ಬ್ರೇಕಿಂಗ್ ನ್ಯೂಸ್
17-02-21 01:23 pm Mangaluru Correspondent ಕರಾವಳಿ
ಮಂಗಳೂರು, ಫೆ.17: ಮಂಗಳೂರಿನಲ್ಲಿ ನಾಲ್ಕು ಮೆಡಿಕಲ್ ಕಾಲೇಜು ಮುಖ್ಯಸ್ಥರನ್ನು ಗುರಿಯಾಗಿರಿಸಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಇಡೀ ಕಾರ್ಯಾಚರಣೆಯನ್ನು ತುಂಬ ರಹಸ್ಯವಾಗಿ ಇರಿಸಿದ್ದಾರೆ.
ನಿನ್ನೆ ಸಂಜೆಗೆ ಮಂಗಳೂರಿಗೆ ಆಗಮಿಸಿದ್ದ 250ಕ್ಕೂ ಹೆಚ್ಚು ಅಧಿಕಾರಿಗಳಿದ್ದ ತಂಡ ನಿಗೂಢ ಜಾಗದಲ್ಲಿ ಬೀಡು ಬಿಟ್ಟಿದ್ದರು. ಗೋವಾ, ಕೇರಳ, ತಮಿಳ್ನಾಡು ಸೇರಿದಂತೆ ರಾಜ್ಯದ ಬೆಂಗಳೂರು, ಬೆಳಗಾವಿ ಹೀಗೆ ವಿವಿಧೆಡೆಯ ಐಟಿ ಅಧಿಕಾರಿಗಳು ತಂಡದಲ್ಲಿದ್ದರು. ಮಂಗಳೂರು ಒಂದರಲ್ಲೇ 60ಕ್ಕೂ ಹೆಚ್ಚು ಬಾಡಿಗೆ ಕಾರುಗಳನ್ನು ಬುಕ್ ಮಾಡಲಾಗಿತ್ತು. ವಿಶೇಷ ಅಂದ್ರೆ, ಕಾರು ಚಾಲಕರಿಗೂ ದಾಳಿ ಬಗ್ಗೆ ಮಾಹಿತಿ ನೀಡಿರಲಿಲ್ಲ.
ಬೇರೆ ಬೇರೆ ತಂಡಗಳಲ್ಲಾಗಿ ನಸುಕಿನ 5 ಗಂಟೆ ವೇಳೆಗೆ ಕಾರುಗಳಲ್ಲಿ ಹೊರಟಿದ್ದ ಅಧಿಕಾರಿಗಳು ತಮ್ಮ ಕಾರುಗಳ ಮುಂದೆ ಇಂಟರ್ ಸ್ಟೇಟ್ ಫುಟ್ಬಾಲ್ ಟೂರ್ನಮೆಂಟ್ ಎಂದು ಸ್ಟಿಕ್ಕರ್ ಹಾಕ್ಕೊಂಡಿದ್ದರು. ಚಾಲಕರು ಕೇಳಿದ್ದಕ್ಕೆ ಕೇರಳದಲ್ಲಿ ಫುಟ್ಬಾಲ್ ಟೂರ್ನಮೆಂಟ್ ಇದೆ, ಅಲ್ಲಿಗೆ ಹೋಗಲಿಕ್ಕಿದೆ ಎಂದು ಹೇಳಿದ್ದರಂತೆ.
ಅಧಿಕಾರಿಗಳು ಹೇಳಿದ ಜಾಗಕ್ಕೆ ಕಾರುಗಳು ತೆರಳಿದ್ದು, ಅದರಲ್ಲಿ ಕೆಲವು ಖಾಸಗಿ ವಾಹನಗಳು ಕೂಡ ಇದ್ದವು. ರಾಜ್ಯದಲ್ಲಿ ನಾಲ್ಕೈದು ಜಿಲ್ಲೆಗಳಲ್ಲಿ ಹತ್ತಕ್ಕೂ ಹೆಚ್ಚು ಕಡೆ ದಾಳಿ ನಡೆದಿದ್ದು, ಮಂಗಳೂರಿನಿಂದ ಯಾವೆಲ್ಲಾ ಕಡೆಗಳಿಗೆ ಅಧಿಕಾರಿಗಳು ಹೊರಟಿದ್ದಾರೆ ಎನ್ನುವುದು ಗೊತ್ತಾಗಿಲ್ಲ.
ತುಮಕೂರು, ದಾವಣಗೆರೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಸೇರಿದ ಮೆಡಿಕಲ್ ಕಾಲೇಜುಗಳು ಕೂಡ ದಾಳಿಗೆ ಒಳಗಾಗಿದ್ದು, ಮಂಗಳೂರು ಒಂದರಲ್ಲೇ ನಾಲ್ಕು ಮೆಡಿಕಲ್ ಕಾಲೇಜುಗಳಿಗೆ ದಾಳಿ ನಡೆದಿರುವುದು ಖಚಿತವಾಗಿದೆ. ಕಾಲೇಜು ಮುಖ್ಯಸ್ಥರ ಮನೆ ಮತ್ತು ಕಚೇರಿಗೆ ದಾಳಿ ನಡೆದಿದ್ದು, ಅಗತ್ಯ ಕಂಡುಬಂದರೆ ಆಸ್ಪತ್ರೆ, ಕಾಲೇಜುಗಳಿಗೂ ದಾಳಿ ನಡೆಸುವ ಸಾಧ್ಯತೆ ಇದೆ. ಪ್ರಾಥಮಿಕವಾಗಿ ಕಾಲೇಜು ಮುಖ್ಯಸ್ಥರನ್ನು ಕೋಣೆಯಲ್ಲಿ ಕೂಡಿ ಹಾಕಿ, ಪ್ರಶ್ನೆಗಳನ್ನು ಮುಂದಿಡುತ್ತಾರೆ. ಜೊತೆಗೆ, ಇವೆಲ್ಲ ಕುಟುಂಬಸ್ಥರಿಂದಲೇ ನಡೆಸುವ ಕಾಲೇಜುಗಳಾಗಿರುವುದರಿಂದ ಇದರಲ್ಲಿ ಪ್ರಮುಖ ಉಸ್ತುವಾರಿಗಳನ್ನು ಕುಟುಂಬದ ಪ್ರಮುಖರೇ ನಡೆಸುತ್ತಾರೆ. ಅವರನ್ನು ವಶಕ್ಕೆ ಪಡೆದು, ಮೊಬೈಲ್ ತೆಗೆದಿರಿಸಿ ವಿಚಾರಣೆ ನಡೆಸುತ್ತಾರೆ.
ಮಂಗಳೂರಿನಲ್ಲಿ ಎಜೆ ಶೆಟ್ಟಿ, ಯೇನಪೋಯ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಾಗಿದ್ದು, ಇದರ ಮಾಲೀಕರು ಯಾವುದೇ ಪಕ್ಷದ ಜೊತೆ ಗುರುತಿಸಿಕೊಂಡಿರಲಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರ ಜೊತೆಗೆ ಆಪ್ತ ಸಂಬಂಧ ಇರಿಸಿಕೊಂಡಿದ್ದಾರೆ.
Income tax raid on Medical Colleges in Mangalore. Officers book 60 taxi cars stating that they have a football tournament to prevent the leak of information.
06-10-25 10:47 pm
Bangalore Correspondent
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 10:42 pm
Mangalore Correspondent
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
07-10-25 10:31 am
HK News Desk
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm