ತಿರುವೈಲಿನ ಹಸಿರ ಗದ್ದೆಯಲ್ಲಿ ಅಕ್ಷರಶಃ ಬಯಲು ಕಂಬಳ

13-02-21 05:03 pm       Mangalore Correspondent   ಕರಾವಳಿ

ಕೊರೊನಾ ಆತಂಕದ ಬಳಿಕ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಜನರ ಜನಪದ ಕ್ರೀಡೆ ಕಂಬಳದ ಗೌಜಿ ಕಳೆಕಟ್ಟಿದೆ.

ಮಂಗಳೂರು, ಫೆ.13 : ಕೊರೊನಾ ಆತಂಕದ ಬಳಿಕ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಜನರ ಜನಪದ ಕ್ರೀಡೆ ಕಂಬಳದ ಗೌಜಿ ಕಳೆಕಟ್ಟಿದೆ. ಮಂಗಳೂರು ನಗರದ ಬಳಿಯಲ್ಲೇ ಈ ಸಾಲಿನ ಮೂರನೇ ಕಂಬಳ ನಡೆಯುತ್ತಿದ್ದು ವಾಮಂಜೂರಿನ ತಿರುವೈಲ್ ಗುತ್ತಿನಲ್ಲಿ ವೈಭವದ ಕಂಬಳಕ್ಕೆ ಚಾಲನೆ ಸಿಕ್ಕಿದೆ. 

ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿಯ ‘ವೀರ-ವಿಕ್ರಮ’ ಜೋಡುಕರೆ ಕಂಬಳ, ಐಕಳದ ಕಾಂತಬಾರೆ, ಬೂದಾಬಾರೆ  ಕಂಬಳದ ಬಳಿಕ ಇದೀಗ ಮೂರನೇ ಕಂಬಳ ತಿರುವೈಲು ಗುತ್ತಿನಲ್ಲಿ ಸಂಕುಪೂಂಜ- ದೇವುಪೂಂಜ ಹೆಸರಲ್ಲಿ ನಡೆಯುತ್ತಿದೆ. ವಾಮಂಜೂರು ತಿರುವೈಲುಗುತ್ತಿನ ಹೊನಲು ಬೆಳಕಿನ ಸಂಕುಪೂಂಜ- ದೇವುಪೂಂಜ ಜೋಡುಕರೆ ಬಯಲು ಕಂಬಳ ಹೆಸರಿಗೆ ತಕ್ಕಂತೆ ಹಸಿರ ಬಯಲಿನ ನಡುವೆ ಕೋಣಗಳ ಓಟದ ಸ್ಪರ್ಧೆ. 



ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರಿನ ತಿರುವೈಲು ಗುತ್ತಿನಲ್ಲಿ 8ನೇ ವರ್ಷದ ಕಂಬಳ ನಡೆಯುತ್ತಿದೆ. ಕಂಬಳದಲ್ಲಿ 150ಕ್ಕೂ ಮಿಕ್ಕಿ ಕೋಣಗಳ ಜತೆ ಭಾಗವಹಿಸಿವೆ. ಇಂದು ಬೆಳಗ್ಗೆ ತಿರುವೈಲ್ ಕಂಬಳಕ್ಕೆ ಕರಾವಳಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಗಣೇಶ್ ರಾವ್ ಚಾಲನೆ ನೀಡಿದರು.

The immensely popular 'Sankupoonja-Devupoonja Jodukare Kambala' was held on February 13th, 2021 in the Kambala field at Thiruvail Guthu opposite Amrutheshwara temple in Vamanjoor in Mangalore.