16 ಕೋಟಿಯ ಇಂಜೆಕ್ಷನ್ ; ಬೆನ್ನುಮೂಳೆ ಕಾಯಿಲೆಗೆ ತುತ್ತಾಗಿದ್ದ ಮಗು ಸಾವು ! 

30-07-21 03:04 pm       Mangaluru Correspondent   ಕರಾವಳಿ

ಬೆನ್ನು ಮೂಳೆ ಕ್ಷೀಣಿಸುವ ಅಪರೂಪದ ಕಾಯಿಲೆಗೆ ತುತ್ತಾಗಿದ್ದ ಐದು ತಿಂಗಳ ಮಗು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ.

ಉಡುಪಿ, ಜುಲೈ 30: ಬೆನ್ನು ಮೂಳೆ ಕ್ಷೀಣಿಸುವ ಅಪರೂಪದ ಕಾಯಿಲೆಗೆ ತುತ್ತಾಗಿದ್ದ ಐದು ತಿಂಗಳ ಮಗು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ. ಕಾರ್ಕಳ ತಾಲೂಕಿನ ಬೆಳ್ಮಣ್ ಎಂಬಲ್ಲಿ ಮಗುವಿಗೆ ಜನಿಸಿ ಒಂದೂವರೆ ತಿಂಗಳಾಗಿದ್ದಾಗಲೇ ರೋಗಕ್ಕೆ ತುತ್ತಾಗಿತ್ತು. 

ಉಡುಪಿಯ ಸರಕಾರಿ ಬಿ.ಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಇದೊಂದು ಅಪರೂಪದ ಕಾಯಿಲೆ, ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ಹೇಳಿದ್ದರು. ನಂತರ ಮುಂಬೈನ ಹಿಂದುಜಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಜ್ಞರಿಗೆ ಮಗುವನ್ನು ತೋರಿಸಿದಾಗ ಹಾರ್ಮೋನ್ ವ್ಯತ್ಯಾಸದಿಂದ ಉಂಟಾಗುವ ಸ್ಪೈನಲ್ ಮಸ್ಕುಲರ್ ಆಟ್ರೋಫಿ (ಎಸ್ಎಂಎ) ಅಂದರೆ ಬೆನ್ನು ಮೂಳೆಯ ಸ್ನಾಯು ಕ್ಷೀಣಗೊಳ್ಳುವ ಅಪರೂಪದ ಕಾಯಿಲೆ ಇರೋದು ಗೊತ್ತಾಗಿದೆ. 

ಮಗು ಆರೋಗ್ಯವಾಗಿರಲು ಹೊರ ದೇಶದಿಂದ 16 ಕೋಟಿಯ ಇಂಜೆಕ್ಷನ್ ತರಬೇಕು ಅಂತ ವೈದ್ಯರು ಹೇಳಿದ್ದರು. ಮಗು ಮಿಥಾನ್ಶ್ ದೇವಾಡಿಗನ ಪೋಷಕರು ಕಂದನನ್ನು ಉಳಿಸಲು ಕ್ರೌಂಡ್ ಫಂಡಿಂಗ್ ಮೊರೆ ಹೋಗಿ ಹಣ ಹೊಂದಿಸುತ್ತಿದ್ದರು. ಈ ನಡುವೆ ಮಿಥಾನ್ಶ್ ದೇವಾಡಿಗ ಕೊನೆಯುಸಿರೆಳೆದಿದ್ದಾನೆ.

Udupi 5 month old baby dies of rare bone disease even after spending 16 cores for injection .