ಬ್ರೇಕಿಂಗ್ ನ್ಯೂಸ್
26-06-21 08:56 pm Mangaluru Correspondent ಕರಾವಳಿ
ಕಾರ್ಕಳ, ಜೂನ್ 26: ನೆಹರು ಅಧಿಕಾರ ದಾಹದಿಂದಾಗಿ ಸ್ವಾತಂತ್ರ್ಯ ಕಾಲದಲ್ಲಿ ಅಖಂಡ ಭಾರತ ವಿಭಜನೆಯಾಗಿತ್ತು. ಆದರೆ, ಇನ್ನು ಹತ್ತು ವರ್ಷ ಕಾದರೆ, ಅಖಂಡ ಭಾರತ ಮತ್ತೆ ಸ್ವತಂತ್ರವಾಗಲಿದ್ದು, ಸದೃಢ ಭಾರತದ ಕನಸು ನನಸಾಗಲಿದೆ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಅವರು ಕಾರ್ಕಳದ ಶಾಸಕರ ಕಚೇರಿಯಲ್ಲಿ 1975ರ ತುರ್ತು ಪರಿಸ್ಥಿತಿಯ ಕರಾಳ ದಿನಗಳ ವಿಷಯದಲ್ಲಿ ಉಪನ್ಯಾಸ ನೀಡಿದರು. ಲಕ್ಷಾಂತರ ಮಂದಿಯ ಬಲಿದಾನ, ಚಳವಳಿಯಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಆದರೆ, ಇಂದಿರಾ ಗಾಂಧಿಯ ಕಾಲದಲ್ಲಿ ಭ್ರಷ್ಟಾಚಾರ, ಸರ್ವಾಧಿಕಾರ ಮೇರೆ ಮೀರಿದ್ದರಿಂದ ಜನತೆ ತಿರುಗಿ ಬೀಳುವ ಹಂತಕ್ಕೆ ಬಂದು ಮುಟ್ಟಿತ್ತು. ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು. ಇದರಿಂದ ಬೆದರಿದ ರೈಲ್ವೇ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆದರೆ, ಪ್ರಧಾನಿ ಸ್ಥಾನದಲ್ಲಿದ್ದ ಇಂದಿರಾ ಗಾಂಧಿ ಕೇವಲ ತನ್ನ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಇಡೀ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ರಾತ್ರೋರಾತ್ರಿ ಈ ರೀತಿಯ ನಿರ್ಧಾರವನ್ನು ದೇಶದ ಮೇಲೆ ಹೇರಿ, ಪ್ರತಿಪಕ್ಷದ ನಾಯಕರಾದ ವಾಜಪೇಯಿ, ಆಡ್ವಾಣಿಯಂತವರನ್ನು ರಾತ್ರಿ ಬೆಳಗಾಗುವುದರ ಒಳಗೆ ಜೈಲಿಗೆ ತಳ್ಳಿದ್ದರು.
ತುರ್ತು ಪರಿಸ್ಥಿತಿಯ ಬಳಿಕ ನಡೆದ ಚುನಾವಣೆಯಲ್ಲಿ ಜನತಾ ಪಾರ್ಟಿ ಅತ್ಯಧಿಕ ಸ್ಥಾನಗಳನ್ನು ಪಡೆಯಿತು. ತನ್ನ ಸೋಲಿನಿಂದ ಕೆರಳಿದ ಇಂದಿರಾ ಗಾಂಧಿ, ತನ್ನೆಲ್ಲಾ ಸೋಲಿಗೆ ಆರೆಸ್ಸೆಸ್ ಕಾರಣ ಎಂದು ದೂಷಣೆ ಮಾಡಿದರು. ತುರ್ತು ಸ್ಥಿತಿಯ ಕಾಲದಲ್ಲಿ ಜನರ ಜೊತೆಗೆ ನಿಂತು ಇಂದಿರಾ ವಿರುದ್ಧ ಹೋರಾಟ ನಡೆಸಿದ್ದಕ್ಕೆ ಆರೆಸ್ಸೆಸ್ ಸಂಘಟನೆಯನ್ನು ದೂರಿದರು. ಅಂದು ದೇಶದ ಮೇಲೆ ಹೇರಿದ್ದ ತುರ್ತು ಸ್ಥಿತಿಯನ್ನು ವಿರೋಧಿಸಿ ಆರೆಸ್ಸೆಸ್ ಹೋರಾಟ ನಡೆಸಿದ್ದರಿಂದ ದೇಶ ಇಂದು ಸದೃಢವಾಗಿ ಬೆಳೆದು ನಿಂತಿದೆ ಎಂದು ಪ್ರಭಾಕರ ಭಟ್ ವಿಶ್ಲೇಷಿಸಿದರು.
If we had waited for ten more years, undivided India would have become independent and the dream of integrated India would have become a reality," said Rashtriya Swayamsevak Sangh (RSS) leader, Dr Prabhakar Bhat Kalladka. He was speaking at the live programme on the dark days of 1975 emergency held at the office of the MLA in Mangalore.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 09:19 pm
HK News Staffer
ವಿಶೇಷ ಪೂಜೆಗೆ ಬೆತ್ತಲೆ ಫೋಟೊ ಕಳಿಸು, 30 ಲಕ್ಷ ಕೊಡ್...
03-05-26 02:31 pm
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm