ಬ್ರೇಕಿಂಗ್ ನ್ಯೂಸ್
15-06-21 10:19 pm Mangaluru Correspondent ಕರಾವಳಿ
ಉಳ್ಳಾಲ, ಜೂ.15: ಕೈರಂಗಳ ಶಾರದಾ ವಿದ್ಯಾಗಣಪತಿ ಶಾಲಾ ಸಂಚಾಲಕರಾದ ಟಿ.ಜಿ.ರಾಜಾರಾಂ ಭಟ್ ನೇತೃತ್ವದಲ್ಲಿ "ಆಸರೆ" ಯೋಜನೆಯಡಿ ನರಿಂಗಾನದ ಅಶಕ್ತ ನಾರಾಯಣ ಪುಜಾರಿ ಕುಟುಂಬಕ್ಕೆ ನಿರ್ಮಿಸಿ ಕೊಡಲಾದ ನೂತನ ಮನೆಯ ಕೀಲಿ ಕೈಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್ ಹಸ್ತಾಂತರಿಸಿದರು.
ನರಿಂಗಾನದ ಶೇಡಿಗುಂಡಿ ನಿವಾಸಿ ನಾರಾಯಣ ಪೂಜಾರಿಯವರ ಹಳೆಯ ಮನೆ ಸಂಪೂರ್ಣ ಶಿಥಿಲಗೊಂಡಿತ್ತು. ಇದನ್ನ ಅರಿತ ಟಿ.ಜಿ.ರಾಜಾರಾಂ ಭಟ್ ಮುತುವರ್ಜಿ ವಹಿಸಿ ಕೆಲ ದಾನಿಗಳ ಸಹಕಾರವನ್ನು ಒಗ್ಗೂಡಿಸಿ ನಾರಾಯಣ ಅವರಿಗೆ ಗಟ್ಟಿಯಾದ ಸುಸಜ್ಜಿತ ಹಂಚಿನ ಮನೆಯೊಂದನ್ನ ನಿರ್ಮಿಸಿ ಕೊಟ್ಟಿದ್ದಾರೆ.
RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಇಂದು ನೂತನ ಮನೆಯ ಕೀಲಿ ಕೈಯನ್ನು ನಾರಾಯಣ ಪೂಜಾರಿ ಕುಟುಂಬಕ್ಕೆ ಹಸ್ತಾಂತರಿಸಿದರು. ಕೊರೊನಾ ಕಾಲ ಘಟ್ಟದಲ್ಲಿ ಬರೀ ಸೋಂಕಿನ ಬಗೆಗಿನ ಪಾಸಿಟಿವ್ ಸಂಖ್ಯೆಗಳ ವಿಚಾರಗಳನ್ನೇ ಕೇಳುವ ಪರಿಸ್ಥಿತಿ ಎದುರಾಗಿತ್ತು. ಇಂತಹ ಪರಿಸ್ಥಿತಿಯಲ್ಲೂ ಸಮಾಜಕ್ಕೆ ಒಂದು ಉತ್ತಮ ಪಾಸಿಟಿವ್ ಕಾರ್ಯ ಮಾಡಿ ರಾಜಾರಾಮ್ ಭಟ್ ಮತ್ತು ಅವರ ತಂಡ ಮಾದರಿಯಾಗಿದೆ ಎಂದು ಕಲ್ಲಡ್ಕ ಭಟ್ ಹೇಳಿದರು.
ಭಾರತೀಯ ಸಂಸ್ಕೃತಿಯೇ ವಿಭಿನ್ನವಾದದ್ದು, ಆ ಸಂಸ್ಕೃತಿಯ ಕೇಂದ್ರವೇ ಮನೆ. ವ್ಯಕ್ತಿಯ ಹೃದಯದ ಕೇಂದ್ರವೇ ಮನೆ, ಯಾವುದೇ ವ್ಯಕ್ತಿಗೆ ಮನೆಯೇ ಮೊದಲ ದೇವಸ್ಥಾನ. ಅಂತಹ ದೇವಸ್ಥಾನವನ್ನ ಇಂದು ನಾರಾಯಣ ಪೂಜಾರಿ ಕುಟುಂಬವು ಪಡೆದುಕೊಂಡಿದೆ. ಸಮಾಜ ಇವರಿಗೆ ಜೊತೆಯಾಗಿದ್ದು, ಸಮಾಜದ ಜೊತೆಯೂ ಪೂಜಾರಿ ಕುಟುಂಬ ಬೆರೆಯುವಂತೆ ಮಾಡಿದೆ. ಇಂತಹ ಕಾರ್ಯ ಹೀಗೆಯೇ ಮುಂದುವರೆಯಲಿ. ಸಮಸ್ಯೆ ಬರಬೇಕೆಂಬುದನ್ನ ಆಶಿಸುವುದು ಬೇಡ, ಸಮಸ್ಯೆ ಇದ್ದಲ್ಲಿ ಸ್ಪಂದನೆ ನೀಡುವ ಕೈಂಕರ್ಯಗಳು ಮುಂದುವರೆಯುವಂತಾಗಬೇಕು. ಹಿಂದೂ ಸಮಾಜ ಎಂದಿಗೂ ಸಂಘಟಿತವಾಗಿ ಇದ್ದು ಸಮಸ್ಯೆಗಳನ್ನು ಎದುರಿಸುವಂತಾಗಬೇಕು. ನಾರಾಯಣ ಪೂಜಾರಿಯ ಎರಡು ಹೆಣ್ಮಕ್ಕಳಿಗೆ ಮದುವೆಯಾಗಿ ಮನೆ ತುಂಬ ಮಕ್ಕಳಾಗಲಿ ಎಂದು ಹರಸಿದರು.
ಮನೆ ನಿರ್ಮಾಣದ ರೂವಾರಿ ಟಿ.ಜಿ.ರಾಜಾರಾಂ ಭಟ್ ಮಾತನಾಡಿ ಕಳೆದ ಲಾಕ್ ಡೌನ್ ವೇಳೆ ನಾರಾಯಣ ಪೂಜಾರಿ ಅವರ ಮನೆಗೆ ಆಹಾರ ಕಿಟ್ ನೀಡಲು ಬಂದ ಸಂದರ್ಭದಲ್ಲಿ ಆ ಕುಟುಂಬದ ದಯನೀಯ ಸ್ಥಿತಿಯನ್ನ ಕಂಡು ದೇಶದಲ್ಲಿ ಪ್ರಜಾಪ್ರಭುತ್ವ ಆಡಳಿತ ಇದೆಯೋ ಎಂದು ಪ್ರಶ್ನಿಸುವಂತಿತ್ತು. ಸಹೃದಯಿಗಳ ಸಹಕಾರದಿಂದ ಅಂದು ನಾರಾಯಣ ಅವರಿಗೆ ಸೂರನ್ನು ನಿರ್ಮಿಸಿ ಕೊಡಲು ಮಾಡಿದ ಸಂಕಲ್ಪವು ಇಂದು ಸಾಕಾರಗೊಂಡಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಮಾತನಾಡಿ ಮನೆ ಕಟ್ಟುವುದೆಂದರೆ ಸುಲಭದ ಕೆಲಸವಲ್ಲ. ಪ್ರತಿ ಮನುಷ್ಯನ ಆಶೆನೂ ಸಾಯೋ ಕಾಲದಲ್ಲಾದರೂ ಸ್ವಂತ ಮನೆಯಲ್ಲೇ ಸಾಯ ಬೇಕೆನ್ನುವುದಾಗಿರುತ್ತೆ. ನಾರಾಯಣ ಪೂಜಾರಿಯಂತಹ ಅಶಕ್ತನಿಗೆ ಹೊಸ ಮನೆಯಲ್ಲಿ ಬದುಕುವ ಭಾಗ್ಯವನ್ನು ಒದಗಿಸಿ ಕೊಟ್ಟ ಟಿ.ಜಿ.ರಾಜಾರಾಂ ಭಟ್ ಮತ್ತು ಅವರ ತಂಡದ ಕಾರ್ಯ ಎಲ್ಲರಿಗೂ ಮಾದರಿ ಎಂದರು.
ಮನೆ ನಿರ್ಮಾಣದಲ್ಲಿ ಉಚಿತ ಕಾಮಗಾರಿ ನಡೆಸಿಕೊಟ್ಟವರು, ಶ್ರಮದಾನ ಗೈದವರು ಮತ್ತು ದಾನಿಗಳನ್ನು ಈ ವೇಳೆ ಗೌರವಿಸಲಾಯಿತು. "ನೆರವಿನ ಆಸರೆ" ಯೋಜನೆಯ ಎರಡನೇ ಫಲಾನುಭವಿಯಾಗಿ ಆಯ್ಕೆಯಾಗಿರುವ ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ ನಿವಾಸಿ ಶರಣಪ್ಪ ಅವರಿಗೆ ನಿರ್ಮಾಣಗೊಳ್ಳಲಿರುವ ನೂತನ ಮನೆಯ ಕಾಮಗಾರಿಗೂ ಈ ವೇಳೆ ಶಿಲಾನ್ಯಾಸ ನಡೆಸಲಾಯಿತು.
ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಲಿ. ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಸ್ಥಳದಾನಿ ದೋಸೆಮನೆ ಶಂಕರ ಭಟ್, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ನರಸಿಂಹ ಮಾಣಿ ಉಪಸ್ಥಿತರಿದ್ದರು.
Ullal T J Rajaram Bhat who has constructed a Newly Built house for the needy was inaugurated by Dr Kalladka Prabhakar Bhat in Ullal, Mangalore.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 02:13 pm
Mangalore Correspondent
Mangalore, Anupam Agarwal, Ramanatha Rai: ರಸ್...
28-11-24 01:56 pm
ಸ್ಪೀಕರ್ ಆಗಿ ಹತ್ತು ದೇಶ ಸುತ್ತಿದ ಯುಟಿ ಖಾದರ್ ; ಜ...
28-11-24 01:25 pm
Mangalore Cyber Fraud, Crime: ಜಾಲತಾಣದಲ್ಲಿ ಲೈಕ...
27-11-24 11:04 pm
Muneer Katipalla, Mangalore, Anupam Agarwal;...
27-11-24 09:36 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm