ಕರಾವಳಿಯ ಧಾರ್ಮಿಕ ಆಚರಣೆಗಳಿಗೆ ಅನುಮತಿ ;  ರಘುಪತಿ ಭಟ್ ಮನವಿಗೆ ಸಿಎಂ ಸಮ್ಮತಿ 

28-08-20 12:58 pm       Udupi Reporter   ಕರಾವಳಿ

ಮುಖ್ಯಮುಂತ್ರಿ ಬಿ.ಎಸ್. ಯಡಿಯೂರಪ್ಪ ತುಳುನಾಡಿನ ಧಾರ್ಮಿಕ ಆಚರಣೆಗೆ ಅನುಮತಿ ನೀಡವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.

ಉಡುಪಿ, ಆಗಸ್ಟ್ 28: ಕೊರೊನಾ ಲಾಕ್ಡೌನ್‌ ಬಳಿಕ ತುಳುನಾಡಿನ ಧಾರ್ಮಿಕ ಆಚರಣೆಗಳು ಸ್ಥಗಿತಗೊಂಡಿದ್ದವು. ದೈವಾರಾಧನೆ, ನಾಗಾರಾಧನೆಯಂತಹ ತುಳುವರ ಆರಾಧನ ಕ್ರಮಗಳಿಗೆ ಸಂಪೂರ್ಣ ಬ್ರೇಕ್ ಬಿದ್ದಿತ್ತು. ಈ ಉಡುಪಿ ಶಾಸಕರಾದ ರಘುಪತಿ ಭಟ್‌, ಕರಾವಳಿಯ ಧಾರ್ಮಿಕ ಆಚರಣೆಗಳಿಗೆ ಅನುಮತಿ ನೀಡುವಂತೆ  ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಮುಖ್ಯಮುಂತ್ರಿ ಬಿ.ಎಸ್. ಯಡಿಯೂರಪ್ಪ ತುಳುನಾಡಿನ ಧಾರ್ಮಿಕ ಆಚರಣೆಗೆ ಅನುಮತಿ ನೀಡವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.

ಈ ಬಗ್ಗೆ ಟ್ವೀಟರ್ ಮೂಲಕ ಮಾಹಿತಿ ನೀಡಿರುವ ಶಾಸಕ ರಘುಪತಿ ಭಟ್, “ದೈವರಾಧನೆ , ಮಾರಿಪೂಜೆ, ನೇಮ, ಉತ್ಸವ ಮೊದಲಾದ ತುಳುನಾಡಿನ ಧಾರ್ಮಿಕ ಆಚರಣೆಗಳನ್ನು ನಡೆಸಲು  ಮುಖ್ಯಮಂತ್ರಿಯವರು ಅನುಮತಿ ನೀಡಿದ್ದಾರೆ. ನನ್ನ ಮನವಿಗೆ ಮುಖ್ಯಮಂತ್ರಿಯವರು ಸ್ಪಂದಿಸಿದ್ದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶ ಮಾಡಿದ್ದಾರೆ. ತಕ್ಷಣ ಜಾರಿಗೆ ತರಲು ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಆಗ್ರಹಿಸುತ್ತೇನೆ" ಎಂದು ತಿಳಿಸಿದ್ದಾರೆ.