ಬ್ರೇಕಿಂಗ್ ನ್ಯೂಸ್
24-02-21 04:59 pm Mangaluru correspondant ಕರಾವಳಿ
ಮಂಗಳೂರು, ಫೆ.24: ಕೋವಿಡ್ ಭೀತಿಯಲ್ಲಿ ಕೇರಳದ ಕಡೆಯಿಂದ ಬರುವ ಮಂದಿಗೆ ಗಡಿ ನಿರ್ಬಂಧಿಸುವ ಆದೇಶದಿಂದ ಉಸಿರು ಕಟ್ಟಿದ್ದ ಕಾಸರಗೋಡು ನಿವಾಸಿಗಳಿಗೆ ಡಿಸಿಎಂ ಅಶ್ವತ್ಥ ನಾರಾಯಣ್ ರಿಲೀಫ್ ನೀಡಿದ್ದಾರೆ.
ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಅಶ್ವತ್ಥ್ ನಾರಾಯಣ ಬಳಿ ಈ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಸರಗೋಡಿನಿಂದ ಅತಿ ಹೆಚ್ಚು ಮಂದಿ ಮಂಗಳೂರನ್ನು ಆಶ್ರಯಿಸಿದ್ದಾರೆ. ದಿನವೂ ಬಂದು ಹೋಗುವ ಮಂದಿಯನ್ನು ಎಷ್ಟೂಂತ ಪರೀಕ್ಷೆಗೆ ಒಳಪಡಿಸಬೇಕು. ದಿನಾ ಬರುವ ಮಂದಿ ಎಲ್ಲಿಂದ ನೆಗೆಟಿವ್ ರಿಪೋರ್ಟ್ ತರಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ನಿತ್ಯ ಶಾಲೆ, ಕಾಲೇಜು, ಉದ್ಯೋಗಕ್ಕೆಂದು ಬರುವ ಕಾಸರಗೋಡಿನ ಮಂದಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯದಿಂದ ರಿಲೀಫ್ ಕೊಡಲಾಗುವುದು. ಅವರಿಗೆ ನೆಗೆಟಿವ್ ರಿಪೋರ್ಟ್ ಬದಲು ಆರೋಗ್ಯ ಸೇತು ಏಪ್ ನಲ್ಲಿ ಮಾನಿಟರ್ ಮಾಡುವಂತೆ ಆಗಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಚಿವ ಸುಧಾಕರ್ ಗೆ ತಿಳಿಸುತ್ತೇನೆ. ಇದರ ಬದಲು, ಇಲ್ಲೇ ಬಂದು ಇರೋರು ಕಡ್ಡಾಯ ನೆಗೆಟಿವ್ ವರದಿ ಹೊಂದಿರಬೇಕು ಎಂದು ಹೇಳಿದರು.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಮೈತ್ರಿ ಬಗ್ಗೆ ಆಯಾ ಪಕ್ಷದವರು ನಿರ್ಧಾರ ಮಾಡುತ್ತಾರೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಒಳ್ಳೆಯದೇ. ನಾವು ಮಾಡಿಕೊಳ್ಳಿ ಅಂತಲೇ ಹೇಳುತ್ತೇವೆ. ಅವರು ಒಟ್ಟಿಗೆ ಹೋಗುವುದಾದರೆ ನಮಗೇನು ಸಮಸ್ಯೆ ಇಲ್ಲ. ಅವರ ಪಕ್ಷದ ನಿಲುವನ್ನು ಕುಮಾರಸ್ವಾಮಿಯವರು ನಿಶ್ಚಯ ಮಾಡಿಕೊಳ್ಳಬೇಕು.
ಸ್ಥಳೀಯ ಒಡಂಬಡಿಕೆ, ಒಪ್ಪಂದಗಳನ್ನು ಅನುಸರಿಸಿ ಮೈತ್ರಿ ಮಾಡಿಕೊಳ್ಳುತ್ತಾರೆ. ಕಾಲಕ್ರಮೇಣ ಈ ಮೈತ್ರಿಯಿಂದ ಏನಾಗುತ್ತೆ ಅಂತ ಅವರಿಗೆ ಗೊತ್ತಿದೆ. ಕಾಂಗ್ರೆಸ್ ಜೊತೆ ಸರಕಾರ ಮಾಡಿ, ಏನಾಯ್ತು ಅನ್ನೋದು ಅವರಿಗೆ ಗೊತ್ತಿದೆ. ಅದರ ಅನುಭವ ಕುಮಾರಸ್ವಾಮಿಗೆ ಇದೆ. ಕಾಂಗ್ರೆಸ್ ಪಕ್ಷ ಜೆಡಿಎಸ್ ಅನ್ನು ಹೇಗೆ ನುಂಗಿಕೊಳ್ಳೋ ಪ್ರಯತ್ನ ಮಾಡಿದ್ದಾರೆ ಅನ್ನೋದನ್ನು ನೋಡಿಕೊಳ್ಳಬೇಕು. ತಮ್ಮ ಪಕ್ಷ ಉಳಿಸಿಕೊಳ್ಳಲು ಕುಮಾರಸ್ವಾಮಿ ಯೋಚನೆ ಮಾಡಲಿ ಎಂದು ಹೇಳಿದರು.
ತಲಪಾಡಿ ಟೋಲ್ ಬಹಿಷ್ಕರಿಸಿ ಸ್ಥಳೀಯರ ಪ್ರತಿಭಟನೆ ; ಗೂಂಡಾಗಿರಿಗೆ ಬುದ್ಧಿ ಕಲಿಸಲು ರೆಡಿ ಎಂದ ಜನ !
Covid Negative report test not mandatory for those entering Mangalore from Kerala state orders DCM Ashwath Narayan in Mangalore.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm