ಬ್ರೇಕಿಂಗ್ ನ್ಯೂಸ್
19-03-21 06:07 pm Mangalore Correspondent ಕರಾವಳಿ
ಉಳ್ಳಾಲ, ಮಾ.19 : ಭಾರತೀಯ ಜನತಾ ಪಕ್ಷವು ಲಾಭಕ್ಕಾಗಿ ರಾಜಕೀಯ ಮಾಡಲ್ಲ ಎಂಬುದಕ್ಕೆ ಸಂತೋಷ್ ಬೋಳಿಯಾರ್ ಅವರ ಕಾರ್ಯ ವೈಖರಿಯೇ ಸಾಕ್ಷಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ ಹೇಳಿದರು.
ಕರ್ನಾಟಕ ಸರಕಾರದ ಉದ್ಯಮ ದಿ ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿ. ಬೆಂಗಳೂರು ಇದರ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ( CSR) ಕಾರ್ಯಕ್ರಮದ ಅಡಿಯಲ್ಲಿ ಬೋಳಿಯಾರಿನ ಅಮರದೀಪ ಸಭಾಂಗಣದಲ್ಲಿ ನಡೆದ ಮಂಗಳೂರು ವಿಧಾನಸಭಾ ಕ್ಷೇತ್ರದ ಆಯ್ದ ಸಮಾಜ ಸೇವೆ ಸಂಸ್ಥೆಗಳು ಮತ್ತು ಶಾಲೆಗಳಿಗೆ ನೀಡಲಾಗುವ ವಿಶೇಷ ನಿಧಿಯ ಚೆಕ್ ವಿತರಣಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿಯು ಲಾಭಕ್ಕಾಗಿ ರಾಜಕೀಯ ಎಂದಿಗೂ ಮಾಡಿಲ್ಲ ಎಂಬುದಕ್ಕೆ ಪೂರಕವಾಗಿ ಸಂತೋಷ್ ರೈಯವರು ತಾನು ಅಧ್ಯಕ್ಷನಾಗಿರುವ ಸಂಸ್ಥೆಯಿಂದ ತನ್ನ ಗ್ರಾಮಕ್ಕೆ ಸುಮಾರು 25 ಲಕ್ಷ ವಿಶೇಷ ಅನುದಾನವನ್ನು ತಂದಿದ್ದಾರೆ. ಇದುವರೆಗೆ ಕಿಯೋನಿಕ್ಸ್ ಮತ್ತು ದಿ ಮೈಸೂರು ಇಲೆಕ್ಟ್ರಿಕಲ್ ಲಿ. ಎರಡು ಸಂಸ್ಥೆ ಹೆಸರು ಯಾರಿಗೂ ಗೊತ್ತಿರಲಿಲ್ಲ. ಈ ಸ್ಥಾನಗಳನ್ನು ಶಾಸಕರು ಅಥವಾ ಸಚಿವರಿಗೆ ಹೆಚ್ಚುವರಿಯಾಗಿ ನೀಡುತ್ತಿದ್ದರು. ಆದರೆ ಬಿಜೆಪಿ ಸರಕಾರವು ಈ ಎರಡು ಸ್ಥಾನಗಳನ್ನು ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ನೀಡಿದೆ. ಸಂತೋಷ್ ಅವರು ನಮ್ಮ ಜಿಲ್ಲೆಯ ಸುಮಾರು 35 ಜನರಿಗೆ ಅವರು ಪ್ರತಿನಿಧಿಸುವ ಸಂಸ್ಥೆಯಲ್ಲಿ ಉದ್ಯೋಗವನ್ನು ಕಲ್ಪಿಸಿ ಕೊಟ್ಟಿದ್ದಾರೆ. ಮುಂದಿನ ವರ್ಷದಲ್ಲಿ ಅವರು ಪ್ರತಿನಿಧಿಸುವ ಸಂಸ್ಥೆಯು ಕೋಟ್ಯಂತರ ರೂಪಾಯಿ ಲಾಭ ಗಳಿಸಲಿ. ಆಗ ಸಿಎಸ್ ಆರ್ ನಿಧಿ ಕೂಡ ಹೆಚ್ಚು ದೊರಕಿ ಜಿಲ್ಲೆಗೆ ಅನುಕೂಲವಾಗುವುದೆಂದರು.
ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್, ಬೆಂಗಳೂರಿನ ಅಧ್ಯಕ್ಷರಾದ ಸಂತೋಷ್ ಬೋಳಿಯಾರ್ ಮಾತನಾಡಿ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 14 ಶಾಲೆ ಹಾಗೂ ಸೇವಾ ಸಂಸ್ಥೆಗಳಿಗೆ ಅನುದಾನ ಒದಗಿಸಿಕೊಟ್ಟಿದ್ದು ಈ ಅನುದಾನದಲ್ಲಿ ಯಾವುದೇ ಮಧ್ಯವರ್ತಿಗಳು ನುಸುಳದಂತೆ ನೇರ ಫಲಾನುಭವಿ ಸಂಸ್ಥೆಗಳಿಗೆ ನಿಧಿ ಸಿಗುವಂತೆ ಮಾಡಿದ್ದೇನೆ.
ಇನ್ನೂ ಹಲವಾರು ಸಂಸ್ಥೆಗಳು ವಿಶೇಷ ನಿಧಿಗೆ ಬೇಡಿಕೆ ಇಟ್ಟಿವೆ. ಮುಂದಿನ ದಿವಸಗಳಲ್ಲಿ ನೂರಾರು ಶಾಲೆಗೆ ಅನುದಾನ ಕೊಡುವ ಶಕ್ತಿ ಭಗವಂತನು ತನಗೆ ನೀಡಲಿ ಎಂದರು.
ಕೈರಂಗಳ ಶಾರದಾ ವಿದ್ಯಾಗಣಪತಿ ಶಾಲೆಯ ಸಂಚಾಲಕರಾದ ಟಿ.ಜಿ.ರಾಜಾರಾಂ ಭಟ್, ಕ್ಯಾಂಪ್ಕೊ ನಿರ್ದೇಶಕರಾದ ಮಹೇಶ್ ಚೌಟ, ಎಪಿಎಮ್ ಸಿ ಮಾಜಿ ಅಧ್ಯಕ್ಷ ಪ್ರಶಾಂತ್ ಗಟ್ಟಿ, ಹರೇಕಳ ರಾಮಕೃಷ್ಣ ಪ್ರೌಢ ಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ರವೀಂದ್ರ ರೈ ಮೊದಲಾದವರು ಉಪಸ್ಥಿತರಿದ್ದರು.
25 lakhs cheque donated from Mysore electricals towards ullal bolyar development by President Santosh.
06-10-25 05:27 pm
HK News Desk
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 07:19 pm
Mangalore Correspondent
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm