ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟ; ಇಂದು 6 ಬಲಿ, 448 ಮಂದಿಯಲ್ಲಿ ಸೋಂಕು

28-08-20 10:41 pm       Dhruthi Anchan - Correspondant   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತೂ ಕೂಡ ಕೊರೋನಾ ಮಹಾಸ್ಪೋಟಗೊಂಡಿದೆ. ಇಂದು ಬರೋಬ್ಬರಿ 448 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು 6 ಮಂದಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.

ಮಂಗಳೂರು, ಆಗಸ್ಟ್ 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತೂ ಕೂಡ ಕೊರೋನಾ ಮಹಾಸ್ಪೋಟಗೊಂಡಿದೆ. ಇಂದು ಬರೋಬ್ಬರಿ 448 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು 6 ಮಂದಿ ಕೊರೋನಾ ಮಹಾಮಾರಿಗೆ ಬಲಿಯಾಗುವ ಮೂಲಕ  ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 343ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ 293 ಮಂದಿ ಗುಣಮುಖರಾಗಿದ್ದು ಸದ್ಯಕ್ಕೆ 2521ಆಕ್ಟಿವ್ ಕೇಸ್‌ಗಳಿವೆ.

ಮಂಗಳೂರಿನಲ್ಲಿ 273, ಬಂಟ್ವಾಳದಲ್ಲಿ 103, ಪುತ್ತೂರಿನಲ್ಲಿ 1, ಸುಳ್ಯದಲ್ಲಿ 17 ಹಾಗೂ ಹೊರ ಜಿಲ್ಲೆಯ 10 ಮಂದಿಗೆ ಕೋರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇನ್ನೂ ಆತಂಕಕಾರಿ  ವಿಚಾರವೇನೆಂದರೆ ಸೋಂಕಿನ ಮೂಲವೆ ಪತ್ತೆಯಾಗದವರ ಸಂಖ್ಯೆ 215ಕ್ಕೆ ಏರಿಕೆಯಾಗಿದೆ. 

ಇಂದು ಪತ್ತೆಯಾದ ಸೋಂಕಿತರ ಪೈಕಿ 66 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢಪಟ್ಟರೆ, 149 ಮಂದಿಯಲ್ಲಿ ಐಎಲ್‌ಐ ಪ್ರಕರಣದಿಂದ ಪತ್ತೆಯಾಗಿದೆ.ಸಾರಿ ಪ್ರಕರಣದಿಂದ 17 ಮಂದಿಗೆ ಕೊರೋನಾ ದೃಢಪಟ್ಟಿರುವ ಜೊತೆಗೆ ವಿದೇಶದಿಂದ ಬಂದ ಒಬ್ಬರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.