ಬ್ರೇಕಿಂಗ್ ನ್ಯೂಸ್
04-03-21 12:23 pm Mangalore Correspondent ಕರಾವಳಿ
ಉಳ್ಳಾಲ, ಮಾ.4 : ಶಿಕ್ಷಣ ಸಚಿವರ ಆದೇಶವನ್ನೇ ಧಿಕ್ಕರಿಸಿ ಮತ್ತು ಸರಕಾರದ ಕೋವಿಡ್ ನಿಯಮ ಉಲ್ಲಂಘಿಸಿ LKG, UKG ಮತ್ತು ನರ್ಸರಿ ತರಗತಿಗಳನ್ನು ಆರಂಭಿಸಿದ್ದ ತೊಕ್ಕೊಟ್ಟಿನ ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮಿ ಅವರು, ನಿಯಮ ಮೀರಿ ನಡೆಸುತ್ತಿದ್ದ ತರಗತಿಗಳಿಗೆ ಬ್ರೇಕ್ ಹಾಕಿದ್ದು ಶಾಲೆಗೆ ನೋಟೀಸು ಜಾರಿ ಮಾಡಿ ಸ್ಪಷ್ಟನೆ ನೀಡುವಂತೆ ಆದೇಶಿಸಿದ್ದಾರೆ.
ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ತಿಂಗಳಿಂದಲೇ LKG, UKG ಮತ್ತು ನರ್ಸರಿ ತರಗತಿಗಳನ್ನು ಆರಂಭಿಸಿರುವ ಬಗ್ಗೆ ಮಾಹಿತಿಗಳಿದ್ದವು. ಈ ಬಗ್ಗೆ ಹೆಡ್ ಲೈನ್ ಕರ್ನಾಟಕವು ಮಾ.2 ರಂದು ಹಿಡನ್ ಕ್ಯಾಮರಾದಲ್ಲಿ ರಿಯಾಲಿಟಿ ಚೆಕ್ ಮಾಡಿದಾಗ, ಶಾಲೆಯಲ್ಲಿ ಸಣ್ಣ ಮಕ್ಕಳಿಗೆ ತರಗತಿ ಆರಂಭಿಸಿದ್ದು ಕಂಡುಬಂದು ಅಧಿಕಾರಿಗಳ ಗಮನ ಸೆಳೆಯುವ ವರದಿ ಮಾಡಿತ್ತು. ಈ ಬಗ್ಗೆ ದ.ಕ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮಿ ಅವರ ಗಮನಕ್ಕೆ ತಂದಿದ್ದರಿಂದ ಅದೇ ದಿನ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ನಿಯಮ ಮೀರಿ LKG, UKG ತರಗತಿ ಆರಂಭಿಸಿದರೆ ಕ್ರಮ ಕೈಗೊಳ್ಳುವ ಬಗ್ಗೆ ನೋಟೀಸನ್ನು ಜಾರಿ ಮಾಡಿದ್ದರು. ಅಲ್ಲದೆ, ಸಣ್ಣ ಮಕ್ಕಳಿಗೆ ತರಗತಿಗಳನ್ನು ಆರಂಭಿಸಿದ್ದ ತೊಕ್ಕೊಟ್ಟಿನ ಸಂತ ಸೆಬಾಸ್ಟಿಯನ್ ಶಾಲೆಗೆ ರಾಜಲಕ್ಷ್ಮಿ ಭೇಟಿ ನೀಡಿದ್ದಾರೆ. ಆ ವೇಳೆ ಸಣ್ಣ ಮಕ್ಕಳ ತರಗತಿಗಳನ್ನು ನಿಲ್ಲಿಸಲಾಗಿತ್ತು. ಶಿಕ್ಷಣಾಧಿಕಾರಿಗಳು ಶಿಕ್ಷಣ ಸಂಸ್ಥೆಗೆ ನೋಟೀಸು ನೀಡಿ ಪ್ರಕರಣದ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ.
ಕೋವಿಡ್ ಹಿನ್ನಲೆಯಲ್ಲಿ ಆರನೇ ತರಗತಿಯಿಂದ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಶಾಲೆ ಆರಂಭಿಸಲು ಕರ್ನಾಟಕ ಸರಕಾರ ಆದೇಶ ಮಾಡಿತ್ತು. ಅದರಂತೆ, ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಮೇಲಿನ ಮಕ್ಕಳಿಗೆ ತರಗತಿಯನ್ನು 50 ಶೇ. ಹಾಜರಾತಿಯಲ್ಲಿ ಮಾಡಲಾಗುತ್ತಿದೆ. ಸರಕಾರದ ಸೂಚನೆಯಿದ್ದರೂ, ತೊಕ್ಕೊಟ್ಟಿನ ಸಂತ ಸೆಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆ ನಿಯಮಗಳನ್ನು ಗಾಳಿಗೆ ತೂರಿ, ಎಲ್ಕೆಜಿ ಮಕ್ಕಳಿಗೂ ತರಗತಿ ಆರಂಭಿಸಿತ್ತು. ಈ ಬಗ್ಗೆ ಪೋಷಕರಲ್ಲಿ ಪ್ರಶ್ನೆ ಮಾಡಿದಾಗ, ಶುಲ್ಕ ಕಟ್ಟಿಸಿದ್ದಾರೆ ಮತ್ತು ತರಗತಿಗೆ ಬರಲು ಹೇಳಿದ್ದಾಗಿ ತಿಳಿಸಿದ್ದರು.
ಸರಕಾರದ ನಿಯಮ ಉಲ್ಲಂಘಿಸಿ, ಸೈಂಟ್ ಸೆಬಾಸ್ಟಿಯನ್ ಶಾಲೆ ಮಾತ್ರವಲ್ಲದೆ ಉಳ್ಳಾಲ, ಮಂಗಳೂರು ನಗರ ಭಾಗದಲ್ಲಿ ಪೋಷಕರಲ್ಲಿ ಶುಲ್ಕ ಪೀಕಿಸಿ ಅನೇಕ ಶಾಲೆಗಳು LKG, UKG ತರಗತಿಗಳನ್ನು ಆರಂಭಿಸಿದ್ದಲ್ಲದೆ ಸಣ್ಣ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಬಗ್ಗೆ ಅನೇಕ ದೂರುಗಳಿದ್ದವು.
Read: ತೊಕ್ಕೊಟ್ಟಲ್ಲಿ ಶಿಕ್ಷಣ ಸಚಿವರ ಆದೇಶಕ್ಕೆ ಬೆಲೆಯಿಲ್ಲ ! ನಿಯಮ ಉಲ್ಲಂಘಿಸಿ LKG, UKG ತರಗತಿ ಆರಂಭಿಸಿದ ಖಾಸಗಿ ಶಾಲೆ !!
Education Department has issued notice to St Sabastin School Thokottu for starting LGK and UKG classes without permission. The officers became cautious after Headline Karnataka broke the news from Mangalore.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm