ಹುಟ್ಟಿದ ದಿನವೇ ಉಯ್ಯಾಲೆಗೆ ಸಿಲುಕಿ ದುರಂತ ಸಾವು ಕಂಡ ಬಾಲಕಿ !

06-03-21 04:00 pm       Mangalore Correspondent   ಕರಾವಳಿ

ಮರದಲ್ಲಿ ಬಾಲಕಿಯೊಬ್ಬಳು ಉಯ್ಯಾಲೆ ಆಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಬಿಗಿದು ಮೃತಪಟ್ಟ ಘಟನೆ ನಡೆದಿದೆ.

ಸುಬ್ರಹ್ಮಣ್ಯ, ಮಾ.6 : ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಎಂಬಲ್ಲಿ ಮರದಲ್ಲಿ ಬಾಲಕಿಯೊಬ್ಬಳು ಉಯ್ಯಾಲೆ ಆಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಬಿಗಿದು ಮೃತಪಟ್ಟ ಘಟನೆ ನಡೆದಿದೆ.

ಹುಟ್ಟುಹಬ್ಬದ ದಿನವಾದ ಮಾ.5ರಂದು ಶಾಲೆಗೆ ರಜೆ ಮಾಡಿ ಬಾಲಕಿ ಮನೆಯಲ್ಲಿ ಆಟವಾಡುತ್ತಿದ್ದಳು. ಮರದಲ್ಲಿ ಹಗ್ಗ ಕಟ್ಟಿ ಉಯ್ಯಾಲೆ ಆಡುತ್ತಿದ್ದಾಗ ಕುತ್ತಿಗೆಗೆ ಬಿಗಿದಿದ್ದು ಸ್ಥಳದಲ್ಲೇ ಮೃತಪಟ್ಟಳು ಎನ್ನಲಾಗಿದೆ.

ಏನೆಕಲ್ಲು ಗ್ರಾಮದ ಮುತ್ಲಾಜಡ್ಕ ಬಾಬು ಅಜಿಲ ಅವರ ಪುತ್ರಿ ಶೃತಿ (11) ಮೃತ ಬಾಲಕಿ. ಮನೆ ಸಮೀಪದ ಸೀಬೆಹಣ್ಣು ಮರಕ್ಕೆ ಬಟ್ಟೆಯಲ್ಲಿ ಕಟ್ಟಿದ ಉಯ್ಯಾಲೆಯಾಡುತ್ತಿದ್ದಾಗ ದುರಂತ ಸಂಭವಿಸಿದೆ.  ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.