ಕುವೈಟ್‌ ಭಾರತೀಯ ನಿವಾಸಿಗಳಿಂದ ಭಾರೀ ಪ್ರಮಾಣದ ನೆರವು ; 252 ಮೆಟ್ರಿಕ್ ಟನ್ ಆಕ್ಸಿಜನ್ ಮಂಗಳೂರಿಗೆ

25-05-21 12:21 pm       Mangalore Correspondent   ಕರಾವಳಿ

ಭಾರತೀಯ ನೌಕಾಪಡೆಗೆ ಸೇರಿದ ಐಎನ್ಎಸ್ ಶಾರ್ದೂಲ್ ಎಂಬ ಹಡಗಿನಲ್ಲಿ 11 ಕಂಟೇನರ್ ಸೇರಿ ಒಟ್ಟು 252 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಮಂಗಳೂರು ಬಂದರಿಗೆ ಬಂದಿದೆ.‌

ಮಂಗಳೂರು, ಮೇ 25: ಕುವೈಟ್‌ ರಾಷ್ಟ್ರದಿಂದ ಮತ್ತೆ ಆಮ್ಲಜನಕದ ನೆರವು ಹೊತ್ತ ಹಡಗು ಮಂಗಳೂರು ಬಂದರಿಗೆ ಬಂದಿದೆ.‌ ಭಾರತೀಯ ನೌಕಾಪಡೆಗೆ ಸೇರಿದ ಐಎನ್ಎಸ್ ಶಾರ್ದೂಲ್ ಎಂಬ ಹಡಗಿನಲ್ಲಿ 11 ಕಂಟೇನರ್ ಸೇರಿ ಒಟ್ಟು 252 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ತರಲಾಗಿದೆ. 

ಕುವೈಟ್ ರಾಷ್ಟ್ರದಲ್ಲಿರುವ ಭಾರತೀಯ ಮೂಲದ ನಿವಾಸಿಗಳ ಇಂಡಿಯನ್ ಕಮ್ಯುನಿಟಿ ಸಪೋರ್ಟ್ ಗ್ರೂಪ್ ಎಂಬ ಸಂಘಟನೆಯಿಂದ ಈ ನೆರವು ಒದಗಿಸಿದ್ದಾರೆ. ಹಡಗಿನಲ್ಲಿ ತಲಾ 20 ಮೆಟ್ರಿಕ್ ಟನ್ ನಂತೆ ಹನ್ನೊಂದು ಆಕ್ಸಿಜನ್ ಕಂಟೇನರ್ ಗಳನ್ನು ಮಂಗಳೂರಿನ ಎನ್ಎಂಪಿಟಿ ಬಂದರಿಗೆ ತರಲಾಗಿದೆ. ಇದರ ಜೊತೆಗೆ ಆಮ್ಲಜನಕದ ಎರಡು ಸೆಮಿ ಟ್ರೈಲರ್ ಗಳು ಮತ್ತು 1200 ಆಕ್ಸಿಜನ್ ಸಿಲಿಂಡರ್ ಗಳನ್ನು ಹಡಗಿನಲ್ಲಿ ತರಲಾಗಿದೆ. 

ಈ ಆಕ್ಸಿಜನ್ ಕಂಟೇನರ್ ಮತ್ತು ಸಿಲಿಂಡರ್ ಗಳನ್ನು ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಾಗಿಸಲಾಗುತ್ತದೆ. ಕುವೈಟ್‌ ರಾಷ್ಟ್ರದ ಪ್ರಮುಖ ಕಾರ್ಗೋ ಬಂದರು ಶುವೈಕ್ ನಿಂದ ಮೇ 15ರಂದು ಆಕ್ಸಿಜನ್ ಹೊತ್ತ ಹಡಗು ಮಂಗಳೂರಿಗೆ ಹೊರಟಿತ್ತು. 

ಇಂದು ಬೆಳಗ್ಗೆ ಎನ್ಎಂಪಿಟಿ ಬಂದರಿಗೆ ಆಗಮಿಸಿದ ನೌಕಾಪಡೆಯ ಹಡಗನ್ನು ಎಡಿಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್, ಕೋಸ್ಟ್ ಗಾರ್ಡ್ ಕಮಾಂಡರ್ ವೆಂಕಟೇಶ್, ರೆಡ್ ಕ್ರಾಸ್ ಜಿಲ್ಲಾ ಘಟಕದ ಶಾಂತರಾಮ ಶೆಟ್ಟಿ, ಸೆಕ್ರೆಟರಿ ಪ್ರಭಾಕರ ಶರ್ಮ, ಯತೀಶ್ ಬೈಕಂಪಾಡಿ ಸ್ವಾಗತಿಸಿದರು.

Video: 

The New Mangalore Port Trust (NMPT) on Tuesday, May 25, handled one more navy vessel ‘INS SHARDUL' carrying 11 liquid oxygen tankers, two semi-trailers with liquid oxygen, and 1,200 oxygen cylinders. The equipment was sent by Indian Community Support Group, Kuwait.