾಕಲು ಯತ್ನಿಸಿದರೆ ನಾಗರಿಕರನ್ನು ಸಂಘಟಿಸಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ಕೇಡಿ ರಾಜ್, ಕಾಸ್ಕುಮಾರ್, ಜಗದೇಕ ವೀರ ; ವಂಚಕ ಉದ್ಯಮಪತಿಗಳನ್ನೇ ಬೋಳಿಸಿದ ಪೊಲೀಸ್ ಜೋಡಿ !!
ಐಷಾರಾಮಿ ಕಾರುಗಳ ಮಾರಾಟ ಪ್ರಕರಣ : ಡಿಸಿಪಿ ಗಾಂವ್ಕರ್ ಗೆ ಆಂತರಿಕ ತನಿಖೆ ಹೊಣೆ
The DFYI organisation has urged for a detailed probe in the Luxury car missing case which was under the custody of CCB police in Mangalore.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 02:34 pm
Mangalore Correspondent
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
25-02-25 01:37 pm
HK News Desk
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm