ಬ್ರೇಕಿಂಗ್ ನ್ಯೂಸ್
25-07-21 11:03 pm Mangaluru Correspondent ಕರಾವಳಿ
ಮಂಗಳೂರು, ಜುಲೈ 25: ಟಿವಿ ಜಾಹೀರಾತಿನಲ್ಲಿ ಯುವತಿಯೊಬ್ಬಳು ತಾಯಿ ಜೊತೆಗೆ ಕಾರಿನಲ್ಲಿ ತೆರಳಿದ್ದಾಗ ಟೈರ್ ಪಂಕ್ಚರ್ ಆಗಿ ಬಳಿಕ ಯುವತಿಯೇ ಟೈರ್ ತೆಗೆದು ಹಾಕುತ್ತಾಳೆ. ಕೊನೆಯಲ್ಲಿ ಅಪ್ಪನನ್ನು ನೋಡಿದ್ದೆ ಎಂದುಸುರುತ್ತಾ ಟಾನಿಕ್ ಬಗ್ಗೆ ಹೇಳುತ್ತಾಳೆ. ಅದು ಜಾಹೀರಾತು. ನಿಜ ಜೀವನದಲ್ಲಿ ಯುವತಿ ಕಾರು ಡ್ರೈವ್ ಮಾಡುವಾಗ ಟೈರ್ ಪಂಕ್ಚರ್ ಆದರೆ ಏನು ಗತಿ ? ಇಂಥಾದ್ದೇ ಪ್ರಸಂಗ ಮಂಗಳೂರಿನಲ್ಲಿ ಇವತ್ತು ಆಗಿತ್ತು.
ಮಹಿಳೆ ಮತ್ತು ಮಗು ಮಾತ್ರ ಇದ್ದ ಕಾರೊಂದು ನಾಗುರಿಯಿಂದ ಪಂಪ್ವೆಲ್ ಕಡೆಗೆ ಬರುತ್ತಿದ್ದಾಗ ಟಯರ್ ಪಂಕ್ಚರ್ ಆಗಿತ್ತು. ಕೂಡಲೇ ಕಾರಿನಿಂದಿಳಿದ ಮಹಿಳೆ ಹೊರಗೆ ನಿಂತು ಏನು ಮಾಡುವುದೆಂದು ತೋಚದೆ ನಿಂತಿದ್ದರು. ಆಕೆ ಕುಂದಾಪುರ ಮೂಲದ ಮಹಿಳೆಯಾಗಿದ್ದರಿಂದ ಸಂಬಂಧಿಕರು ಹತ್ತಿರ ಇರಲಿಲ್ಲವೋ ಏನೋ..ಮಹಿಳೆಯ ಅಸಹಾಯಕತೆ ಗಮನಿಸಿದ ನಾಗುರಿ ಸಂಚಾರಿ ಠಾಣಾ ಪೊಲೀಸರು ತಾವೇ ಟೈರ್ ಬಿಚ್ಚಿಸಲು ನೆರವಾಗಿದ್ದಾರೆ. ರಸ್ತೆ ಬದಿ ಕಾರನ್ನು ಪಾರ್ಕ್ ಮಾಡಿ, ಟೈರ್ ತೆಗೆದು ಬೇರೆ ಸ್ಟೆಪಿನ್ ಟಯರ್ ಅಳವಡಿಸಿ ಮಾನವೀಯತೆ ಕಾರ್ಯ ಮಾಡಿದ್ದಾರೆ.
ಕುಂದಾಪುರ ಮೂಲದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ತೆರಳುತ್ತಿದ್ದಾಗ ಘಟನೆ ನಡೆದಿತ್ತು. ಇದೇ ಸಂದರ್ಭ ಹೈವೇ ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರಿ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ನೆರವಿಗೆ ನಿಂತಿದ್ದಾರೆ. ನಾಗುರಿ ಸಂಚಾರಿ ಠಾಣೆ ಎಎಸ್ ಐ ಲಸ್ರಾದೋ, ಸಿಬ್ಬಂದಿ ಮಹೇಶ್ ಹಾಗೂ ಹೋಂಗಾಡ್೯ ಆಸಿಫ್ ಸೇರಿ ಮಾಡಿರುವ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
Mangalore Kankandy Traffic Police help a woman fix the car tyre. Traffic police SI Lasrado, Mahesh and Home guard Asif help in fixing the punctured car. The Picture of this goes viral on social media.
03-10-25 06:08 pm
Bangalore Correspondent
DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ...
02-10-25 03:50 pm
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
03-10-25 11:07 pm
Mangalore Correspondent
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm