ಮತ್ತೊಂದು ಕಾಲೇಜಿನಲ್ಲಿ ರ‍್ಯಾಗಿಂಗ್ ಪ್ರಕರಣ ; ಪ್ರಶ್ನಿಸಿದ ಪ್ರಾಂಶುಪಾಲರಿಗೇ ವಿದ್ಯಾರ್ಥಿಗಳಿಂದ ಹಲ್ಲೆ !

04-03-21 08:07 pm       Mangaluru correspondent   ಕರಾವಳಿ

 ವಳಚ್ಚಿಲ್, ದೇರಳಕಟ್ಟೆ ಕಾಲೇಜಿನ ರ್ಯಾಗಿಂಗ್ ಪ್ರಕರಣದ ಬಳಿಕ ಈಗ ಸುರತ್ಕಲ್ ಬಳಿಯ ಮುಕ್ಕದಲ್ಲಿ ರ್ಯಾಗಿಂಗ್ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರು, ಮಾ.4:  ವಳಚ್ಚಿಲ್, ದೇರಳಕಟ್ಟೆ ಕಾಲೇಜಿನ ರ್ಯಾಗಿಂಗ್ ಪ್ರಕರಣದ ಬಳಿಕ ಈಗ ಸುರತ್ಕಲ್ ಬಳಿಯ ಮುಕ್ಕದಲ್ಲಿ ರ್ಯಾಗಿಂಗ್ ಘಟನೆ ಬೆಳಕಿಗೆ ಬಂದಿದೆ. ಮುಕ್ಕದ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳು ರ್ಯಾಗಿಂಗ್ ನಡೆಸಿದ್ದು ನಾಲ್ವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. 

ರ್ಯಾಗಿಂಗ್ ನಡೆಸಿರುವ ಬಗ್ಗೆ ಕಿರಿಯ ವಿದ್ಯಾರ್ಥಿಗಳು ಪ್ರಾಂಶುಪಾಲರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರಾಂಶುಪಾಲರು ಆರೋಪಿತ ನಾಲ್ವರನ್ನು ಕರೆಸಿ ಬುದ್ಧಿ ಮಾತು ಹೇಳಿದ್ದಾರೆ. ಡಿಬಾರ್ ಮಾಡುವುದಾಗಿ ಬೆದರಿಸಿದ್ದಾರೆ. ಈ ವೇಳೆ, ಕ್ರುದ್ಧರಾದ ಮೂವರು ವಿದ್ಯಾರ್ಥಿಗಳು ಪ್ರಾಂಶುಪಾಲರ ಮೇಲೇ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದ್ದು ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಹಲ್ಲೆ ಮತ್ತು ರ್ಯಾಗಿಂಗ್ ಪ್ರತ್ಯೇಕ ಪ್ರಕರಣ ದಾಖಲಾಗಿದೆ. 

ನಾಲ್ವರ ಪೈಕಿ ಮೂವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದೆ. ಘಟನೆ ಯಾಕಾಯ್ತು , ವಿದ್ಯಾರ್ಥಿಗಳ ಆರೋಪ ಏನಿತ್ತು ಅನ್ನೋದ್ರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಬಿಟ್ಟುಕೊಟ್ಟಿಲ್ಲ. 

ಕಳೆದ ಎರಡ್ಮೂರು ತಿಂಗಳ ಅಂತರದಲ್ಲಿ ಎರಡು ಕಾಲೇಜಿನಲ್ಲಿ ರ್ಯಾಗಿಂಗ್ ಪ್ರಕರಣ ನಡೆದಿತ್ತು. ‌ಪೊಲೀಸ್ ಕಮಿಷನರ್ ವಾರ್ನ್ ಮಾಡಿದ್ದರೂ, ವಿದ್ಯಾರ್ಥಿಗಳು ಕ್ಯಾರ್ ಮಾಡಿಲ್ಲ.

Four students have been arrested for Ragging and Assult on principal at Srinivas college of Engineering at Mukka in Mangalore.