ಬ್ರೇಕಿಂಗ್ ನ್ಯೂಸ್
18-02-21 12:44 pm Mangaluru Correspondent ಕರಾವಳಿ
ಉಳ್ಳಾಲ, ಫೆ.18: ತಲಪಾಡಿಯ ಟೋಲ್ ಸಿಬ್ಬಂದಿಗಳು ಸ್ಥಳೀಯರ ಮೇಲೆ ನಡೆಸುತ್ತಿರುವ ಗೂಂಡಾಗಿರಿ ದಿನೇ ದಿನೇ ಜಾಸ್ತಿಯಾಗಿದ್ದು ಇವರಿಗೆ ಬುದ್ಧಿ ಕಲಿಸುವ ಗೆರಿಲ್ಲಾ ಯುದ್ಧ ಅನಿವಾರ್ಯ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನಯ್ ನಾಯ್ಕ್ ತಲಪಾಡಿ ಗುಡುಗಿದ್ದಾರೆ.
ಟೋಲ್ ಗೇಟ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯದ ನೆಪದಲ್ಲಿ ಸ್ಥಳೀಯರಿಂದಲೂ ಶುಲ್ಕ ಪೀಕಿಸುತ್ತಿರುವ ತಲಪಾಡಿ ಟೋಲ್ ಗೇಟ್ ವಿರುದ್ಧ ಗಡಿನಾಡು ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸ್ಥಳೀಯ ನಾಗರಿಕ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ತಲಪಾಡಿ ಪ್ರದೇಶಕ್ಕೆ ಟೋಲ್ ಗೇಟ್ ಶಾಪವಾಗಿ ಪರಿಣಮಿಸಿದೆ. ಸ್ಥಳೀಯರೇ ಇಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು ದೂರದ ಆಂಧ್ರದ ಕಂಪನಿ ಜೊತೆ ಸೇರಿ ಸ್ಥಳೀಯರ ಮೇಲೆ ಪ್ರಹಾರ ನಡೆಸುತ್ತಿದ್ದಾರೆ. ಸ್ಥಳೀಯ ಟೋಲ್ ಸಿಬ್ಬಂದಿಗಳು ನಮ್ಮಲ್ಲೊಂದು, ಅಧಿಕಾರಿಗಳಲ್ಲೊಂದು ಮಾತನಾಡುವ ಕಪಟ ನಾಟಕವಾಡುತ್ತಿದ್ದಾರೆ. ಟೋಲ್ ಸಿಬ್ಬಂದಿ ವಾಹನ ಸವಾರರಲ್ಲಿ ಉದ್ಧಟತನ ತೋರಿದರೆ ಅವರು ನಮ್ಮಲ್ಲಿಗೆ ಬರುವಾಗ ಬುದ್ಧಿ ಕಲಿಸಿಯೇ ಗೆರಿಲ್ಲಾ ಯುದ್ಧ ಮಾಡುವಂತೆ ವಿನಯ ನಾಯ್ಕ್ ಜನತೆಗೆ ಕರೆ ನೀಡಿದರು.
ಎರಡು, ಮೂರು ಸಿಟಿ ಬಸ್ಸುಗಳು ಟೋಲ್ ಹಾದು ಹೋಗುತ್ತವೆ, ಉಳಿದ ಬಸ್ಸುಗಳು ಟೋಲ್ ಗೇಟ್ ದಾಟದೆ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸಿ ಹೋಗುವುದು ಯಾಕೆ..?ಮೊದಲಿನಂತೇ ಬಸ್ಸುಗಳು ಮೇಲಿನ ತಲಪಾಡಿ ವರೆಗೆ ಹೋಗಿ ಪ್ರಯಾಣಿಕರನ್ನು ಇಳಿಸಲಿ. ನಮ್ಮ ಹೋರಾಟ ನ್ಯಾಯಯುತವಾಗಿದ್ದು ಪೊಲೀಸರು ಕೂಡ ಸ್ಥಳೀಯರ ಹೋರಾಟಕ್ಕೆ ರಕ್ಷಣೆ ನೀಡಬೇಕೆಂದರು.
ತಾಪಂ ಸದಸ್ಯೆ ಸುರೇಖಾ ಚಂದ್ರಹಾಸ್ ಮಾತನಾಡಿ ಸ್ಥಳೀಯರು ಬಿಟ್ಟು ಕೊಟ್ಟ ಜಾಗದಲ್ಲೇ ಟೋಲ್ ನಿರ್ಮಿಸಿದ್ದು ಇಂದು ಇಲ್ಲಿನ ಜನರೇ ದಿನನಿತ್ಯ ಸುಂಕ ಕಟ್ಟಿ ಚಲಿಸಬೇಕಾದರೆ ನಾವಿಲ್ಲಿ ಇರೋದು ಯಾಕೆ..? ಇಲ್ಲಿ ಟೋಲ್ ನಿರ್ಮಾಣವಾಗೋದನ್ನು ಅವತ್ತೇ ತಡೆದಿದ್ದಲ್ಲಿ ಈ ದುಸ್ಥಿತಿ ಬರುತ್ತಿರಲಿಲ್ಲ. ತಾಪಂನಲ್ಲಿ ನಡೆಯುವ ಸಭೆಗಳಿಗೆ ಟೋಲ್ ಅಧಿಕಾರಿಗಳನ್ನು ಕರೆದರೆ ಭಾಗವಹಿಸುವ ನೈತಿಕತೆ ಅವರಲ್ಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟೋಲ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ
ಪ್ರತಿಭಟನೆಯ ನಡುವೆ ಟೋಲ್ ಗೇಟ್ ದಾಟುತ್ತಿದ್ದ ಕಾರು ಸವಾರರೊಬ್ಬರಲ್ಲಿ ಫಾಸ್ಟ್ ಟ್ಯಾಗ್ ಇರಲಿಲ್ಲ. ಟೋಲ್ ಸಿಬ್ಬಂದಿ ಅವರಲ್ಲಿ 80 ರೂಪಾಯಿ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿದ್ದಾಗ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿ 40 ರೂಪಾಯಿ ನೀಡುವಂತೆ ಚಾಲಕನಲ್ಲಿ ಹೇಳಿದ್ದಾರೆ. ಅಲ್ಲದೆ ಅರ್ಧಕ್ಕೆ ಪ್ರಯಾಣಿಕರನ್ನು ಇಳಿಸುತ್ತಿದ್ದ ತಲಪಾಡಿ ಸಿಟಿ ಬಸ್ಸೊಂದನ್ನು ಟೋಲ್ ದಾಟಿಸಿದ್ದಾರೆ. ಈ ವೇಳೆ ಟೋಲ್ನ ಸ್ಥಳೀಯ ಸಿಬ್ಬಂದಿ ಶಿವ ಎಂಬವರು ಪ್ರತಿಭಟನಾಕಾರರಲ್ಲಿ ಉದ್ಧಟತನ ತೋರಿಸಿದ್ದು, ಮಾತಿನ ಚಕಮಕಿ, ತಳ್ಳಾಟ ನಡೆದಿದೆ.
ಗಾಂಧಿ ಮಾರ್ಗ ಬೋಸರ ಹಾದಿ ಹಿಡಿಯುತ್ತೇವೆ
ಬಳಿಕ ಪ್ರತಿಭಟನಾಕಾರರು, ಟೋಲ್ ಮುಖ್ಯಸ್ಥರು, ಪೊಲೀಸರು ಸೇರಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಮಾತನಾಡಿದ ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ, ನಾಳೆ ಸಂಜೆ ತನಕ ಟೋಲ್ ನವರಿಗೆ ಸಮಯ ನೀಡಿದ್ದು ಸ್ಥಳೀಯರ ರಿಯಾಯಿತಿ ಹಿಂದಿನ ರೀತಿಯಲ್ಲೇ ಯಥಾಸ್ಥಿತಿ ಕಾಪಾಡಲು ಕೋರಲಾಗಿದೆ. ಅಲ್ಲದೆ ಎಲ್ಲ ಸಿಟಿ ಬಸ್ಸುಗಳು ಪ್ರಯಾಣಿಕರಿಗೆ ತೊಂದರೆ ನೀಡದೆ ಟೋಲ್ ಹಾದು ಮೇಲಿನ ತಲಪಾಡಿಗೆ ಹೋಗುವಂತಾಗಬೇಕು. ಆಗದಿದ್ದರೆ ಸರಕಾರಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಬೇಕು. ಈ ಎರಡು ಬೇಡಿಕೆ ಈಡೇರದಿದ್ದಲ್ಲಿ ಗಾಂಧಿ ಮಾರ್ಗ ಬಿಟ್ಟು ಸುಭಾಸರ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಪಂ ಸದಸ್ಯ ಸಿದ್ದೀಕ್ ಕೊಳಂಗೆರೆ, ಗ್ರಾಪಂ ಸದಸ್ಯರಾದ ವೈಭವ್ ಶೆಟ್ಟಿ, ಪ್ಲೇವಿ ಡಿಸೋಜ, ಸ್ಥಳೀಯರಾದ ವಾಣಿ ಪೂಜಾರಿ, ನಝೀಮ, ಶಾನು ಶೆಟ್ಟಿ, ಗೋಪಾಲ ತಚ್ಚಾಣಿ ಮೊದಲಾದವರು ಪ್ರತಿಭಟನೆಯಲ್ಲಿದ್ದರು.
The residents of Talapdy have blocked the talapdy toll gate alleging misconduct of staffs in the name of fastag and also looting money in the name of fine.
05-09-25 11:15 pm
Bangalore Correspondent
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
ಕಾಂಗ್ರೆಸಿನ ಯಾರ ಮನೆಯ ನಾಯಿ ಸ್ವಾತಂತ್ರ್ಯಕ್ಕಾಗಿ ಹೋ...
03-09-25 09:00 pm
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
05-09-25 08:12 pm
Mangalore Correspondent
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
06-09-25 01:58 pm
Udupi Correspondent
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am
Mangalore Cow Slaughter, Crime, Arrest: ಪೆರ್ನ...
05-09-25 10:53 pm
Mukka Murder, Mangalore, Crime: ಪತ್ನಿಯ ಅಶ್ಲೀಲ...
05-09-25 10:26 pm
Atm robbery, Ullal, Kotekar, Mangalore: ಕೋಟೆಕ...
05-09-25 08:36 pm