ಬ್ರೇಕಿಂಗ್ ನ್ಯೂಸ್
31-07-21 09:51 pm Mangaluru Correspondent ಕರಾವಳಿ
ಮಂಜೇಶ್ವರ, ಜುಲೈ 31: ಬಂಟ್ವಾಳ ಬಳಿಯ ಪಾಣೆಮಂಗಳೂರಿನ ನೇತ್ರಾವತಿ ಸೇತುವೆಯ ಬಳಿ ಚಾಲನೆ ಸ್ಥಿತಿಯಲ್ಲಿ ಬೈಕನ್ನು ಬಿಟ್ಟು ನದಿಗೆ ಹಾರಿದ್ದ ಯುವಕನ ಶವ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಬಳಿಯ ಕಣ್ವತೀರ್ಥ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.
ಬೆಂಗಳೂರಿನ ದಾಸರಹಳ್ಳಿಯ ನಿವಾಸಿ ಸತ್ಯವೇಲು (28) ಎಂಬ ಯುವಕ ಜುಲೈ 28ರಂದು ರಾತ್ರಿ ಬಿ.ಸಿ.ರೋಡಿನ ಪಾಣೆಮಂಗಳೂರು ಸೇತುವೆ ಬಳಿಗೆ ಬೈಕಿನಲ್ಲಿ ಬಂದಿದ್ದು, ಬೈಕನ್ನು ಚಾಲನೆ ಸ್ಥಿತಿಯಲ್ಲೇ ಬಿಟ್ಟು ನದಿಗೆ ಹಾರಿದ್ದ ಎನ್ನಲಾಗಿತ್ತು. ಬಳಿಕ ಆತನ ಹುಡುಕಾಟ ನಡೆಸಿದ್ದರೂ, ಶವ ಸಿಕ್ಕಿರಲಿಲ್ಲ.
ಜುಲೈ 30ರಂದು ಮಂಜೇಶ್ವರ ಸಮುದ್ರ ಕಿನಾರೆಯಲ್ಲಿ ಶವ ಪತ್ತೆಯಾಗಿದ್ದು, ಪೊಲೀಸರು ಬಂಟ್ವಾಳ ಪೊಲೀಸರ ಮೂಲಕ ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಕುಟುಂಬಸ್ಥರು ಬಂದು ಶವದ ಗುರುತು ಹಚ್ಚಿದ್ದಾರೆ. ಮಂಜೇಶ್ವರ ಪೊಲೀಸರು ಶವವನ್ನು ಕಾಸರಗೋಡು ಸರಕಾರಿ ಆಸ್ಪತ್ರೆಗೆ ಒಯ್ದು ಪೋಸ್ಟ್ ಮಾರ್ಟಂ ನಡೆಸಿದ್ದು, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ಸತ್ಯವೇಲು ಇತ್ತೀಚೆಗೆ ಎರಡು ವಾರಗಳ ಹಿಂದೆಯೂ ಇದೇ ರೀತಿ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆನಂತರ ಸ್ಥಳೀಯರು ಗಮನಿಸಿ, ಆತನ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಕುಟುಂಬಸ್ಥರನ್ನು ಕರೆಸಿ, ವಶಕ್ಕೆ ನೀಡಿದ್ದರು. ಇದೀಗ ಮತ್ತೆ ಜುಲೈ 28ರಂದು ಸತ್ಯವೇಲು ಬೆಂಗಳೂರಿನ ಮನೆಯನ್ನು ಬಿಟ್ಟು ಬಂದಿದ್ದ. ಈ ಬಗ್ಗೆ ಆತನ ತಾಯಿ ಪೊಲೀಸ್ ದೂರು ನೀಡಿದ್ದರು.
ಬೆಂಗಳೂರಿನ ಯುವಕ ನೇತ್ರಾವತಿ ನದಿಗೆ ಹಾರಿದ ಶಂಕೆ ; ಬಿ.ಸಿ.ರೋಡ್ ಸೇತುವೆಯಲ್ಲಿ ಬೈಕ್ ಪತ್ತೆ !
The mortal remains of the man who left his bike engine running and went missing from Netravati bridge at Panemangalore on July 28 morning, was found later at Manjeshwar Kanwatheertha sea shore. The person is identified as Sathyavelu (29), a resident of Dasarahalli in Bengaluru.
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
08-09-26 09:50 am
HK News Staffer
ಪುತ್ತೂರು ಮಹಾಲಿಂಗೇಶ್ವರನ ಹೆಸರಲ್ಲಿ ಅವ್ಯವಹಾರ ; ಸಣ...
08-09-26 08:27 am
ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಎಸ್ಐ ಆರ್ ನೋಟಿಸ್ ! ಬ...
07-09-26 09:57 pm
ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್...
07-09-26 01:22 pm
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
07-09-26 08:56 pm
HK News Staffer
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm
ಮಂಜೇಶ್ವರ ; ಹೊಸಂಗಡಿ ಬಳಿ ಕೂಲಿ ಕಾರ್ಮಿಕನ ಹತ್ಯೆಗೈದ...
07-09-26 04:09 pm
ಹೂ ಕಟಾವಿಗೆ ಹೊರಟಿದ್ದ ಕೂಲಿ ಕಾರ್ಮಿಕರ ದುರಂತ ಅಂತ್ಯ...
07-09-26 03:42 pm
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm