ಬ್ರೇಕಿಂಗ್ ನ್ಯೂಸ್
02-08-21 03:10 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 2: ಕೇರಳದಿಂದ ಆಗಮಿಸುವ ಪ್ರಯಾಣಿಕರನ್ನು ಗಡಿಭಾಗದಲ್ಲಿ ನಿರ್ಬಂಧಿಸಲಾಗಿದ್ದು, ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಒಳಪ್ರವೇಶ ಎಂದು ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆ ಬರೆಯುವುದಕ್ಕಾಗಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳನ್ನು ಹಾಲ್ ಟಿಕೆಟ್ ತೋರಿಸಿ ಒಳಬಿಡುತ್ತಿದ್ದರೆ, ಉಳಿದವರಿಗೆ ಪೂರ್ತಿ ನಿರ್ಬಂಧ ವಿಧಿಸಲಾಗಿದೆ.
ತಲಪಾಡಿ ಗಡಿಭಾಗದಲ್ಲಿ ಇಂದು ಪೊಲೀಸರು, ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದು ರಾಜ್ಯ ಸರಕಾರ ನೀಡಿರುವ ಮಾರ್ಗಸೂಚಿಯ ಸೂಚನೆಗಳನ್ನು ನೀಡುತ್ತಿದ್ದರು. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ಬಂದು ನಿರ್ಬಂಧವನ್ನು ಕಟ್ಟುನಿಟ್ಟಿನಲ್ಲಿ ಪಾಲನೆ ಮಾಡುವಂತೆ ಸೂಚನೆ ನೀಡಿದರು. ಅದಲ್ಲದೆ, ಗಡಿಭಾಗದಲ್ಲಿ ಜಿಲ್ಲಾಡಳಿತದ ಮೂಲಕ ಆರೋಗ್ಯ ಇಲಾಖೆಯಿಂದ ನಡೆಸುತ್ತಿದ್ದ ಕೋವಿಡ್ ಪರೀಕ್ಷೆಯನ್ನೂ ರದ್ದುಪಡಿಸಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರಾಜೇಂದ್ರ, ರಾಜ್ಯ ಸರಕಾರದಿಂದ ನೀಡಿರುವ ಮಾರ್ಗಸೂಚಿ ಪ್ರಕಾರ ನಡೆದುಕೊಂಡಿದ್ದೇವೆ. ಇಡೀ ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕು ಪ್ರಕರಣ ಕಂಡುಬಂದಿದೆ. ಕೇರಳಕ್ಕೆ ಗಡಿಯನ್ನು ಹೊಂದಿಕೊಂಡಿರುವುದು ಮತ್ತು ಆ ಭಾಗದ ಜನರು ಬೇರೆ ಬೇರೆ ಕಾರ್ಯಗಳಿಗೆ ಮಂಗಳೂರಿಗೆ ಬರುತ್ತಿರುವುದು ಇದಕ್ಕೆ ಕಾರಣ. ಹೀಗಾಗಿ ಕರ್ನಾಟಕಕ್ಕೆ ಬರುವ ಮಂದಿ ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು. ಅಲ್ಲಿಯೇ ಟೆಸ್ಟ್ ಮಾಡಿಸಿಕೊಂಡು 72 ಗಂಟೆಗಳ ಒಳಗಿನ ವರದಿಯನ್ನು ಹೊಂದಿರಬೇಕು ಎಂದು ತಿಳಿಸಿದರು.
ಅಲ್ಲದೆ, ಗಡಿಭಾಗದಲ್ಲಿ ಕೋವಿಡ್ ತಪಾಸಣೆ ನಡೆಸಿ, ಒಳಬಿಡುವುದರಿಂದ ಸೋಂಕಿತರು ಒಳಬಂದು ಅವರಿಂದ ಮತ್ತಷ್ಟು ಹರಡಲು ಕಾರಣವಾಗುತ್ತದೆ. ಹಾಗಾಗಿ ಆರೋಗ್ಯ ಇಲಾಖೆಯ ತಪಾಸಣೆಯನ್ನೇ ರದ್ದು ಪಡಿಸಿದ್ದೇವೆ. ಅಗತ್ಯ ಇದ್ದವರು ಅಲ್ಲಿಯೇ ತಪಾಸಣೆ ಮಾಡಿಕೊಂಡು ಬರಲಿ. ದೈನಂದಿನ ಪ್ರಯಾಣಿಕರು 15 ದಿನಕ್ಕೊಮ್ಮೆ ಟೆಸ್ಟ್ ಮಾಡಿಸಿದರೆ ಸಾಕು. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿಕೊಂಡು ಮಂಗಳೂರಿಗೆ ಬರಬಹುದು ಎಂದು ಹೇಳಿದರು.
ಇದೇ ವೇಳೆ, ಗಡಿಭಾಗದಲ್ಲಿ ಕೇರಳದ ಪ್ರಯಾಣಿಕರನ್ನು ನಿರ್ಬಂಧಗೊಳಿಸಿರುವ ಕರ್ನಾಟಕ ಸರಕಾರದ ಕ್ರಮವನ್ನು ಖಂಡಿಸಿ ಕಾಸರಗೋಡಿನ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. 15 ರಷ್ಟು ಜನರು ರಸ್ತೆಗೆ ಅಡ್ಡಲಾಗಿ ಕುಳಿತು ಹತ್ತು ನಿಮಿಷ ಕಾಲ ಪ್ರತಿಭಟನೆ ನಡೆಸಿದರು. ಕೇರಳದಲ್ಲಿ ದೇಶದಲ್ಲೇ ಅತಿ ಹೆಚ್ಚು ಕೋವಿಡ್ ಸೋಂಕಿತರಿದ್ದು, ಅಲ್ಲಿಂದ ಬೇರೆ ಕಡೆಗೆ ಹರಡುತ್ತಿದೆ ಎನ್ನುವ ಆತಂಕ ಇತರ ಕಡೆಯ ಜನರದ್ದು.
ಇದಲ್ಲದೆ, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ 16 ಒಳರಸ್ತೆಗಳಲ್ಲಿಯೂ ಪೊಲೀಸರ ಮೂಲಕ ಚೆಕ್ ಪೋಸ್ಟ್ ಮಾಡಲಾಗಿದೆ. ಕೇರಳ ಭಾಗದಿಂದ ಬರುವ ಪ್ರಯಾಣಿಕರಿಗೆ ಎಲ್ಲ ಕಡೆಯೂ ನಿರ್ಬಂಧ ಹೇರಿದ್ದು, ವಾಹನಗಳಲ್ಲಿ ಬರುವ ಮಂದಿಯನ್ನು ವಿವರ ಕೇಳಿ ಹಿಂದಕ್ಕೆ ಕಳುಹಿಸುತ್ತಿದ್ದಾರೆ. ವಿಟ್ಲ, ಸುಳ್ಯ, ತಲಪಾಡಿ ಸಮೀಪದ ತೌಡುಗೋಳಿ, ಕೆದಂಬಾಡಿಯಲ್ಲಿ ಆಯಾ ಭಾಗದ ಠಾಣೆ ವ್ಯಾಪ್ತಿಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
SDPI and other organizations protest at Talapady Border for not allowing people without RTPCR test. Dakshina Kannada has strengthened checking at Talapady check-post to allow the enter of only those with RT-PCR negative certificate taken within 72 hours, in the wake of increasing COVID-19 cases in Kerala. Even those who have completed their two doses of COVID-19 vaccination have not been exempted from this rule.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm