ಬ್ರೇಕಿಂಗ್ ನ್ಯೂಸ್
29-07-21 10:41 pm Udupi Correspondent ಕರಾವಳಿ
ಉಡುಪಿ, ಜುಲೈ 29: ನಾನು ಸಚಿವ ಸ್ಥಾನವನ್ನು ಯಾರ ಬಳಿಯೂ ಕೇಳಲು ಹೋಗುವುದಿಲ್ಲ. ನನ್ನ ಶ್ವಾಸ ಇರೋ ವರೆಗೂ ನಾನು ಬೆಂಗಳೂರಿಗೆ ಸಚಿವ ಸ್ಥಾನ ಕೇಳಲು ಹೋಗುವುದಿಲ್ಲ. ಯಾರ ಕಾಲಿಗೂ ಬೀಳುವುದಿಲ್ಲ. ಯಾವ ನಾಯಕನ ಹಿಂದೆ ಸುತ್ತಿಕೊಂಡು ತಿರುಗಾಡೋಕೂ ಹೋಗುವುದಿಲ್ಲ. ಹೀಗೆಂದು ಕುಂದಾಪುರದ ವಾಜಪೇಯಿ ಅಂತಲೇ ಹೆಸರಾಗಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಪಥ ಮಾಡಿದ್ದಾರೆ.
ನಾನು ರಾಜಕೀಯದಲ್ಲಿ ಸಮತೋಲನ ಕಳೆದುಕೊಳ್ಳುವುದಿಲ್ಲ. ನಾನು ರಾಜಕೀಯದಲ್ಲಿ ಸ್ವಾಭಿಮಾನ ಬಿಟ್ಟಿಲ್ಲ. ಬಿಡೋದೂ ಇಲ್ಲ. ಈ ಹಿಂದೆ ನನ್ನನ್ನು ಕರೆದು ತಪ್ಪು ಮಾಡಿದ್ದರು. ಆಗಲೂ ನಾನು ಸಚಿವ ಸ್ಥಾನ ಕೇಳಿರಲಿಲ್ಲ.
ರಾಜಕೀಯ ಲಾಬಿ ಜಾತಿವಾದಿತನ ಕೆಲಸ ನಾನು ಮಾಡುವುದಿಲ್ಲ. ಯಾರ ಕಾಲಿಗೂ ಬಿದ್ದು ನಾನು ಕೆಲಸ ತೆಗೆದುಕೊಳ್ಳುವುದಿಲ್ಲ. ಕೆಲಸ ಕೊಟ್ಟರೆ ನಾನು ಅದನ್ನು ನಿಭಾಯಿಸುತ್ತೇನೆ. ಹಾಗಂತ, ನಾನು ಮಂತ್ರಿಯಾದರೆ ಸರಕಾರಿ ಕಾರು ತೆಗೆದುಕೊಳ್ಳುವುದಿಲ್ಲ. ನಾನು ಪೊಲೀಸರ ಎಸ್ಕಾರ್ಟ್ ತೆಗೆದುಕೊಳ್ಳುವುದಿಲ್ಲ. ನಾನು ಗನ್ ಮ್ಯಾನ್ ಇಟ್ಟುಕೊಳ್ಳುವುದೂ ಇಲ್ಲ ಎಂದು ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.
ನನಗೆ ಈವರೆಗೆ ಯಾವುದೇ ಕರೆಗಳು, ಮಾಹಿತಿಗಳು ಬಂದಿಲ್ಲ. ಕರೆ ಬಂದರೆ ನಾನು ಇದನ್ನು ಹೇಳಲು ಸಿದ್ದ ಇದ್ದೇನೆ. ಹಾಗೆಂದು ನನ್ನನ್ನು ಹೆಡ್ಡ ರಾಜಕಾರಣಿ ಅನ್ನಬೇಡಿ. ನನ್ನದು ನೇರನುಡಿಯ ರಾಜಕಾರಣ. ದುರಹಂಕಾರ ಅಲ್ಲ, ನಾನು ಯಾರ ಭಯದಲ್ಲೂ ಇಲ್ಲ. ಮತದಾರರ ಮತ್ತು ಕಾರ್ಯಕರ್ತರ ಋಣದಲ್ಲಿ ಮಾತ್ರ ನಾನಿರೋದು. ಯಾರನ್ನೋ ಕೇಳಿ ಸಚಿವ ಸ್ಥಾನವನ್ನ ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ. ಕೇಳಿ ಅಧಿಕಾರವನ್ನು ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಲ್ಲ.
ನಾನು ಜಾತ್ಯಾತೀತ ರಾಜಕಾರಣಿ. ನನ್ನ ಹುಟ್ಟಿನಿಂದ ನಾನು ಜಾತಿ ಸಂಘಕ್ಕೆ ಹೋಗಿಲ್ಲ. ಪ್ರಬಲ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ. ಎಲ್ಲಾ ಜಾತಿಯವರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಒಂದು ಜಾತಿಯ ಉದ್ದಾರಕ್ಕಾಗಿ ಜನ ನನ್ನನ್ನು ಗೆಲ್ಲಿಸಿದ್ದಲ್ಲ. ಜಾತಿವಾದಿಗಳು ಜಾತಿಯ ಸಂಘಕ್ಕೆ ಸಚಿವರಾಗಬೇಕು. ಜಾತಿವಾದಿಗಳು ಯಾವುದೇ ಕಾರಣಕ್ಕೂ ಶಾಸಕರಾಗಬಾರದು. ಜಾತಿವಾದಿಗಳು ಸಾರ್ವತ್ರಿಕ ಚುನಾವಣೆಗೆ ಬರಬಾರದು. ನನ್ನಲ್ಲಿ ಯಾವುದೇ ನಾಟಕೀಯ ಮಾತುಗಳು ಇಲ್ಲ. ಉಪಯೋಗಕ್ಕೆ ಇಲ್ಲದ್ದನ್ನ ಕೊಟ್ಟರೆ ಕಿಸೆಗೆ ಹಾಕಿಕೊಂಡು ಬರುವುದಿಲ್ಲ. ಶಾಸಕರು ಹೆರಿಗೆ ಕೋಣೆಯ ದಾದಿಯ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೊಂದು ಓಯಸಿಸ್ ಅನ್ನುವ ರೀತಿ ಮಾರ್ಮಿಕ ಮಾತುಗಳನ್ನು ಆಡಿದ್ದಾರೆ.
ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾಲ್ಕು ಬಾರಿ ಮತ್ತು ಒಮ್ಮೆ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಈವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ಶೆಟ್ಟರಿಗೆ ಈ ಬಾರಿಯಾದರೂ ಸಚಿವ ಸ್ಥಾನ ಸಿಗಲೇಬೇಕು ಎಂದು ಜಾಲತಾಣದಲ್ಲಿ ಅಭಿಯಾನ ಆರಂಭಗೊಂಡಿದೆ.
New cabinet expansion Kundapura MLA Halady Srinivas Shetty says wont beg for any post. Karnataka chief minister Basavaraj Bommai on Thursday hinted at a delay in the state cabinet’s expansion and said that the decision regarding it will be taken following his meeting with the Bharatiya Janata Party’s (BJP) central leadership in Delhi.
03-10-25 06:08 pm
Bangalore Correspondent
DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ...
02-10-25 03:50 pm
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
04-10-25 01:11 pm
HK News Desk
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
ಮುಂದಿನ ವಾರ ಅಫ್ಘಾನಿಸ್ತಾನದ ತಾಲಿಬಾನ್ ಸಚಿವ ಭಾರತಕ್...
03-10-25 04:48 pm
India-Russia Summit, Vladimir Putin: ಡಿಸೆಂಬರ್...
02-10-25 03:45 pm
03-10-25 11:07 pm
Mangalore Correspondent
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
03-10-25 11:28 pm
HK News Desk
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm