ಬ್ರೇಕಿಂಗ್ ನ್ಯೂಸ್
11-07-21 12:53 pm Richard, Mangaluru Correspondent ಕರಾವಳಿ
ಮಂಗಳೂರು, ಜುಲೈ 11: ಪ್ರವಾಸೋದ್ಯಮ ಸಾಧ್ಯತೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಂಗಳೂರು - ಬೆಂಗಳೂರು ರೈಲಿನಲ್ಲಿ ಗಾಜಿನ ಕಿಟಕಿ ಮತ್ತು ಮೇಲ್ಛಾವಣಿಯುಳ್ಳ ಆಕರ್ಷಕ ವಿಸ್ಟಾ ಡೋಮ್ ವಿಶೇಷ ಬೋಗಿ ಸೌಲಭ್ಯ ಆರಂಭಿಸಲಾಗಿದ್ದು, ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೂತನ ರೈಲು ಸೇವೆಗೆ ಚಾಲನೆ ನೀಡಿದರು.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಹೊಸ ರೀತಿಯ ಸೇವೆಗೆ ಹಸಿರು ನಿಶಾನೆ ನೀಡಿದ ನಳಿನ್ ಕುಮಾರ್ ಕಟೀಲ್, ರೈಲ್ವೆ ಇಲಾಖೆಯಿಂದ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ವಿಸ್ಟಾ ಡೋಮ್ ಸೇವೆ ಆರಂಭಿಸಲಾಗಿದೆ ಎಂದರು.
ದಕ್ಷಿಣ ರೈಲ್ವೇ ಡಿಆರ್ ಎಂ ತ್ರಿಲೋಕ್ ಕೊಠಾರಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಸ್ಟಾ ಡೋಮ್ ಬಗ್ಗೆ ಮಾಹಿತಿ ನೀಡಿದ ತ್ರಿಲೋಕ್ ಕೊಠಾರಿ, ದಕ್ಷಿಣ ಭಾರತದ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಇದನ್ನು ಪರಿಚಯಿಸಲಾಗುತ್ತಿದೆ. ಸಂಪೂರ್ಣ ಹವಾನಿಯಂತ್ರಿತ ಮತ್ತು 180 ಡಿಗ್ರಿ ತಿರುಗುವ ರೀತಿ ಆಸನ ವ್ಯವಸ್ಥೆ ಮಾಡಲಾಗಿದೆ. ಕುಳಿತಲ್ಲೇ ಪ್ರಕೃತಿಯನ್ನು ಆಸ್ವಾದಿಸಲು ಅನುವಾಗುವ ರೀತಿ ಬೋಗಿ ರೆಡಿ ಮಾಡಲಾಗಿದೆ ಎಂದು ಹೇಳಿದರು.
ಮಂಗಳೂರು- ಬೆಂಗಳೂರು ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯಲ್ಲಿ 44 ಆಸನ ಸಾಮರ್ಥ್ಯ ಇದೆ. ವಿಸ್ಟಾಡೋಮ್ ಬೋಗಿಗಳನ್ನು ಚೆನ್ನೈನ ಇಂಟಗ್ರಲ್ ಕೋಚ್ ಫ್ಯಾಕ್ಟರಿ ಎಲ್‌ಎಚ್‌ಬಿ (ಲಿಂಕ್ - ಹಾಫ್ಮನ್- ಬುಶ್ ಪ್ಲಾಟ್‌ಫಾರ್ಮ್ - ತಂತ್ರಜ್ಞಾನ) ಮಾದರಿಯಲ್ಲಿ ತಯಾರಿಸಲಾಗಿದೆ. ಈ ಬೋಗಿಗಳು ಗಾಜಿನ ಮೇಲ್ಚಾವಣಿ ಹೊಂದಿದ್ದು, ಇದು ಬೇಸಿಗೆಯಲ್ಲೂ ಆಕಾಶದ ಸ್ಪಷ್ಟ ನೋಟಗಳನ್ನು ನೀಡುತ್ತದೆ. ಕೋಚ್‌ನಲ್ಲಿ ಸಿಸಿಟಿವಿ ಕಣ್ಗಾವಲು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ಎಲ್‌ಇಡಿ, ಓವನ್ ಮತ್ತು ರೆಫ್ರಿಜರೇಟರ್, ಮಿನಿ ಪ್ಯಾಂಟ್ರಿ, ಮಲ್ಟಿ-ಟೈರ್ಡ್ ಸ್ಟೀಲ್ ಲಗೇಜ್ ಕಪಾಟುಗಳು, ಪ್ರತಿ ಸೀಟಿನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್ ಗಳನ್ನು ಅಳವಡಿಸಲಾಗಿದೆ. ಇದಲ್ಲದೆ, ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲು ಮತ್ತು ಜೈವಿಕ ಶೌಚಾಲಯಗಳನ್ನು ಹೊಂದಿದೆ.
ಮೊದಲ ರೈಲಿನಲ್ಲಿ ಎರಡು ಬೋಗಿಯ 88 ಸೀಟು ಭರ್ತಿಯಾಗಿತ್ತು. ಹೆಚ್ಚಿನವರು ಟೂರಿಸಂ ನೆಲೆಯಲ್ಲಿ ಮಕ್ಕಳ ಜೊತೆ ಪಶ್ಚಿಮ ಘಟ್ಟಗಳ ಸೌಂದರ್ಯ ಸವಿಯಲು ಹೊರಟಿದ್ದರು. ಬೆಂಗಳೂರಿನಲ್ಲಿ ನೆಲೆಸಿರುವ ಗುಜರಾತ್ ಮೂಲದ ಮಹಿಳೆಯೊಬ್ಬರು ಈ ರೈಲಿನಲ್ಲಿ ಪ್ರಯಾಣಿಸುವುದಕ್ಕಾಗಿಯೇ ಮಂಗಳೂರಿಗೆ ಬಂದಿದ್ದರು. ಕುಟುಂಬ ಸಮೇತರಾಗಿ ಮಂಗಳೂರು ಬಂದು ಮೆಟ್ರೋ ರೀತಿಯ ರೈಲಿನಲ್ಲಿ ಕುಳಿತಿದ್ದು ಪ್ರಕೃತಿಯನ್ನು ಸವಿಯಲು ರೆಡಿಯಾಗಿದ್ದರು.
ಇನ್ನೊಬ್ಬ ಬಂಟ್ವಾಳ ಮೂಲದ ಮಹಿಳೆಯೊಬ್ಬರು ಮಕ್ಕಳ ಜೊತೆಗೆ ಬಂದಿದ್ದರು. ಆಕರ್ಷಕ ರೈಲಿನಲ್ಲಿ ಪ್ರಯಾಣಿಸಲು ಬಂದಿದ್ದೇನೆ. ಸಕಲೇಶಪುರ ವರೆಗೆ ಘಟ್ಟಗಳ ಸೌಂದರ್ಯ ಸವಿಯಬಹುದು ಎಂದಿದ್ದಾರೆ.
Video:
South India's first First VISTADOME Train Service from Mangalore to Bengalore launched today at the Mangalore Junction at 9:15 Hours. The maiden run of two Vistadome coaches attached to Mangaluru Junction-Yeshwantpur Weekly Express Special was flagged off on Sunday July 11. The train with Vistadome coaches from the city to capital Bengaluru, will give the passengers an opportunity to view the picturesque sceneries of nature during day time. The Vistadome coaches, will enable the passengers to have a close view of the beautiful nature of Western Ghats. During Monsoon the Ghats will be feast to the eyes with lush green trees and sceneries.
18-07-25 07:11 pm
Bangalore Correspondent
Dharmasthala Case, SIT, CM Siddaramaiah: ಧರ್ಮ...
18-07-25 04:48 pm
Mangalore South ACP Vijayakranti: ಮಂಗಳೂರು ದಕ್...
18-07-25 03:38 pm
Minister Dinesh Gundu Rao, Dharmasthala: ಧರ್ಮ...
17-07-25 07:45 pm
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 03:19 pm
Mangalore Correspondent
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm