ಬ್ರೇಕಿಂಗ್ ನ್ಯೂಸ್
03-08-21 08:03 pm Mangaluru Correspondent ಕರಾವಳಿ
ಮಂಗಳೂರು, ಅಗಸ್ಟ್ 3: ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ದಕ್ಷಿಣ ಕನ್ನಡ ಗಡಿಭಾಗದಲ್ಲಿ ಇರುವ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ದ.ಕ. ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.
ಗಡಿಭಾಗದಲ್ಲಿ ಮದ್ಯದಂಗಡಿಗಳಿಗೆ ಕಾಸರಗೋಡು ಜಿಲ್ಲೆಯವರೇ ಹೆಚ್ಚಿನ ಗಿರಾಕಿಗಳು. ಹಾಗಾಗಿ ಕೇರಳ ಕಡೆಯಿಂದ ಬರುವ ಗ್ರಾಹಕರಿಂದ ಕೊರೊನಾ ಹರಡುತ್ತದೆ ಎನ್ನುವ ನೆಪದಲ್ಲಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ಗಡಿಭಾಗದಲ್ಲಿ ಇರುವ ಎಲ್ಲಾ ರೀತಿಯ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಆದೇಶ ಮಾಡಿದ್ದಾರೆ.
ಸದ್ಯಕ್ಕೆ ಆಗಸ್ಟ್ 3ರಿಂದ 15 ರ ವರೆಗೆ ವೈನ್ ಶಾಪ್ ಬಂದ್ ಇರಲಿದೆ. ಸುಳ್ಯ, ಪುತ್ತೂರು, ವಿಟ್ಲ, ಮಂಗಳೂರು ತಾಲೂಕಿನ ಗಡಿಗಳು ಕೇರಳ ಸಂಪರ್ಕಿಸುವಲ್ಲಿ ಇರುವ ಮದ್ಯದಂಗಡಿ ಮುಚ್ಚಲು ಆದೇಶ ಹೊರಡಿಸಿದ್ದಾರೆ.
ಕೊರೊನಾ ಲಾಕ್ಡೌನ್ ಇದ್ದಾಗ ಎಲ್ಲಾ ಕಡೆ ಮದ್ಯದಂಗಡಿಗಳನ್ನು ಪೂರ್ತಿಯಾಗಿ ಮುಚ್ಚಲಾಗಿತ್ತು. ಇದೀಗ ಕೇರಳದಲ್ಲಿ ಕೊರೊನಾ ಆತಂಕ ಇರುವುದರಿಂದ ಗಡಿಭಾಗದಲ್ಲಿ ನಿರ್ಬಂಧ ಹೇರಲಾಗಿದೆ. ಕಾಸರಗೋಡು ಕಡೆಯಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು ಎನ್ನುವ ನಿಯಮ ಹೇರಲಾಗಿದೆ. ಆದರೆ, ಈ ನಿಯಮಕ್ಕೆ ಮದ್ಯದಂಗಡಿ ಅಪವಾದ ಆಗುವ ಹಿನ್ನೆಲೆಯಲ್ಲಿ ಅವನ್ನು ಕೂಡ ಗಡಿಭಾಗದಲ್ಲಿ ಮುಚ್ಚಲು ಸೂಚಿಸಲಾಗಿದೆ. ಈ ಮೂಲಕ ಕೊರೊನಾದಿಂದಾಗಿ ಗಡಿಭಾಗದಲ್ಲಿ ಮದ್ಯ ಪ್ರಿಯರಿಗೂ ಕಂಟಕ ಎದುರಾದಂತಾಗಿದೆ.
Bars along Dakshina Kannada borders to be closed orders DC Dr Rajendra Kumar. Karnataka government on Saturday had issued fresh guidelines to curb Covid cases in border districts in view of surge in infection in Kerala. The enforcement of the rule at the inter-state border met with stiff resistance from Keralites who also staged a roadblock on the highway near Talapady for about 15 minutes leading to traffic pile up. The agitators said that Karnataka's 'sudden decision' has affected the people from Kasaragod who are dependent on Mangaluru for work, medical, education and other purposes. They demanded to bring back the system of covid testing at the border and allow the people inside. Manjeshwar Police said they will book case against persons who blocked the highway.
03-10-25 06:08 pm
Bangalore Correspondent
DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ...
02-10-25 03:50 pm
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
04-10-25 01:11 pm
HK News Desk
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
ಮುಂದಿನ ವಾರ ಅಫ್ಘಾನಿಸ್ತಾನದ ತಾಲಿಬಾನ್ ಸಚಿವ ಭಾರತಕ್...
03-10-25 04:48 pm
India-Russia Summit, Vladimir Putin: ಡಿಸೆಂಬರ್...
02-10-25 03:45 pm
03-10-25 11:07 pm
Mangalore Correspondent
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
03-10-25 11:28 pm
HK News Desk
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm