ಬ್ರೇಕಿಂಗ್ ನ್ಯೂಸ್
19-02-21 02:36 pm Mangalore Correspondent ಕರಾವಳಿ
ಉಳ್ಳಾಲ, ಫೆ.19 : ಸ್ವಾವಲಂಬನೆ ಮತ್ತು ಅತ್ಯಧಿಕ ಇಳುವರಿ ತರುವ ಗೇರು ಕೃಷಿ ಅಭಿವೃದ್ಧಿಯ ಉತ್ತೇಜನದ ಕಾರ್ಯಕ್ರಮ ನಮ್ಮಲ್ಲಿ ತೀರಾ ಕಡಿಮೆ. ಸರಕಾರಗಳನ್ನೇ ಅವಲಂಬಿಸದೆ ಖಾಸಗಿ ಅಥವಾ ಎನ್ ಜಿಓ ಪ್ರಾಯೋಜಕತ್ವದಲ್ಲಿ ಉತ್ತೇಜನ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕೆಂದು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಣಿರಾಜ್ ಶೆಟ್ಟಿ ಹೇಳಿದರು.
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಕಾಪಿಕಾಡ್ ಉಳ್ಳಾಲ, ಮಂಗಳೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್, ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮ ಮಂಗಳೂರು, ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಸಂಘ ಮಂಗಳೂರು, ತೋಟಗಾರಿಕೆ ಇಲಾಖೆ ದ.ಕ, ಕೃಷಿ ಇಲಾಖೆ ದ.ಕ, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಮತ್ತು ಬ್ರಹ್ಮಾವರ, ಜಿಲ್ಲಾ ಕೃಷಿಕ ಸಮಾಜ ದ.ಕ, ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಉಳ್ಳಾಲ ಕಾಪಿಕಾಡಿನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನಡೆದ "ಗೇರು ಮೇಳ 2021" ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಕೃಷಿ ಪ್ರಧಾನವಾಗಿದ್ದು 75 ಶೇಕಡಾ ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ಕರಾವಳಿ ಭಾಗದ ಸಂಪಾಜೆಯಿಂದ- ಕಾರವಾರದ ವರೆಗೆ ಗೇರು ಇಳುವರಿ ತೋಟಗಾರಿಕಾ ಬೆಳೆಯಾಗಿತ್ತು. ಆದರೆ ಇತ್ತೀಚೆಗೆ ಬೆಳಗಾವಿ ಮತ್ತು ಕೋಲಾರದಲ್ಲಿ ಗೇರು ಕೃಷಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ನಮ್ಮ ದೇಶದಲ್ಲಿ ಕೇವಲ 50,000 ಮೆಟ್ರಿಕ್ ಟನ್ ಗೇರು ಬೆಳೆಯಲಾಗುತ್ತಿದೆ. ವಿದೇಶದಿಂದ 2.50 ಲಕ್ಷ ಮೆಟ್ರಿಕ್ ಟನ್ ಗೇರು ಆಮದಿನಿಂದ ವಿದೇಶಿ ವಿನಿಮಯ ನಷ್ಟವಾಗುತ್ತಿದೆ. ವಿಯೆಟ್ನಾಂ ಎಂಬ ಚಿಕ್ಕ ರಾಷ್ಟ್ರವು ಇಂದು 4.50 ಲಕ್ಷ ಮೆಟ್ರಿಕ್ ಟನ್ ಗೇರು ಉತ್ಪಾದಿಸಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿರಲು ಅಲ್ಲಿ ಗೇರು ಬೆಳೆಗೆ ಸಿಗುತ್ತಿರುವ ಉತ್ತೇಜನವೇ ಕಾರಣ ಎಂದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಸಂಪತ್ ಸಾಮ್ರಾಜ್ಯ ಮಾತನಾಡಿ ಗೇರು ಕೃಷಿ ಅಭಿವೃದ್ಧಿಗಾಗಿ ಕೃಷಿ ಪದ್ಧತಿಯಲ್ಲಿ ನೂತನ ಪ್ರಯೋಗಗಳನ್ನು ಮಾಡಬೇಕಿದೆ. ಗೇರು ಕೃಷಿಯಲ್ಲಿ ಸಾಂಧ್ರ ಬೇಸಾಯ ಪದ್ಧತಿಯನ್ನು ಅಳವಡಿಸಿದಲ್ಲಿ ಗೇರು ಇಳುವರಿಯೂ ಹೆಚ್ಚುವುದು. ಸಾಂಧ್ರ ಗೇರು ಬೇಸಾಯ ಪದ್ಧತಿಯು ಬೆಂಗಳೂರಿನಲ್ಲಿ ಯಶಸ್ವಿಯಾಗಿದ್ದು ದ.ಕ ಜಿಲ್ಲೆಯ ಪುತ್ತೂರಲ್ಲೂ ಪ್ರಗತಿಯಲ್ಲಿದೆ ಎಂದರು.
ಪ್ರಗತಿಪರ ಕೃಷಿಕರಾದ ದೇರ್ಲ ಕರುಣಾಕರ ರೈ, ನಟೇಶ್ ಎಂ, ಬ್ಲಾನಿ ಡಿ ಸೋಜ, ರಾಜವರ್ಮ ಬೈಲಂಗಡಿ, ಮಹೇಶ್ ಯು.ಎಸ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ.ಎಂ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಸಂಘದ ಮಂಗಳೂರು ಅಧ್ಯಕ್ಷರಾದ ಸಂತೋಷ್ ಡಿ.ಸಿಲ್ವ , ಬ್ರಹ್ಮಾವರ ಕೃ.ತೋ. ಸಂಶೋಧನಾ ಕೇಂದ್ರದ ಸಹ ನಿರ್ದೇಶಕರಾದ ಡಾ.ಲಕ್ಷ್ಮಣ , ಮಂಗಳೂರು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಡಾ.ಸೀತಾ ಎಂ.ಸಿ , ಮಂಗಳೂರು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಎಚ್.ಆರ್.ನಾಯಕ್ , ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ಧನಕೀರ್ತಿ ಬಲಿಪ, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ಬ್ರಹ್ಮಾವರ ಕೃಷಿ ಡಿಪ್ಲೋಮ ಕಾಲೇಜು ಪ್ರಾಂಶುಪಾಲ ಸುಧೀರ್ ಕಾಮತ್, ಬ್ರಹ್ಮಾವರ ಕೃಷಿ ವಿಜ್ನಾನ ಕೇಂದ್ರದ ಹಿರಿಯ ವಿಜ್ಞಾನಿಗಳಾದ ಡಾ.ಬಿ.ಧನಂಜಯ್, ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಟಿ.ಜೆ ರಮೇಶ್ ಉಪಸ್ಥಿತರಿದ್ದರು.
ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ರವಿರಾಜ್ ಶೆಟ್ಟಿ ಜಿ. ಸ್ವಾಗತಿಸಿದರು.ಪ್ರವೀಣ್ ಎಸ್ .ಕುಂಪಲ ನಿರೂಪಿಸಿದರು.
26-11-24 11:52 am
HK News Desk
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm