ಬ್ರೇಕಿಂಗ್ ನ್ಯೂಸ್
30-06-21 10:00 pm Richard, Mangaluru ಕರಾವಳಿ
ಮಂಗಳೂರು, ಜೂನ್ 30: ಮಂಗಳೂರು ನಗರದಲ್ಲಿ ಜುಲೈ ಒಂದರಿಂದಲೇ ಖಾಸಗಿ ಸಿಟಿ ಬಸ್ ಆರಂಭಿಸಲು ಬಸ್ ಮಾಲಕರ ಸಂಘ ನಿರ್ಧರಿಸಿದೆ. ಆದರೆ, ಬಸ್ ದರವನ್ನು 20 ಶೇಕಡಾ ಏರಿಸುವುದಾಗಿ ಸಿಟಿ ಬಸ್ ಮಾಲಕರ ಸಂಘ ಅಧ್ಯಕ್ಷ ದಿಲ್ ರಾಜ್ ಆಳ್ವ ತಿಳಿಸಿದ್ದಾರೆ.
ವಾರದ ಹಿಂದೆ ಲಾಕ್ಡೌನ್ ಸಡಿಲಿಕೆ ಆದರೂ, ಜುಲೈ ಬಳಿಕವೇ ಖಾಸಗಿ ಬಸ್ ಆರಂಭಿಸುವುದಾಗಿ ಬಸ್ ಮಾಲಕರು ತಿಳಿಸಿದ್ದರು. ಅದರಂತೆ, ಸಿಟಿ ಬಸ್ ಗಳನ್ನು ಜುಲೈ ಒಂದರಿಂದ ಆರಂಭಿಸಲು ನಿರ್ಧರಿಸಿದ್ದು ಆರಂಭದಲ್ಲಿ ಕೆಲವು ರೂಟ್ ಗಳಲ್ಲಿ ಸೀಮಿತ ಬಸ್ ಗಳನ್ನು ಮಾತ್ರ ರಸ್ತೆಗಿಳಿಸುವುದಾಗಿ ತಿಳಿಸಿದ್ದಾರೆ.
20 ಶೇ. ದರ ಏರಿಕೆಯೊಂದಿಗೆ ಬಸ್ ಇಳಿಸಲಾಗುತ್ತಿದೆ. ಆದರೆ ಆರಂಭದಲ್ಲಿ ಸೀಮಿತ ಸಂಖ್ಯೆಯ ಬಸ್ ಗಳನ್ನು ಇಳಿಸಿ, ಜುಲೈ 5 ರ ನಂತರ ಪೂರ್ಣ ಮಟ್ಟದಲ್ಲಿ ಬಸ್ ಗಳನ್ನು ರಸ್ತೆಗೆ ಇಳಿಸುವುದಾಗಿ ಖಾಸಗಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವಾ ತಿಳಿಸಿದ್ದಾರೆ.
ಆದರೆ, ಖಾಸಗಿ ಬಸ್ ಗಳ ದರ ಏರಿಕೆಗೆ ಜಿಲ್ಲಾಡಳಿತ ಒಪ್ಪಿಗೆ ನೀಡಿಲ್ಲ. ಆರ್ ಟಿಓ ಅಧಿಕಾರಿಗಳು ಮತ್ತು ಖಾಸಗಿ ಬಸ್ ಮಾಲಕರನ್ನು ಕರೆದು ಮೀಟಿಂಗ್ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ, ಖಾಸಗಿ ಬಸ್ ಮಾಲಕರು ದರ ಏರಿಸಿಯೇ ಸಂಚಾರ ನಡೆಸುವುದಾಗಿ ಹೇಳಿದ್ದಾರೆ. ಡೀಸೆಲ್ ದರ ಏರಿಕೆ ಆಗಿರುವುದರಿಂದ ಬಸ್ ದರ ಏರಿಕೆ ಅನಿವಾರ್ಯ. ಅಲ್ಲದೆ, 50 ಶೇ. ಅಷ್ಟೇ ಪ್ರಯಾಣಿಕರನ್ನು ಒಯ್ಯಲು ಅವಕಾಶ ಇರುವುದರಿಂದ ದರ ಏರಿಸದೆ ವಿಧಿಯಿಲ್ಲ ಎನ್ನುತ್ತಿದ್ಡಾರೆ.
After over a month of lockdown period, private buses will begin to ply in Mangalore from July 1, duly following Covid protocols with 50% seating capacity and 20 per cent hike in fares.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm