ನಗದು, ಚಿನ್ನಾಭರಣಗಳಿದ್ದ ಬ್ಯಾಗ್ ವಾರೀಸುದಾರರಿಗೆ ಮರಳಿಸಿದ ರೈಲ್ವೆ ಅಧಿಕಾರಿ !

16-02-21 10:08 am       Mangalore Correspondent   ಕರಾವಳಿ

ರೈಲಿನಲ್ಲಿ ಕಳೆದು ಹೋಗಿದ್ದ ನಗದು ಮತ್ತು ಚಿನ್ನಾಭರಣಗಳನ್ನು ಹೊಂದಿದ್ದ ಪ್ರಯಾಣಿಕರ ಬ್ಯಾಗನ್ನು ಟಿಕೆಟ್ ಚೆಕ್ಕರ್ ಇನ್ಸ್‌ಪೆಕ್ಟರ್ ಮುರಲೀಧರನ್ ಎಂ. ಮರಳಿ ವಾರೀಸುದಾರರಿಗೆ ತಲುಪಿಸಿದರು. 

ಮಂಗಳೂರು, ಫೆ.16: ರೈಲಿನಲ್ಲಿ ಕಳೆದು ಹೋಗಿದ್ದ ನಗದು ಮತ್ತು ಚಿನ್ನಾಭರಣಗಳನ್ನು ಹೊಂದಿದ್ದ ಪ್ರಯಾಣಿಕರ ಬ್ಯಾಗನ್ನು ಟಿಕೆಟ್ ಚೆಕ್ಕರ್ ಇನ್ಸ್‌ಪೆಕ್ಟರ್ ಮುರಲೀಧರನ್ ಎಂ. ಮರಳಿ ವಾರೀಸುದಾರರಿಗೆ ತಲುಪಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ. ಅವರಿಗೆ ಪಾಲಕ್ಕಾಡ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ತ್ರಿಲೋಕ್ ಕೊಠಾರಿ ಪ್ರಮಾಣಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಿದರು. 

ಫೆ.11ರಂದು ರೈಲು ಸಂಖ್ಯೆ 06629 ತಿರುವನಂತಪುರಂ - ಮಂಗಳೂರು ಸೆಂಟ್ರಲ್ ಸ್ಪೆಷಲ್ ಎಕ್ಸ್‌ಪ್ರೆಸ್ (ಮಲಬಾರ್ ಸ್ಪೆಷಲ್) ನಲ್ಲಿ‌ ಟಿಟಿ ಇನ್ಸ್‌ಪೆಕ್ಟರ್ ಮುರಳೀಧರನ್ ಎಂ. ಕರ್ತವ್ಯದಲ್ಲಿದ್ದ ವೇಳೆ ಪ್ರಯಾಣಿಕರೊಬ್ಬರು ನಗದು ಮತ್ತು ಚಿನ್ನಾಭರಣಗಳ ಬ್ಯಾಗ್​ ಕಳೆದುಕೊಂಡಿದ್ದರು. ಈ ಬ್ಯಾಗನ್ನು ಟಿಟಿ ಅಧಿಕಾರಿ ಪತ್ತೆಹಚ್ಚಿ ಮರಳಿ ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದರು.

ಈ ಹಿನ್ನೆಲೆ ಸೋಮವಾರ ನಡೆದ ವಿಭಾಗೀಯ ಸುರಕ್ಷತಾ ಸಭೆಯಲ್ಲಿ ಪಾಲಕ್ಕಾಡ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ತ್ರಿಲೋಕ್ ಕೊಠಾರಿಯವರು ಮುರಲೀಧರನ್ ಎಂ. ಅವರಿಗೆ ಪ್ರಮಾಣಪತ್ರ ಮತ್ತು ನಗದು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.