ಬ್ರೇಕಿಂಗ್ ನ್ಯೂಸ್
22-06-21 11:10 pm Richard, Mangaluru Correspondent ಕರಾವಳಿ
ಮಂಗಳೂರು, ಜೂನ್ 22: ಅತ್ತ ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ತರಾತುರಿಯಲ್ಲಿ ಬಸ್ ಓಡಿಸಲು ಅನುಮತಿ ಕೊಟ್ಟಿದೆ. ಜೂನ್ 23 ರಿಂದ ಮಧ್ಯಾಹ್ನ ವರೆಗೆ ಬಸ್ ಓಡಿಸಬಹುದು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ, ಖಾಸಗಿ ಬಸ್ ಓಡಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಬಸ್ ಮಾಲಕರು ತಿಳಿಸಿದ್ದಾರೆ.
ಈ ಬಗ್ಗೆ ಖಾಸಗಿ ಬಸ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ದಿಲ್ ರಾಜ್ ಆಳ್ವ ಬಳಿ ಕೇಳಿದರೆ, ಗರಂ ಆಗಿಯೇ ಉತ್ತರಿಸಿದ್ದಾರೆ. ಯಾವುದೇ ಕಾರಣಕ್ಕೂ ಖಾಸಗಿ ಬಸ್ ಓಡಿಸಲು ಸಾಧ್ಯವಿಲ್ಲ. ಬಸ್ ಓಡಿಸುವ ಸ್ಥಿತಿಯಲ್ಲೂ ನಾವಿಲ್ಲ ಎಂದಿದ್ದಾರೆ.
ಈಗಾಗ್ಲೇ ಮೂರು ತಿಂಗಳಿಂದ ಬಸ್ಸನ್ನು ಹಾಗೇ ಬಿಟ್ಟು ಹಾಳಾಗಿದೆ. ಈಗ ರಿಪೇರಿ ಮಾಡಿಸಲು ಗ್ಯಾರೇಜ್ ಇಟ್ಟಿದ್ದೇವೆ. ಈಗ ಐವತ್ತು ಶೇಕಡಾ ಜನರನ್ನು ಮಧ್ಯಾಹ್ನ ವರೆಗೆ ಕೊಂಡೊಯ್ಯಬೇಕು ಅಂದ್ರೆ ಹೇಗೆ ಇಳಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿಗೆಂದು ಸಿಕ್ಕಸಿಕ್ಕಲ್ಲಿ ಅಗೆದು ಹಾಕಿದ್ದಾರೆ. ಇದರ ನಡುವೆ, ಬಸ್ ಓಡಿಸುವುದು ಹೇಗೆ ? ಬಸ್ ಬಿಡಿ, ಇತರೇ ವಾಹನಗಳೇ ಹೋಗಲು ಜಾಗ ಇಲ್ಲ. ಇಂಥ ಸ್ಥಿತಿಯಲ್ಲಿ ಬಸ್ ಓಡಿಸಲು ಸಾಧ್ಯವೇ ? ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಡವೇ ಎಂದು ಪ್ರಶ್ನೆ ಮಾಡಿದ್ದಾರೆ.
ನಾವು ಏನಿದ್ದರೂ, ಜುಲೈ ಬಳಿಕವೇ ಬಸ್ ಓಡಿಸಬಹುದು. ಅದಕ್ಕೂ ತಯಾರಿ ನಡೆಸಬೇಕಷ್ಟೇ ಎಂದು ದಿಲ್ ರಾಜ್ ಆಳ್ವ ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ನಿನ್ನೆಯಷ್ಟೇ ಜಿಲ್ಲಾಧಿಕಾರಿ, ಜುಲೈ 5 ರ ವರೆಗೂ ಲಾಕ್ಡೌನ್ ಮುಂದುವರಿಸಿ ಆದೇಶ ಹೊರಡಿಸಿದ್ದರು. ಅಲ್ಲದೆ, ರಾಜ್ಯ ಸರಕಾರ ನೀಡಿದ್ದ ವಿನಾಯ್ತಿ ಆದೇಶವನ್ನು ಕಡಿತಗೊಳಿಸಿ, ಬೆಳಗ್ಗೆ ಏಳರಿಂದ ಮಧ್ಯಾಹ್ನ 1 ರ ವರೆಗೆ ಮಾತ್ರ ಎಂದಿದ್ದರು. ಜೊತೆಗೆ, ಪಾರ್ಕ್ ಓಪನ್ ಮಾಡುವುದಿಲ್ಲ ಎನ್ನುವ ಆದೇಶವನ್ನೂ ಮಾಡಿದ್ದರು. ಆದರೆ, ಒಂದೇ ದಿವಸದಲ್ಲಿ ಆದೇಶ ಬದಲಿಸಿದ್ದು ಬಸ್ ಸಂಚಾರಕ್ಕೂ ಅವಕಾಶ ಮಾಡಿದ್ದಾರೆ. ಜೊತೆಗೆ, ಇತರೇ ಅಂಗಡಿಗಳನ್ನು ತೆರೆಯುವುದಕ್ಕೂ ಅವಕಾಶ ಮಾಡಿದ್ದಾರೆ.
ಜಿಲ್ಲಾಡಳಿತದ ಎಡವಟ್ಟು:
ಕೆಲವು ಜನರ ಮನವಿಗೆ ಓಗೊಟ್ಟು ಜನಪ್ರತಿನಿಧಿಗಳು ಸೇರಿ ಜಿಲ್ಲಾಧಿಕಾರಿಯಿಂದ ಆದೇಶ ಹೊರಡಿಸುವಂತೆ ಮಾಡಿದ್ದಾರೆ. ಐವತ್ತು ಶೇಕಡಾ ಜನರನ್ನು ಒಯ್ಯಿರಿ ಎಂದರೂ, ಅದು ಪಾಲನೆಯಾಗದ ಆದೇಶ ಅನ್ನುವುದು ಜಿಲ್ಲಾಡಳಿತಕ್ಕೆ ಅರಿವು ಇರಬೇಕಿತ್ತು. ಜೊತೆಗೆ, ಬಸ್ ಓಡಿಸುವ ಅವಕಾಶ ಕೊಡುವ ಮೊದಲು ಮಂಗಳೂರು ನಗರದ ಸ್ಥಿತಿ ಹೇಗಿದೆ ಎನ್ನುವ ಅರಿವೂ ಇರಬೇಕಿತ್ತು. ತರಾತುರಿಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕೊಟ್ಟಿದ್ದು ಜಿಲ್ಲಾಡಳಿತದ ಎಡವಟ್ಟಿನ ನಿರ್ಧಾರ ಎನ್ನಬೇಕಷ್ಟೆ.
Lockdown relaxation though DC and Minister Kota has ordered for City buses to operate from 7 am to 1 pm on weekdays President at Dakshina Kannada Bus Operators Association Dilraj Alva has confirmed that operation of private bus services will be unavailable till the end of June.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm