ಬ್ರೇಕಿಂಗ್ ನ್ಯೂಸ್
17-07-21 11:10 am Mangaluru Correspondent ಕರಾವಳಿ
ಉಳ್ಳಾಲ, ಜು.17: ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಗಾಳಿ ಮಳೆ ಸುರಿಯುತ್ತಿದ್ದು ಸೋಮೇಶ್ವರ, ಉಚ್ಚಿಲದಲ್ಲಿ ಮತ್ತೆ ಕಡಲು ಪ್ರಕ್ಷುಬ್ಧಗೊಂಡಿದೆ. 130 ಕೋಟಿ ವೆಚ್ಚದ ಅವೈಜ್ಞಾನಿಕ ಬ್ರೇಕ್ ವಾಟರ್ ಕಾಮಗಾರಿಯಿಂದ ಬಟ್ಟಂಪಾಡಿ ಬೀಚ್ ರಸ್ತೆಯೇ ಕಡಲು ಪಾಲಾಗಿದೆ.
ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಕಡಲು ಪ್ರಕ್ಷುಬ್ದಗೊಂಡಿರುವ ಪರಿಣಾಮ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಅಲೆಗಳ ಹೊಡೆತಕ್ಕೆ ಬಟ್ಟಂಪಾಡಿ ಬೀಚ್ ಸಂಪರ್ಕದ ರಸ್ತೆಯೇ ಕೊಚ್ಚಿ ಕೊಂಡು ಹೋಗಿದೆ. ಕಳೆದ ಬಾರಿಯೂ ಬಟ್ಟಂಪಾಡಿ ಬೀಚ್ ರಸ್ತೆಯು ಸಮುದ್ರದ ಭಾರೀ ಗಾತ್ರದ ಅಲೆಗಳಿಗೆ ಕೊಚ್ಚಿ ಹೋಗಿತ್ತು. ಮತ್ತೆ ಕಲ್ಲು ಮಣ್ಣು ಹಾಕಿ ರಸ್ತೆಯನ್ನ ಪುನರ್ ನಿರ್ಮಿಸಲಾಗಿತ್ತು. ಸಮುದ್ರದಲ್ಲಿ ಬೀಸುವ ಭಾರೀ ಗಾಳಿಗೆ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಸೋಮೇಶ್ವರ, ಉಚ್ಚಿಲ ತೀರ ಪ್ರದೇಶದ ಅನೇಕ ಮನೆಗಳು ಅಪಾಯದಂಚಿನಲ್ಲಿವೆ.
ಇತಿಹಾಸ ಪ್ರಸಿದ್ದ ಸೋಮೇಶ್ವರ ಸೋಮನಾಥ ದೇವಸ್ಥಾನ ಬಳಿಯೂ ಕಡಲು ತೀವ್ರಗೊಂಡಿದ್ದು ನಾಡ ದೋಣಿ ಮೀನುಗಾರರಿಗೆ ತಮ್ಮ ದೋಣಿ ನಿಲ್ಲಿಸಲು ಇದ್ದ ದೇವಸ್ಥಾನದ ಬಳಿಯ ಏಕೈಕ ಸ್ಥಳ ಸಮುದ್ರ ಪಾಲಾಗಿದೆ. ಬಡ ನಾಡದೋಣಿ ಮೀನುಗಾರರು ದೋಣಿ ನಿಲ್ಲಿಸಲು ಜಾಗ ಇಲ್ಲದೆ ಬವಣೆ ಪಡುವಂತಾಗಿದೆ. ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನಿರ್ಮಿಸಲಾದ ಸೋಮನಾಥ ದೇವಸ್ಥಾನ - ಸಮುದ್ರ ತೀರದ ಸಂಪರ್ಕ ಮೆಟ್ಟಿಲುಗಳು ಸಮುದ್ರ ಪಾಲಾಗಿದೆ.
ಬ್ರೇಕ್ ವಾಟರ್ ನೆಪ, ಎಡಿಬಿಯಿಂದ 130 ಕೋಟಿ ಹೋಮ
ಎಡಿಬಿ ಯೋಜನೆಯಡಿ ಸುಮಾರು 130 ಕೋಟಿ ರೂಪಾಯಿ ವೆಚ್ಚದಲ್ಲಿ ಉಚ್ಚಿಲ ಪ್ರದೇಶದಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆದಿದೆ. ಆದರೆ ಸ್ಥಳೀಯರನ್ನು ಗಣನೆಗೆ ತೆಗೆಯದೆ ಸಮುದ್ರದಲ್ಲಿ ನಡೆಸಲಾದ ಅವೈಜ್ಞಾನಿಕ ರೀಫ್ ಕಾಮಗಾರಿಯಿಂದ ಬ್ರೇಕ್ ವಾಟರ್ ಯೋಜನೆ ನೀರಲ್ಲಿ ಹೋಮ ಇಟ್ಟಂತಾಗಿದೆ ಎಂದು ಸ್ಥಳೀಯ ಮಾಜಿ ತಾ.ಪಂ ಸದಸ್ಯರಾದ ರವಿಶಂಕರ್ ಸೋಮೇಶ್ವರ ಆರೋಪಿಸಿದ್ದಾರೆ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೇ, ನಿರ್ಲಕ್ಷ್ಯದಿಂದ ಮಾಡಿದ ಕಾಮಗಾರಿಯಿಂದಾಗಿ ಉಚ್ಚಿಲ ಮತ್ತು ಸೋಮೇಶ್ವರ ದಲ್ಲಿ ಹಿಂದೂ ರುದ್ರ ಭೂಮಿ ಸೇರಿ ಹಲವಾರು ಸಾರ್ವಜನಿಕ ಆಸ್ತಿ ಪಾಸ್ತಿ ನಶಿಸಿದೆ. ಪ್ರತೀ ಬಾರಿಯೂ ಅಧಿಕಾರಿಗಳು ಕಡಲ್ಕೊರೆತದ ಸಂದರ್ಭಗಳಲ್ಲೇ ಮೂಗು ತೂರಿಸಿ ಕೋಟಿ ಗಟ್ಟಲೆ ಹಣ ನುಂಗುವ ಯೋಜನೆಗಳನ್ನು ನಡೆಸಿ ಸ್ಥಳೀಯರಿಗೆ ಅನ್ಯಾಯವೆಸಗುತ್ತಿದ್ದಾರೆ. ಸಮುದ್ರಕ್ಕೆ ಕೋಟಿಗಟ್ಟಲೆ ಹಣ ಸುರಿದು ವ್ಯರ್ಥ ಕಾಮಗಾರಿ ನಡೆಸಿದರೆ ಏನು ಪ್ರಯೋಜನ..? ಇಂತಹ ಕಾಮಗಾರಿಗಳ ಗುಣ ಮಟ್ಟವನ್ನ ಪರಿಶೀಲಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಅರಿತಿರುವ ಅಧಿಕಾರಿಗಳು ಪ್ರತೀ ಬಾರಿಯೂ ಸರಕಾರದ ಕೋಟಿಗಟ್ಟಲೆ ಹಣವನ್ನು ಚಿಂದಿ ಉಡಾಯಿಸಿ ಸ್ಥಳೀಯರ ಕಿವಿಗೆ ಹೂ ಇಡುತ್ತಿದ್ದಾರೆಂದು ರವಿಶಂಕರ್ ಹೇಳಿದ್ದಾರೆ.
Mangalore Heavy rains Ullal Someshwara Sea washes away sand wall may take road too. The sand wall built by the administration to protect the fisheries road from sea erosion got completely washed away and it is a matter of hours before the road too gets swallowed by the raging waves of the Arabian Sea at Ullal Someshwara.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm