ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳಿಂದ ರಕ್ತದಾನ

15-02-21 06:15 pm       Mangalore Correspondent   ಕರಾವಳಿ

ಜನಪರ ಕಾಳಜಿಯಿಂದ ಬೆಸೆಂಟ್ ಸಂಧ್ಯಾ ಕಾಲೇಜನ ಹಳೆ ವಿದ್ಯಾರ್ಥಿ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ದೇವಾನಂದ್ ಪೈ ಹೇಳಿದರು. 

ಮಂಗಳೂರು, ಫೆ.15; ರಕ್ತದಾನ ಎಲ್ಲ ದಾನಗಳಿಗಿಂತ ಶ್ರೇಷ್ಠವಾಗಿದ್ದು ಹಣ ಅಥವಾ ವಸ್ತುವನ್ನು ದಾನ ಮಾಡುವುದಕ್ಕಿಂತ ರಕ್ತವನ್ನು ದಾನ ಮಾಡುವುದರಿಂದ ಓರ್ವನ ಜೀವ ರಕ್ಷಿಸಿದಂತಾಗುತ್ತದೆ. ಜನಪರ ಕಾಳಜಿಯಿಂದ ಬೆಸೆಂಟ್ ಸಂಧ್ಯಾ ಕಾಲೇಜನ ಹಳೆ ವಿದ್ಯಾರ್ಥಿ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಬೆಸೆಂಟ್ ರಾಷ್ಟ್ರೀಯ ಮಹಿಳಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದೇವಾನಂದ್ ಪೈ ಹೇಳಿದರು. 

ಬೆಸೆಂಟ್ ಸಂಧ್ಯಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವು ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಂಗಳೂರು ಇದರ ಸಹಯೋಗದೊಂದಿಗೆ ಕಾಲೇಜಿನಲ್ಲಿ ಆಯೋಜಿಸಿದ 24ನೇ ವರ್ಷದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕೆಎಂಸಿ ವೈದ್ಯ ಡಾ.ಶಿಜು ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಸಂಚಾಲಕ ಬೆಳ್ತಂಗಡಿ ಗಣೇಶಕೃಷ್ಣ ಭಟ್ ಶುಭ ಕೋರಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಲಕ್ಷ್ಮೀನಾರಾಯಣ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಶಿಬಿರದಲ್ಲಿ 47 ಯುನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು. 

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಆದಿತ್ಯ ಶೆಟ್ಟಿ , ಸಲಹೆಗಾರ ಗಣಪತಿ ಭಟ್ ಯಂ. ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು , ಸದಸ್ಯರು, ಬೆಸೆಂಟ್ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪದ್ಮಜ ಪ್ರಾರ್ಥಿಸಿದರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ಪ್ರದೀಪ್ ವಂದಿಸಿದರು. ಪ್ರಣವ್ ಗಣೇಶ್ ನಿರೂಪಿಸಿದರು.

The Alumni association of Besant Evening College Organized Blood Camp 2021 at the College Auditorium in Mangalore.