ಬ್ರೇಕಿಂಗ್ ನ್ಯೂಸ್
25-06-21 04:20 pm Udupi Correspondent ಕರಾವಳಿ
Photo credits : Oneindia Kannada
ಉಡುಪಿ, ಜೂನ್ 25: ವಾಹನ ಅಪಘಾತದಲ್ಲಿ ಕಾಲು ಕಳೆದುಕೊಂಡು ಬೀದಿಯಲ್ಲಿ ನರಳಾಡುತ್ತಿದ್ದ ನಾಯಿ ಮರಿಗೆ ಕೊನೆಗೂ ಆಸರೆ ಸಿಕ್ಕಿದೆ. ನಾಯಿ ಮರಿ ಬದುಕಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದವರ ಮಧ್ಯೆ ಮಹಿಳೆಯೊಬ್ಬರು ತನ್ನ ಅಕ್ಕರೆಯಿಂದಲೇ ನಾಯಿ ಮರಿಯಲ್ಲಿ ನಗು ಮೂಡಿಸಿದ್ದಾರೆ.
ಮೂರು ತಿಂಗಳ ಹಿಂದೆ ಉಡುಪಿ ತಾಲೂಕಿನ ಹೊಸಂಗಡಿ ಎಂಬಲ್ಲಿ ರಸ್ತೆ ಬದಿ ನಾಯಿ ಮರಿಯೊಂದು ಯಾವುದೋ ವಾಹನ ಹರಿದು ಕಾಲು ಮುರಿತಕ್ಕೊಳಗಾಗಿ ನರಳುತ್ತಿತ್ತು. ನಾಯಿಯ ಚೀರಾಟ, ನರಳಾಟ ನಡೆದಿದ್ದರೂ, ಯಾರು ಕೂಡ ಸಹಾಯಕ್ಕೆ ಧಾವಿಸಿರಲಿಲ್ಲ.
15 ದಿನಗಳಿಂದ ನಾಯಿ ಮರಿ ರಸ್ತೆ ಬದಿಯಲ್ಲೇ ಜೀವನ್ಮರಣ ಹೋರಾಟ ನಡೆಸುತ್ತಿರುವುದನ್ನು ಕಂಡ ಮಹಿಳೆಯ ಮಾತೃ ಹೃದಯ ಕರಗಿಹೋಗಿದೆ. ಸ್ಥಳೀಯ ನಿವಾಸಿ ಕೆಪಿಸಿಎಲ್‌ನಲ್ಲಿ ಉದ್ಯೋಗದಲ್ಲಿರುವ ಪ್ರಿಯಾ ಎಂಬವರು ನಾಯಿಯನ್ನು ಮನೆಗೆ ಕರೆ ತಂದಿದ್ದಾರೆ.
ಗಾಯಗೊಂಡು 15 ದಿನಗಳಾಗಿದ್ದರಿಂದ ಹಿಂಬದಿಯ ಎರಡೂ ಕಾಲುಗಳ ಗಾಯ ಉಲ್ಬಣಿಸಿ ನಡೆಯಲಾಗದ ಸ್ಥಿತಿಗೆ ತಲುಪಿತ್ತು. ಚಿಕಿತ್ಸೆ ನೀಡಿದ ವೈದ್ಯರು ಕೂಡ ನಾಯಿ ಬದುಕುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು.
ಆದರೆ ಪ್ರಿಯಾ ಅವರು ನಾಯಿ ಮೇಲೆ ತೋರಿದ ಪ್ರೀತಿಯೇ ನಾಯಿಯನ್ನು ಮತ್ತೆ ಬದುಕಿಸಿದೆ. ಆದರೆ ಹಿಂಬದಿಯ ಎರಡೂ ಕಾಲುಗಳು ಊಣಗೊಂಡು ನಿಷ್ಕ್ರಿಯವಾಗಿದೆ. ಆದರೂ ನಾಯಿ ಅತ್ತಿತ್ತ ಓಡಾಡಲೇಬೇಕೆಂದು ಆಲೋಚಿಸಿದ ಪ್ರಿಯಾ, ಅದಕ್ಕಾಗಿ ಹೊಸ ಪ್ರಯೋಗ ಮಾಡಿದ್ದಾರೆ.
ಆನ್‌ಲೈನ್ ಮೂಲಕ ಎರಡು ಪುಟ್ಟ ಚಕ್ರಗಳನ್ನು ತರಿಸಿಕೊಂಡು ನಾಯಿಯ ಹಿಂಗಾಲಿನ ಬದಲಿಗೆ ಸಾಧನ ಜೋಡಿದ್ದಾರೆ. ಪಿವಿಸಿ ಪೈಪ್‌ಗೆ ಚಕ್ರವನ್ನು ಜೋಡಿಸಿ ಎರಡು ಕಾಲುಗಳ ನಡುವೆ ಚಕ್ರಗಳು ಚಲಿಸುವಂತೆ ಮಾಡಿ ಯಶಸ್ವಿಯಾಗಿದ್ದಾರೆ.
ನೆಲದಲ್ಲಿ ತೆವಳಿಕೊಂಡೇ ಸಾಗುತ್ತಿದ್ದ ನಾಯಿ, ಚಕ್ರ ಬಳಸಿಕೊಂಡು ಅತ್ತಿತ್ತ ತೆರಳಲು ಅಭ್ಯಾಸವಾಗುವಂತೆ ತರಬೇತಿ ನೀಡಿದ್ದಾರೆ. ಕೃತಕ ಕಾಲು ಜೋಡಣೆಯ ನಂತರ ಪುಟ್ಟ ನಾಯಿಯಲ್ಲಿ ಲವಲವಿಕೆ ಬಂದಿದೆ. ತುಂಬಾ ಖುಷಿಯಿಂದ ಅತ್ತಿಂದಿತ್ತ ಓಡಾಡಿದೆ. ಬದುಕಲು ಸಾಧ್ಯವೇ ಇಲ್ಲವೆಂದು ಭಾವಿಸಿದ್ದ ನಾಯಿ, ತಾಯಿ ಪ್ರೀತಿಯಿಂದಲೇ ಬದುಕಿ ಗೆಲುವಿನ ನಗೆ ಬೀರಿದೆ.
After a puppy met with a Roadside accident Priya from Udupi who is soft-hearted, saw that the puppy in question, which somehow recovered from the accident, could not walk. She prepared a wheel cart by creating her own technology, tied it to the cart with the help of a belt, and enabled it to move around.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 03:24 pm
Mangalore Correspondent
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
ಸ್ಪೀಕರ್ ಆಗಿ ಹತ್ತು ದೇಶ ಸುತ್ತಿದ ಯುಟಿ ಖಾದರ್ ; ಜ...
28-11-24 01:25 pm
Mangalore Cyber Fraud, Crime: ಜಾಲತಾಣದಲ್ಲಿ ಲೈಕ...
27-11-24 11:04 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm