ಬ್ರೇಕಿಂಗ್ ನ್ಯೂಸ್
17-07-21 08:32 pm Mangaluru Correspondent ಕರಾವಳಿ
ಮಂಗಳೂರು, ಜುಲೈ 17: ಕಂಬಳ ಓಟಗಾರ ಮಿಜಾರು ಶ್ರೀನಿವಾಸ ಗೌಡ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ ಪ್ರಕರಣದಲ್ಲಿ ರಾಮಸೇನೆಯ ಕಾರ್ಯಕರ್ತ ಪ್ರಶಾಂತ್ ಬಂಗೇರ ಎಂಬಾತನನ್ನು ಮೂಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕೇಬಲ್ ವಾಹಿನಿಯಲ್ಲಿ ನಡೆದ ಕಂಬಳದ ಸಾಧಕರ ಕುರಿತ ಕಾರ್ಯಕ್ರಮದಲ್ಲಿ ಪ್ರಶಾಂತ್ ಬಂಗೇರ ಕರೆ ಮಾಡಿ, ಮಾತನಾಡಿದ್ದರು. ಹಿಂದೆಲ್ಲಾ ಇರ್ವತ್ತೂರು ಆನಂದ, ಅಳದಂಗಡಿ ರವಿ ಕುಮಾರ್, ದೇವೇಂದ್ರ ಕೋಟ್ಯಾನ್ ಸೇರಿದಂತೆ ಹಲವರು ಕಂಬಳದಲ್ಲಿ ನಿಜವಾದ ಸಾಧಕರಾಗಿದ್ದರು. ಆದರೆ ಈಗಿನ ಕಂಬಳದಲ್ಲಿ ಅಕಾಡೆಮಿಯಿಂದ ತರಬೇತುಗೊಂಡು ಬರುತ್ತಿರುವ ಮಂದಿಯನ್ನು ಮಾತ್ರ ಹೆಚ್ಚಿನ ಅವಕಾಶ ಕೊಡುತ್ತಿದ್ದಾರೆ. ಇದರಿಂದಾಗಿ ಹಳೆಯ ಸಾಧಕರು ಮರೆಗೆ ಸರಿಯುತ್ತಿದ್ದಾರೆ. ಈಗಿನವರನ್ನು ಉಸೇನ್ ಬೋಲ್ಟ್ ಎಂಬ ಹೆಸರಲ್ಲಿ ಪ್ರಚಾರ ಕೊಡುತ್ತಿದ್ದು ಇದು ಸರಿಯಲ್ಲ ಎಂದು ಹೇಳಿದ್ದರು.

ಪರೋಕ್ಷವಾಗಿ ಶ್ರೀನಿವಾಸ ಗೌಡರನ್ನು ವಿರೋಧಿಸಿ ಪ್ರಶಾಂತ ಬಂಗೇರ ಮಾತನಾಡಿದ್ದು ಶ್ರೀನಿವಾಸ ಗೌಡರ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು. ಆಬಳಿಕ ಮೂಡುಬಿದ್ರೆಯ ಶ್ರೀನಿವಾಸ ಗೌಡನ ಆಪ್ತನೊಬ್ಬ ಪ್ರಶಾಂತ್ ಬಂಗೇರನಿಗೆ ಕರೆ ಮಾಡಿದ್ದು, ನೀವು ಶ್ರೀನಿವಾಸ ಗೌಡರ ಬಗ್ಗೆ ಹಾಗೆ ಮಾತನಾಡಿದ್ದು ಸರಿಯಲ್ಲ ಎಂದಿದ್ದಾನೆ. ಅದಕ್ಕೆ ನನಗೆ ಕಂಬಳದ ಇತಿಹಾಸ ಗೊತ್ತು. ನಿನಗೆ ಬೇಕಿದ್ದರೆ ಹೇಳಿಕೊಡುತ್ತೇನೆ, ಬುಕ್ ಪೆನ್ ಹಿಡಿದುಕೊಂಡು ಬಾ ಎಂದು ಪ್ರಶಾಂತ್ ಬಂಗೇರ ಹೇಳಿದ್ದಾನೆ. ಹಾಗಾದ್ರೆ ನೋಡೋಣ ಎಂದು ಹೇಳಿ ಅಭಿಮಾನಿ ಕರೆ ಕಟ್ ಮಾಡಿದ್ದ.
ಮರುದಿನ ಶ್ರೀನಿವಾಸ ಗೌಡರ ಮುಂದೆಯೇ ಆತನ ಆಪ್ತ ಪ್ರಶಾಂತ್ ಬಂಗೇರನಿಗೆ ಕರೆ ಮಾಡಿದ್ದು ಇತ್ತ ಶ್ರೀನಿವಾಸ ಗೌಡನೇ ಫೋನಲ್ಲಿ ಮಾತನಾಡಿದ್ದಾರೆ. ಈ ವೇಳೆ, ಪ್ರಶಾಂತ್ ಬಂಗೇರ ಮತ್ತು ಶ್ರೀನಿವಾಸ ಗೌಡ ಮಧ್ಯೆ ವಾಗ್ವಾದ ನಡೆದಿದೆ. ಪ್ರಶಾಂತ್ ಬಂಗೇರ ತನ್ನ ಕಚೇರಿ ಮಂಗಳೂರಿನಲ್ಲಿದ್ದು ನೀನು ತಾಕತ್ತಿದ್ದರೆ ಚರ್ಚೆಗೆ ಬಾ ಎಂದು ಕರೆದಿದ್ದಾನೆ. ಆದರೆ, ಶ್ರೀನಿವಾಸ ಗೌಡ ತಾನು ಮೂಡುಬಿದ್ರೆಯ ಒಂಟಿಕಟ್ಟೆಗೆ ಬರ್ತೇನೆ, ನೀನು ಬಾ ಎಂದು ಸವಾಲು ಹಾಕಿದ್ದಾರೆ. ಅಷ್ಟರಲ್ಲಿ ಪ್ರಶಾಂತ್ ಸಿಟ್ಟಿಗೆದ್ದು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ನಾನು ಒಂಟಿಕಟ್ಟೆಗೆ ಬರ್ತೇನೆ, ನೀನು ಬೆನ್ನಿಗೆ ಹಾಳೆ ಕಟ್ಟಿಕೊಂಡು ರೆಡಿಯಾಗಿರು ಎಂದು ಹೇಳಿದ್ದಲ್ಲದೆ ಸೊಂಟದ ಕೆಳಗಿನ ಭಾಷೆಯಲ್ಲಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ.

ಈ ರೀತಿಯ ಸಂಭಾಷಣೆ, ಜೀವ ಬೆದರಿಕೆ ಹಾಕಿದ್ದ ಆಡಿಯೋ ರೆಕಾರ್ಡ್ ಆಗಿದ್ದು ಆನಂತರ ಜಾಲತಾಣದಲ್ಲಿ ವೈರಲ್ ಆಗಿದೆ. ಕಂಬಳ ಓಟಗಾರ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡರಿಗೆ ಅವಮಾನ ಎನ್ನುವ ರೀತಿ ಕಂಬಳ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಜಿಲ್ಲಾ ಕಂಬಳ ಸಮಿತಿಯ ಪದಾಧಿಕಾರಿಗಳು, ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಯನ್ನು ಬಂಧಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಇಷ್ಟಾಗುತ್ತಿದ್ದಂತೆ ಶ್ರೀನಿವಾಸ ಗೌಡ ಮೂಡುಬಿದ್ರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು, ಆಕ್ರೋಶ ಕೇಳಿಬರುತ್ತಿದ್ದಂತೆ ಪ್ರಶಾಂತ್ ಬಂಗೇರನನ್ನು ಮೂಡುಬಿದ್ರೆ ಪೊಲೀಸರು ವಿಚಾರಣೆಗೆಂದು ಠಾಣೆಗೆ ಕರೆಸಿ ಬಂಧಿಸಿದ್ದಾರೆ. ಪ್ರಶಾಂತ್ ಬಂಗೇರ ಮಂಗಳೂರಿನ ನಿವಾಸಿಯಾಗಿದ್ದರೂ, ಶಿವಮೊಗ್ಗದಲ್ಲಿ ನೆಲೆಸಿದ್ದ ಎನ್ನಲಾಗುತ್ತಿದೆ. ಶಿವಮೊಗ್ಗ, ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ರಾಮಸೇನೆ ಮುಖಂಡನಾಗಿ ಪೋಸು ಕೊಟ್ಟು ಅಲ್ಲಿಯೇ ಇರುತ್ತಿದ್ದ. ಆದರೆ, ಕಂಬಳದ ಬಗ್ಗೆ ಅಭಿಮಾನ ಮತ್ತು ಕೆಲವರ ಮೇಲಿನ ದುರಭಿಮಾನದಿಂದಾಗಿ ಈಗ ಕೇಸು ಜಡಿದುಕೊಂಡು ಜೈಲು ಸೇರಿದ್ದಾನೆ.
Mangalore Kambala racer Srinivas Gowda faces death threat from Ram Sena leader Prashant Bangera has now been arrested by the Moodbidri Police. Srinivas Gowda has filed a complaint against the accused in Moodbidri station. Aswhathpura Srinivas Gowda, popularly known by the name of 'Usain Bolt of Kambala', and who has won the 'Karnataka Kreeda Ratna' award, received a phone call on his mobile phone. The caller reportedly posed a threat to him and derided him. The recording of this call has become viral on social media.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm