ಬ್ರೇಕಿಂಗ್ ನ್ಯೂಸ್
16-07-21 03:37 pm Udupi Correspondent ಕರಾವಳಿ
ಉಡುಪಿ, ಜುಲೈ 16: ಮುಂಬೈನಲ್ಲಿ ಉದ್ಯಮಿಯಾಗಿದ್ದ ಗ್ಯಾಬ್ರಿಯಲ್ ನಜ್ರೆತ್ ತನ್ನನ್ನು ಮೇಲೆ ತಂದಿದ್ದಾಗಿ ನಂಬಿದ್ದ ಗಣಪತಿಯನ್ನು ಉದ್ಯಮದಿಂದ ನಿವೃತ್ತಿಯಾದರೂ ಬಿಡಲಿಲ್ಲ. ಐದು ದಶಕಗಳ ಕಾಲ ಉದ್ಯಮಿಯಾಗಿ ಬಳಿಕ ನಿವೃತ್ತಿಗೊಂಡು ತನ್ನ ಸ್ವಂತ ಊರಿಗೆ ಬಂದು ನೆಲೆಸಿರುವ ಗ್ಯಾಬ್ರಿಯಲ್, ತನ್ನ ಆರಾಧ್ಯ ಗಣಪತಿಗೆ ತನ್ನೂರಲ್ಲೇ ಗುಡಿ ಕಟ್ಟಿಸಿದ್ದಾರೆ. ಎರಡು ಕೋಟಿ ರೂಪಾಯಿ ಖರ್ಚು ಮಾಡಿ, ಸಿದ್ಧಿ ವಿನಾಯಕನಿಗೆ ದೇವಸ್ಥಾನ ಕಟ್ಟಿಸಿ ಲೋಕಾರ್ಪಣೆ ಮಾಡಿದ್ದಾರೆ.
ಐದು ದಶಕಗಳ ಹಿಂದೆ ಬರಿಗೈಯಲ್ಲಿ ಮುಂಬೈನ ದಾದರ್ ಗೆ ತೆರಳಿದ್ದ ಗ್ಯಾಬ್ರಿಯಲ್ ಅಲ್ಲಿನ ಸಿದ್ಧಿವಿನಾಯಕ ದೇವಸ್ಥಾನದ ಬಳಿಯೇ ನೆಲೆಸಿದ್ದರು. ನೋಡ ನೋಡುತ್ತಲೇ ಉದ್ಯಮ ಸ್ಥಾಪಿಸಿ, ಯಶಸ್ಸು ಪಡೆದ ಗ್ಯಾಬ್ರಿಯಲ್ ತನ್ನ ಉನ್ನತಿಗೆ ಗಣಪತಿಯೇ ಕಾರಣವೆಂದು ನಂಬಿದ್ದರು. ಆಬಳಿಕ ದಾದರ್ ಸಿದ್ಧಿವಿನಾಯಕನ ಅನನ್ಯ ಭಕ್ತರೂ ಆಗಿದ್ದರು. ಉದ್ಯಮದಲ್ಲಿ ಅಪಾರ ಲಾಭ ಗಳಿಸಿದ ಗ್ಯಾಬ್ರಿಯಲ್, ಎರಡು ವರ್ಷಗಳ ಹಿಂದೆ ಕೆಲಸಕ್ಕೆ ನಿವೃತ್ತಿ ಘೋಷಿಸಿ, ತಮ್ಮ ಸ್ವಂತ ಊರಾದ ಶಿರ್ವಕ್ಕೆ ಬಂದು ನೆಲೆಸಿದ್ದಾರೆ.
ಶಿರ್ವದಲ್ಲಿಯೇ ವಿನಾಯಕನ ದೇವಸ್ಥಾನ ಕಟ್ಟಿಸಬೇಕೆಂದು ತಮ್ಮದೇ ಜಮೀನಿನಲ್ಲಿ ದೇಗುಲ ಕಟ್ಟಿಸಿದ್ದಾರೆ. ಆರು ತಿಂಗಳ ಹಿಂದೆಯೇ ದೇವಸ್ಥಾನದ ಕಾಮಗಾರಿ ಆಗಿತ್ತು. ಆದರೆ, ಲಾಕ್ಡೌನ್ ಕಾರಣದಿಂದ ದೇವಸ್ಥಾನದ ಲೋಕಾರ್ಪಣೆ ಕಾರ್ಯ ಮುಂದೂಡಿಕೆಯಾಗಿತ್ತು. ಇದೀಗ ಜುಲೈ 14, 15 ಮತ್ತು 16ರಂದು ಪ್ರತಿಷ್ಠಾ ಉತ್ಸವ ನಡೆದಿದ್ದು, ಕನ್ನರ್ಪಾಡಿ ಜ್ಯೋತಿಷ್ಯ ವಿದ್ವಾನ್ ಸಂದೀಪ ಉಪಾಧ್ಯಾಯರ ನೇತೃತ್ವದಲ್ಲಿ ವಿಧಿಗಳು ನಡೆದಿವೆ. ಗುರುವಾರ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಕಾರ್ಯ ನಡೆದಿದೆ.
ಈ ವೇಳೆ, ದೇವಳದ ನಿರ್ಮಾತೃ ಗ್ಯಾಬ್ರಿಯಲ್ ನಜ್ರತ್, ದೇಗುಲದ ನಿರ್ಮಾಣದ ಉಸ್ತುವಾರಿ ನಾಗೇಶ ಹೆಗ್ಡೆ ಸೇರಿದಂತೆ ಸೀಮಿತ ಸಂಖ್ಯೆಯಲ್ಲಿ ಸ್ಥಳೀಯ ಭಕ್ತರು ಹಾಜರಿದ್ದರು. ಜನರಿಂದ ಯಾವುದೇ ದೇಣಿಗೆ ಸ್ವೀಕರಿಸದೆ ದೇವಸ್ಥಾನ ನಿರ್ಮಾಣ ಕಾರ್ಯ ಮುಗಿಸಿದ್ದು, ದೇಗುಲದಲ್ಲಿ ಪೂಜಾ ಕಾರ್ಯಕ್ಕೆ ಅರ್ಚಕರನ್ನೂ ನೇಮಿಸಿದ್ದಾರೆ. ಅರ್ಚಕರು ಉಳಕೊಳ್ಳಲು ದೇವಸ್ಥಾನದ ಬಳಿಯಲ್ಲೇ ಮನೆಯನ್ನೂ ನಿರ್ಮಿಸಿಕೊಡುವುದಾಗಿ ಗ್ಯಾಬ್ರಿಯಲ್ ತಿಳಿಸಿದ್ದಾರೆ.
ಗ್ಯಾಬ್ರಿಯಲ್ ತಮ್ಮ ಹೆತ್ತವರ ನೆನಪಿಗಾಗಿ ದೇವಸ್ಥಾನವನ್ನು ಅರ್ಪಿಸಿದ್ದಾರೆ. ಶಿಲಾಫಲಕದಲ್ಲಿ ಹೆತ್ತವರಾದ ದಿ.ಪಾಬಿಯನ್ ನಜ್ರತ್ ಮತ್ತು ಸಬೀನಾ ನಜ್ರತೆ ನೆನಪಿಗಾಗಿ ಎಂದು ನಮೂದಿಸಿದ್ದಾರೆ. ಶಿರ್ವದಲ್ಲಿ ಕ್ರಿಸ್ತಿಯನ್ ವ್ಯಕ್ತಿಯೊಬ್ಬರು ಹಿಂದುಗಳ ಆರಾಧನೆಯ ದೇಗುಲವನ್ನು ನಿರ್ಮಿಸಿದ್ದು , ಧಾರ್ಮಿಕ ಸಾಮರಸ್ಯದ ಸಂಕೇತ ಎನ್ನುವ ರೀತಿ ಪ್ರಸಿದ್ಧಿ ಪಡೆದಿದೆ. ಸ್ಥಳೀಯರು ಗ್ಯಾಬ್ರಿಯಲ್ ಕೆಲಸವನ್ನು ಕೊಂಡಾಡಿದ್ದು, ದೇಗುಲಕ್ಕೆ ದೇಣಿಗೆ ಸ್ವೀಕಾರ ಮಾಡಿಲ್ಲ. ತಮ್ಮದೆಂದು ದೀಪ, ಗಂಟೆಗಳಾದರೂ ಇರಲಿ ಎಂದು ಅದನ್ನು ದೇವರಿಗೆ ಅರ್ಪಿಸಿದ್ದಾರೆ.
Lord Siddhivinayaka temple built by Gabriel Nazareth at Shirva dedicated to world. The consecration programme of Lord Siddhivinayaka temple which has been built by former entrepreneur and ardent devotee of Lord Siddhivinayaka, Gabriel Nazareth, in his own land at Shirva, on Thursday July 15.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm