ಬ್ರೇಕಿಂಗ್ ನ್ಯೂಸ್
19-07-21 02:40 pm Mangaluru Correspondent ಕರಾವಳಿ
ಬೆಳ್ತಂಗಡಿ, ಜುಲೈ 19: ಗಂಡನ ಕುಡಿತದ ಚಟಕ್ಕೆ ಬೇಸತ್ತು ಪತ್ನಿ ನೇಣಿಗೆ ಶರಣಾಗಿದ್ದರು. ವಿಪರೀತ ಮಳೆಯಿಂದಾಗಿ ಶಾಮಿಯಾನ ಹಾಕಿ ಪತ್ನಿಯ ಅಂತ್ಯಕ್ರಿಯೆ ವಿಧಿಯನ್ನು ನಡೆಸಲಾಗಿತ್ತು. ಆದರೆ, ಮರುದಿನ ಅಂತ್ಯವಿಧಿಗೆ ಹಾಕಿದ್ದ ಶಾಮಿಯಾನದ ಕಂಬಕ್ಕೆ ಗಂಡನೂ ನೇಣು ಹಾಕ್ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ನಡೆದಿದೆ.
ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ ಘಟನೆ ನಡೆದಿದ್ದು ಚಂದ್ರಾವತಿ (49) ಮತ್ತು ಆಕೆಯ ಗಂಡ ಶಿವಪ್ಪ ಗೌಡ (56) ಮೃತರು.
ಚಂದ್ರಾವತಿ ಶನಿವಾರ ಮಧ್ಯಾಹ್ನ ದನಕ್ಕೆ ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದರು. ಆದರೆ, ತೋಟಕ್ಕೆ ಹೋದವರು ಮರಳಿ ಬಂದಿರಲಿಲ್ಲ. ಹುಡುಕಾಟ ನಡೆಸಿದಾಗ, ಆಕೆ ತೋಟದ ಬದಿಯ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂತು.
ಗಂಡನ ವಿಪರೀತ ಕುಡಿತದ ಚಟದಿಂದಾಗಿ ಬೇಸತ್ತಿದ್ದ ಪತ್ನಿ ಚಂದ್ರಾವತಿ ಮನೆಯಲ್ಲಿ ಬದುಕುವುದೇ ಕಷ್ಟ ಎನ್ನುವ ಸ್ಥಿತಿಗೆ ತಲುಪಿದ್ದರು. ಗಂಡನ ಪೀಡನೆಯಿಂದಾಗಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿತ್ತು. ಬಳಿಕ ಅಂದು ರಾತ್ರಿಯೇ ಸ್ಥಳೀಯರು ಸೇರಿ ಮನೆಯ ಆವರಣದಲ್ಲಿ ಮತ್ತು ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಶಾಮಿಯಾನ ಹಾಕಿ, ರಾತ್ರಿ ವೇಳೆಗೆ ಚಂದ್ರಾವತಿಯ ಅಂತ್ಯವಿಧಿ ಮುಗಿಸಿದ್ದರು.
ಮರುದಿನ ಬೆಳಗ್ಗೆ ನೋಡಿದರೆ, ಶಿವಪ್ಪ ಗೌಡ ಅಂತ್ಯ ವಿಧಿಗೆ ಹಾಕಿದ್ದ ಶಾಮಿಯಾನದ ರಾಡಿಗೆ ನೇಣು ಹಾಕ್ಕೊಂಡು ಮೃತಪಟ್ಟಿದ್ದು ಕಂಡುಬಂದಿದೆ. ಶಿವಪ್ಪ ಗೌಡ ಕೂಡ ಅದೇ ರೀತಿ ಅಂತ್ಯ ಕಂಡಿದ್ದು ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ. ಶಿವಪ್ಪ - ಚಂದ್ರಾವತಿ ದಂಪತಿಗೆ ಮಕ್ಕಳು ಇರಲಿಲ್ಲ. ತನ್ನ ತಾಯಿ ನಾಗಮ್ಮ ಜೊತೆ ಮುಡಿಪಿರೆಯಲ್ಲಿ ಶಿವಪ್ಪ ಗೌಡ ವಾಸವಿದ್ದರು. ಈಗ ಮಗ ಮತ್ತು ಸೊಸೆ ಸಾವು ಕಂಡಿದ್ದರಿಂದ ಮನೆಯಲ್ಲಿ ವೃದ್ಧ ತಾಯಿ ಒಬ್ಬಂಟಿಯಾಗಿದ್ದಾರೆ. ಘಟನೆ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In a shocking incident reported from Mudipire in Machina village in the taluk, a man ended his life hanging himself from the rod of the shamiyana erected at the funeral site of his wife. Chandravathi (49), wife of Shivappa Gowda (56), had ended her life on Saturday. Shivappa ended his life in the early hours of Sunday July 18.
04-10-25 07:22 pm
HK News Staffer
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ...
02-10-25 03:50 pm
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
03-10-25 11:07 pm
Mangalore Correspondent
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm