ಬ್ರೇಕಿಂಗ್ ನ್ಯೂಸ್
05-07-21 04:00 pm Mangalore Correspondent ಕರಾವಳಿ
ಉಳ್ಳಾಲ, ಜು.5: ಬೀಚ್ ಗಳಲ್ಲಿ ಪ್ಲಾಸ್ಟಿಕ್ ಎಸೆಯದೆ ಅದನ್ನು ಸಂಗ್ರಹಿಸಿ ಮರುಬಳಕೆಯ ತಾಂತ್ರಿಕತೆಗೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಷನ್ ನಿಂದ ಜಿಲ್ಲೆಯ ಪ್ರಥಮ ಪ್ಲಾಸ್ಟಿಕ್ ಸಂಗ್ರಹ ಕೇಂದ್ರವನ್ನು ಉಳ್ಳಾಲ ಬೀಚಲ್ಲಿ ಸ್ಥಾಪಿಸಲಾಗಿದೆ.
ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಅವರು ನೂತನ ಪ್ಲಾಸ್ಟಿಕ್ ಸಂಗ್ರಹಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಪ್ಲಾಸ್ಟಿಕ್ ಇವತ್ತು ಪೃಕೃತಿಗೆ ಮಾರಕವಾಗಿ ಪರಿಣಮಿಸಿದೆ. ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಎಸೆದು ಪರಿಸರವನ್ನು ಕೆಡಿಸುವ ಕಾರ್ಯ ಸಲ್ಲದು. ಪ್ಲಾಸ್ಟಿಕನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಸಂಗ್ರಹ ಕೇಂದ್ರವನ್ನು ಜಿಲ್ಲೆಯಲ್ಲಿ ಮೊದಲಾಗಿ ಉಳ್ಳಾಲ ಬೀಚಲ್ಲಿ ಸ್ಥಾಪಿಸಿದ್ದು ಸ್ವಾಗತಾರ್ಹ ಎಂದರು.





ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಶನ್ ನಿರ್ದೇಶಕರಾದ ಚಂದನ್ ಎಂ.ಸಿ. ಮಾತನಾಡಿ ಸಮುದ್ರಗಳಲ್ಲಿ ಪ್ರತಿ ವರ್ಷ ಸುಮಾರು 8 ಮಿಲಿಯನ್ ಟನ್ ಪ್ಲಾಸ್ಟಿಕ್ ದಡಗಳಲ್ಲಿ ಸೇರುವುದರಿಂದ ತೀರದ ಪರಿಸರ ವ್ಯವಸ್ಥೆಗಳಿಗೆ ಗಂಭೀರ ಪರಿಣಾಮ ಬೀರುತ್ತವೆ. ಆದುದರಿಂದ ನಾವು ಬಳಸುವ ಪ್ಲಾಸ್ಟಿಕನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡುವುದು ಪ್ರಸ್ತುತ ಸಮಯದಲ್ಲಿ ಅತೀ ಅವಶ್ಯಕವಾಗಿದೆ. ಸಮುದ್ರ ತೀರದಲ್ಲಿ ಬರುವ ಜನರು ಬಳಸಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಮರುಬಳಕೆ ಮಾಡುವ ತಾಂತ್ರಿಕ ಘಟಕಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಸಲಾಗುತ್ತದೆ. ಅಲ್ಲದೆ ಪ್ರದೇಶದ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ತರುವ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರಿಗೆ ವಿಶೇಷ ನಿಗದಿತ ಪ್ರೋತ್ಸಾಹವನ್ನು ನೀಡಲಾಗುವುದೆಂದರು. ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಶನ್ ಉಳ್ಳಾಲ ನಗರಸಭೆಯ ಸಹಕಾರದೊಂದಿಗೆ ಉಳ್ಳಾಲ ಬೀಚಲ್ಲಿ ಪ್ಲಾಸ್ಟಿಕ್ ಸಂಗ್ರಹ ಕೇಂದ್ರವನ್ನ ಸ್ಥಾಪಿಸಿದ್ದು ಸಮುದ್ರ ತೀರಕ್ಕೆ ಬರುವ ಜನರು ಇದರ ಮಹತ್ವವನ್ನು ಅರಿತು ಸದುಪಯೋಗ ಪಡೆಯಬೇಕೆಂದರು.
ಉಳ್ಳಾಲ ನಗರಸಭಾ ಆಯುಕ್ತರಾದ ರಾಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಝರಿನಾ ಭಾನು,ನಗರ ಸಭಾ ಸದಸ್ಯರಾದ ಸಪ್ನ ಹರೀಶ್ ,ವೀಣಾ ಡಿಸೋಜ, ಶಶಿಕಲಾ, ಜಬ್ಬಾರ್, ಖಲೀಲ್, ಯು.ಇಸ್ಮಾಯಿಲ್, ರವೂಫ್, ಮಮತಾ, ಮುಖಂಡಾರಾದ ಮನ್ಸೂರ್, ನಝೀರ್, ವಿಜಯ ಕುಂದರ್, ನಿವೃತ್ತ ಶಿಕ್ಷಕರಾದ ವಾಸುದೇವರಾವ್ ,ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಷನ್ ನ ಸಂಯೋಜಕರಾದ ಚರಿತ್ರ, ಜಯಂತಿ ಮೊದಲಾದವರು ಉಪಸ್ಥಿತರಿದ್ದರು.
The first plastic collection center for recycling opens in Mangalore at Ullal Beach. Ullal town municipality corporation president Chandrakanath inagurated the center.
09-02-26 07:20 pm
Bangalore Correspondent
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರ...
09-02-26 12:29 pm
Gadag, No phone, Tv: ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ...
07-02-26 05:09 pm
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
10-02-26 07:31 pm
HK News Desk
ಅಡೂರು ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು...
10-02-26 02:15 pm
ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಕೈದಿ ಫರೀದಾ...
10-02-26 11:44 am
ಕೆನಡಾದಲ್ಲಿ ಗುಂಡಿಟ್ಟು ಕನ್ನಡಿಗ ಸಾಫ್ಟ್ವೇರ್ ಇಂಜಿ...
09-02-26 10:25 pm
ಜಾಗತಿಕ ಷೇರು ಮಾರುಕಟ್ಟೆಯಲ್ಲಿ 'ಆಂಥ್ರೋಪಿಕ್' AI ಬಿ...
09-02-26 12:27 pm
10-02-26 11:03 pm
Mangalore Correspondent
Mangaore, Marriage Fraud: ಹಲವಾರು ಹೆಂಡಿರ ಮುದ್ದ...
10-02-26 08:27 pm
Oman Accident: ಒಮಾನ್ ನಲ್ಲಿ ಭೀಕರ ಅಪಘಾತ ; ಕಾಪು...
09-02-26 11:20 pm
Mangalore Accident, Bus: ನಂತೂರಿನಲ್ಲಿ ಅಪಘಾತಕ್ಕ...
09-02-26 08:02 pm
ಕೆಪಿಟಿ ಜಂಕ್ಷನ್ ಬಳಿಯ ಹೆದ್ದಾರಿ ಡಿವೈಡರ್ ಮುಚ್ಚಿದ್...
09-02-26 02:50 pm
10-02-26 09:05 pm
Bangalore Correspondent
Peter Caddy, Arrest: ಉದ್ಯಮಿಗಳಿಗೆ ಸಾಲ ಕೊಡಿಸುವು...
10-02-26 04:38 pm
Belthangady Fake Kidnap: ಕಾಲೇಜು ವಿದ್ಯಾರ್ಥಿನಿ...
10-02-26 10:59 am
ಜಾಲತಾಣದಲ್ಲೇ ಪಡ್ಡೆ ಹುಡುಗರಿಗೆ ಬಲೆ, ಖತರ್ನಾಕ್ ಪ್...
09-02-26 02:04 pm
ಬೆಳ್ತಂಗಡಿ ; ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತ...
09-02-26 11:26 am