ಬ್ರೇಕಿಂಗ್ ನ್ಯೂಸ್
24-02-21 08:39 pm Mangaluru correspondant ಕರಾವಳಿ
ಮಂಗಳೂರು, ಫೆ.24: ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬರುವ ಮಂದಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಆದರೆ, ಈ ರೀತಿಯ ಆದೇಶ ಮಾಡಿದ್ದರೂ, ಮುಂಬೈ ಕಡೆಯಿಂದ ಬರುವ ಪ್ಯಾಸೆಂಜರ್ ಬಸ್ ಗಳು ಈಗ ಒಳದಾರಿಯಿಂದ ಕರ್ನಾಟಕಕ್ಕೆ ಬರುತ್ತಿರುವುದಾಗಿ ದೂರು ಕೇಳಿಬಂದಿದೆ.
ಮಂಗಳೂರಿನಿಂದ ವಯಾ ಬೆಳಗಾವಿ ಮೂಲಕ ಮುಂಬೈಗೆ ದಿನವೂ 18 ಬಸ್ ಗಳು ಸಂಚರಿಸುತ್ತವೆ. ದಿನವೂ ಮಂಗಳೂರಿನಿಂದ ತೆರಳುವ ಬಸ್, ಅಷ್ಟೇ ಸಂಖ್ಯೆಯಲ್ಲಿ ಮುಂಬೈನಿಂದ ಮಂಗಳೂರಿಗೆ ಹಿಂತಿರುಗಿ ಬರುತ್ತದೆ. ಈ ಬಸ್ ಗಳೆಲ್ಲ ಸಾಮಾನ್ಯವಾಗಿ ಬೆಳಗಾವಿಯಿಂದ ಕೊಲ್ಲಾಪುರ ಚೆಕ್ ಪೋಸ್ಟ್ ಮೂಲಕವೇ ಹೋಗುವುದು ಮತ್ತು ಬರುವುದನ್ನು ಮಾಡುತ್ತದೆ. ಆದರೆ, ಈಗ ಕೋವಿಡ್ ನಿರ್ಬಂಧ ವಿಧಿಸಿರುವ ಕಾರಣ ಕೊಲ್ಲಾಪುರ ಚೆಕ್ ಪೋಸ್ಟ್ ನಲ್ಲಿ ಕರ್ನಾಟಕದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮಹಾರಾಷ್ಟ್ರದಿಂದ ಬರುವ ಬಸ್ ಗಳನ್ನು ತಡೆಯಲಾಗುತ್ತದೆ.
ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿ ಹೊಂದಿದ್ದಾರೆಯೇ ಎನ್ನುವ ಬಗ್ಗೆ ತಪಾಸಣೆ ಮಾಡಲಾಗುತ್ತದೆ. ಆದರೆ, 72 ಗಂಟೆಗಳ ಹಿಂದೆ ಪಡೆದ ನೆಗೆಟಿವ್ ರಿಪೋರ್ಟ್ ಹೆಚ್ಚಿನ ಮಂದಿಯಲ್ಲಿ ಇರುವುದಿಲ್ಲ. ಹೀಗಾಗಿ ಬಸ್ ಗಳನ್ನು ಕೊಲ್ಲಾಪುರದಿಂದ ಕರ್ನಾಟಕ ಪ್ರವೇಶ ಮಾಡಲು ಬಿಡುವುದಿಲ್ಲ. ಅಧಿಕಾರಿಗಳ ಕಿರಿ ಕಿರಿಯನ್ನು ತಪ್ಪಿಸುವುದಕ್ಕಾಗಿ ಈಗ ಮಂಗಳೂರಿನ ಬಸ್ ಗಳು ಒಳದಾರಿಯನ್ನು ಕಂಡುಕೊಂಡಿವೆ ಎನ್ನುತ್ತಾರೆ, ಪ್ರಯಾಣಿಕರು.
ಕೊಲ್ಲಾಪುರ ಹೈವೇ ಬದಲಿಗೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಎಂಬಲ್ಲಿ ಕಾಡುದಾರಿ ಮೂಲಕ ಬಸ್ ಗಳು ಕರ್ನಾಟಕ ಪ್ರವೇಶ ಮಾಡುತ್ತಿದ್ದು, ಚೆಕ್ಕಿಂಗ್ ತಪ್ಪಿಸ್ಕೊಂಡು ಒಳಬರುತ್ತಿವೆ ಎನ್ನಲಾಗಿದೆ. ದಿನವೂ ಬಸ್ ಸೀಟು ಭರ್ತಿ ಮಾಡಿಕೊಂಡು ಬಂದರೆ, ಮಂಗಳೂರು ನಗರ ಒಂದಕ್ಕೆ 18 ಬಸ್ ಗಳಲ್ಲಿ ಸುಮಾರು 900 ಮಂದಿ ಬರುತ್ತಾರೆ. ಇದೇ ರೀತಿ ಬೇರೆ ಬೇರೆ ನಗರಗಳಿಗೂ ಒಳದಾರಿ ಮೂಲಕ ಬಸ್ ಗಳು ಬರುತ್ತಿದ್ದು, ಕರ್ನಾಟಕದ ಗಡಿ ನಿರ್ಬಂಧ ಹೆಸರಿಗಷ್ಟೇ ಅನ್ನುವ ಮಾತು ಕೇಳಿಬರುತ್ತಿದೆ.
ಮಹಾರಾಷ್ಟ್ರ ಮತ್ತು ಕೇರಳದಿಂದ ಆಗಮಿಸುವ ಕೋವಿಡ್ ಪೀಡಿತರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿದೆ. ಆದರೆ, ಟೂರಿಸ್ಟ್ ಬಸ್ ಗಳು ಸರಕಾರದ ಆದೇಶವನ್ನು ಗಾಳಿಗೆ ತೂರಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
It has come to light that Mangalore-Mumbai buses take shortcuts to evade check-post of Kolhapur because health officer demand covid negative report of passengers.
26-11-24 11:52 am
HK News Desk
ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ, ದೇವೇಗೌಡರಿಗೆ ಜನ ಗೌರ...
25-11-24 05:51 pm
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm