ಸೂಪರ್ ಹ್ಯೂಮನ್ ಕ್ಲಬ್ಬಿನ ಇಬ್ಬರು ಜೂಡೋಗಳಿಗೆ ನೇಪಾಳದಲ್ಲಿ ಚಿನ್ನದ ಪದಕ

06-03-21 03:06 pm       Mangalore Correspondent   ಕರಾವಳಿ

ಸೂಪರ್ ಹ್ಯೂಮನ್ ಜೂಡೋ ಜಿಮ್ನಾಸ್ಟಿಕ್ ಕ್ಲಬ್ಬಿನ ಇಬ್ಬರು ಜೂಡೋ ಅತ್ಲೀಟ್ ಗಳು ನೇಪಾಳದಲ್ಲಿ ನಡೆದ ಟೂರ್ನಮೆಂಟಿನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಮಂಗಳೂರು, ಮಾ.6: ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಸೂಪರ್ ಹ್ಯೂಮನ್ ಜೂಡೋ ಜಿಮ್ನಾಸ್ಟಿಕ್ ಕ್ಲಬ್ಬಿನ ಇಬ್ಬರು ಜೂಡೋ ಅತ್ಲೀಟ್ ಗಳು ನೇಪಾಳದಲ್ಲಿ ನಡೆದ ಟೂರ್ನಮೆಂಟಿನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಇಂಡೋ – ನೇಪಾಳ ಮಟ್ಟದ ಆಹ್ವಾನಿತ ಜಿಮ್ನಾಸ್ಟಿಕ್ ಕ್ಲಬ್ ಗಳ ಸದಸ್ಯರ ಟೂರ್ನಮೆಂಟಿನಲ್ಲಿ ಬಂಟ್ವಾಳ ತಾಲೂಕಿನ ಕಾಲಡ್ಕ ನಿವಾಸಿಗಳಾದ ನಿಶಿತ್ ಮತ್ತು ಧನಂಜಯ್ ಎಂಬ ಇಬ್ಬರು ಚಿನ್ನದ ಪದಕ ಪಡೆದಿದ್ದಾರೆ. ಇವರು ಮಂಗಳೂರಿನ ಸೂಪರ್ ಹ್ಯೂಮನ್ ಜಿಮ್ ನಲ್ಲಿ ಕೋಚ್ ಆಶಿಷ್ ಅವರಿಂದ ತರಬೇತು ಪಡೆದಿದ್ದರು. ಫೆ.24ರಿಂದ 28ರ ವರೆಗೆ ನೇಪಾಳದ ಕಸ್ಕಿ ಎನ್ನುವ ಪ್ರದೇಶದಲ್ಲಿ ಈ ಟೂರ್ನಮೆಂಟ್ ನಡೆದಿತ್ತು.  

ಕಳೆದ ಬಾರಿ ಗೋವಾದಲ್ಲಿ ನಡೆದ ನೇಶನಲ್ ಜೂಡೋ ಚಾಂಪ್ಯನ್ ಶಿಪ್ಪಿನಲ್ಲಿ ನಿಶಿತ್ ಮತ್ತು ಧನಂಜಯ್ ಚಿನ್ನದ ಪದಕ ಗಳಿಸಿದ್ದರು. ಒಲಿಂಪಿಕ್ ಗೇಮ್ ಆಗಿರುವ ಜೂಡೋ ಕ್ರೀಡೆಯಲ್ಲಿ ಕರಾವಳಿಯ ಮಂದಿ ಸಾಧನೆ ಮಾಡಿದ್ದು ಕಡಿಮೆ. ಈಗ ಇವರಿಬ್ಬರ ಸಾಧನೆ ಮಂಗಳೂರಿನ ಮಂದಿಗೆ ಹೆಮ್ಮೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಈ ಜೋಡಿ ಒಲಿಂಪಿಕ್ ಕ್ರೀಡೆಯಲ್ಲಿ ಪದಕ ಗೆಲ್ಲುವಂತಾಗಲಿ ಎಂದು ಮೌ ಥಾಯ್ ಅಸೋಸಿಯೇಶನ್ ಆಫ್ ಕರ್ನಾಟಕ ಇದರ ಗೌರವಾಧ್ಯಕ್ಷ ಸದಾನಂದ ಶೆಟ್ಟಿ, ಅಸೋಸಿಯೇಶನ್ ಅಧ್ಯಕ್ಷ ರಾಜಗೋಪಾಲ್ ರೈ, ಅಸೋಸಿಯೇಶನ್ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಬಿಜೆಪಿ ಯುವಮೋರ್ಚಾ ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಸಚಿನ್ ರಾಜ್ ರೈ, ಮಂಗಳೂರಿನ ಸೂಪರ್ ಹ್ಯೂಮನ್ ಜಿಮ್ ಪಾಲುದಾರ ಬಿಪಿನ್ ರಾಜ್ ರೈ ಅಭಿನಂದಿಸಿದ್ದಾರೆ.