ಗುಂಡಿ ಅಗೆಯುತ್ತಿದ್ದಾಗ ದುರಂತ ; ಕಾರ್ಮಿಕರಿಬ್ಬರು ಮಣ್ಣಿನಡಿ ಸಿಲುಕಿ ಸಾವು !

04-03-21 02:13 pm       Mangalore Correspondent   ಕರಾವಳಿ

ಕೋಳಿ ತ್ಯಾಜ್ಯ ವಿಲೇವಾರಿಗೆಂದು ಗುಂಡಿ ಅಗೆಯುತ್ತಿದ್ದಾಗ ಗುಡ್ಡ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. 

ಪುತ್ತೂರು, ಮಾ.4 : ಇಲ್ಲಿನ ಆರ್ಲಪದವು ಸಮೀಪದ ಕಡಮ್ಮಾಜೆ ಎಂಬಲ್ಲಿ ಕೋಳಿ ತ್ಯಾಜ್ಯ ವಿಲೇವಾರಿಗೆಂದು ಗುಂಡಿ ಅಗೆಯುತ್ತಿದ್ದಾಗ ಗುಡ್ಡ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. 

ಕಡಮ್ಮಾಜೆ ಹಾಜಿ ಅಬ್ದುಲ್ಲಾ ಅವರಿಗೆ ಸೇರಿದ ಕೋಳಿ ಫಾರ್ಮ್‌ನ ತ್ಯಾಜ್ಯ ವಿಲೇವಾರಿಗೆಂದು ಗುಡ್ಡದ ಬದಿಯಲ್ಲಿ ಜೆಸಿಬಿಯಿಂದ ಹೊಂಡ ತೋಡಿದ್ದು ಈ ವೇಳೆ ಅಲ್ಲಿದ್ದ ಪೈಪ್ ತೆರವು ಮಾಡಲೆಂದು ಇಬ್ಬರು ಕಾರ್ಮಿಕರು ಗುಂಡಿಗೆ ಇಳಿದಿದ್ದರು. ಕಾರ್ಮಿಕರು ಕೆಲಸ ಮಾಡುತ್ತಿದ್ದಾಗಲೇ ಮೇಲಿನಿಂದ ಮಣ್ಣು ಕುಸಿದು ಬಿದ್ದಿದ್ದು ಮಣ್ಣಿನಡಿ ಸಿಲುಕಿದ್ದಾರೆ. 

ಕೂಡಲೇ ಪುತ್ತೂರು ಗ್ರಾಮಾಂತರ ಪೊಲೀಸರು ಆಗಮಿಸಿದ್ದು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಮಣ್ಣು ಬಿದ್ದ ರಭಸಕ್ಕೆ ಕಾರ್ಮಿಕರು ಮೃತರಾಗಿದ್ದಾರೆ ಎನ್ನಲಾಗುತ್ತಿದೆ.  ಮೃತರನ್ನು ಪಾರ್ಪಳ್ಳ ನಿವಾಸಿಗಳಾದ ಬಾಬು ಮತ್ತು ರವಿ ಎಂಬವರೆಂದು ಗುರುತಿಸಲಾಗಿದೆ.

Two labourers died when a mound of mud fell on them while they were trying to close a chicken waste pit.