ಕುತ್ತಾರಿನ ಹೊಂಡ ಗುಂಡಿ ರಸ್ತೆಯಲ್ಲಿ ಕಾರಿನ ಧಾವಂತಕ್ಕೆ ಸರಣಿ ಅಪಘಾತ, ಆಟೋ ಅಪ್ಪಚ್ಚಿ, ಚಾಲಕ ಗಂಭೀರ 

31-07-21 11:11 am       Mangaluru Correspondent   ಕರಾವಳಿ

ದೇರಳಕಟ್ಟೆಯಿಂದ ತೊಕ್ಕೊಟ್ಟಿನತ್ತ ಅತಿವೇಗದಿಂದ ಧಾವಿಸುತ್ತಿದ್ದ ಕಾರಿನ ಧಾವಂತಕ್ಕೆ ಸರಣಿ ಅಪಘಾತ ನಡೆದಿದ್ದು ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. 

ಉಳ್ಳಾಲ, ಜು.31: ಮಂಗಳೂರು ವಿವಿ ರಸ್ತೆಯ ಕುತ್ತಾರಿನ ಹೊಂಡ ಗುಂಡಿ ರಸ್ತೆಯಲ್ಲಿ ದೇರಳಕಟ್ಟೆಯಿಂದ ತೊಕ್ಕೊಟ್ಟಿನತ್ತ ಅತಿವೇಗದಿಂದ ಧಾವಿಸುತ್ತಿದ್ದ ಕಾರಿನ ಧಾವಂತಕ್ಕೆ ಸರಣಿ ಅಪಘಾತ ನಡೆದಿದ್ದು ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. 

ದೇರಳಕಟ್ಟೆಯಿಂದ ಮಂಗಳೂರಿಗೆ ಧಾವಿಸುತ್ತಿದ್ದ ಕಾರೊಂದು ಎದುರಿಂದ ಬರುತ್ತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದಿದ್ದು ಮತ್ತೆ ನಿಯಂತ್ರಣ ಸಿಗದೆ ವೈದ್ಯಕೀಯ ವಿದ್ಯಾರ್ಥಿಗಳಿದ್ದ ಕಾರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ರಿಕ್ಷಾ ಚಾಲಕ ದೇರಳಕಟ್ಟೆ ಮೂಲದ ಮೊಹಮ್ಮದ್ ಮನ್ಸೂರ್ (35) ಗಂಭೀರ ಗಾಯಗೊಂಡಿದ್ದು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಆಟೋ ರಿಕ್ಷಾ ಅಪ್ಪಚ್ಚಿಯಾಗಿದೆ. 

ವೈದ್ಯಕೀಯ ವಿದ್ಯಾರ್ಥಿಗಳಿದ್ದ ಕಾರಿಗೂ ಹಾನಿಯುಂಟಾಗಿದ್ದು, ಕಾರಲ್ಲಿದ್ದವರು ಪಾರಾಗಿದ್ದಾರೆ. ಅಪಘಾತವೆಸಗಿದ ಕಾರು ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಕಾರು ಚಾಲಕ ಮದ್ಯದ ನಶೆಯಲ್ಲಿ ಕಾರು ಚಲಾಯಿಸುತ್ತಿದ್ದನೆಂದು ಸ್ಥಳೀಯರು ಆರೋಪಿಸಿದ್ದಾರೆ. ಕಾರನ್ನು ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Magalore Rash driving car loses control rams on auto and car in Kuthar driver critical.