ಬ್ರೇಕಿಂಗ್ ನ್ಯೂಸ್
23-08-21 11:12 pm Mangaluru correspondent ಕರಾವಳಿ
ಮಂಗಳೂರು, ಆಗಸ್ಟ್ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ವಾರದಿಂದಲೇ ಪಿಯುಸಿ ತರಗತಿ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಜನಪ್ರತಿನಿಧಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಬಗ್ಗೆ ಸಭೆ ನಡೆಸಿದ್ದು ನಿರ್ಧಾರಕ್ಕೆ ಬರಲಾಗಿದೆ.
ಸದ್ಯಕ್ಕೆ ಪಿಯುಸಿ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ. ಗ್ರೇಡೆಡ್ ಆಧರಿಸಿ, ಪಾಳಿಯಂತೆ ತರಗತಿಗಳನ್ನು ವಿಭಜಿಸಿ ಕ್ಲಾಸ್ ನಡೆಸಬೇಕು. ಈ ಬಗ್ಗೆ ಅಧಿಕೃತವಾಗಿ ಜಿಲ್ಲಾಡಳಿತದಿಂದ ಮಾರ್ಗಸೂಚಿ ನೀಡಲಾಗುವುದು ಎಂದು ಸಭೆಯ ಬಳಿಕ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಅಲ್ಲದೆ, ಪಿಯುಸಿ ತರಗತಿಯ ಫಲಿತಾಂಶ ಆಧರಿಸಿ ಶಾಲೆಗಳನ್ನು ಆರಂಭಿಸಲಾಗುವುದು. ಮುಂದಿನ ಎರಡು ವಾರ ಕಾಲ ಶಾಲೆ ಆರಂಭಿಸುವಂತಿಲ್ಲ. ಆನಂತರ ಶಾಲೆಗಳನ್ನು ನಡೆಸುವ ಬಗ್ಗೆ ಎರಡು ವಾರದ ಬಳಿಕ ನಿರ್ಧರಿಸಲಾಗುವುದು.

ಪಿಯುಸಿ ತರಗತಿ ಆರಂಭಿಸುವುದಕ್ಕೂ ಮುನ್ನ ಎಲ್ಲ ವಿದ್ಯಾರ್ಥಿಗಳ ಆರ್ ಟಿಪಿಸಿಆರ್ ಮಾಡಿಸಿ, ನೆಗೆಟಿವ್ ಹೊಂದಿರಬೇಕು. ಆಯಾ ಶಾಲೆಗಳ ಆಡಳಿತ ಮಂಡಳಿ ಈ ಬಗ್ಗೆ ಮುತುವರ್ಜಿ ವಹಿಸಬೇಕು.
ಸದ್ಯಕ್ಕೆ ಹತ್ತರಿಂದ ಹನ್ನೊಂದು ಸಾವಿರ ಟೆಸ್ಟಿಂಗ್ ಆಗ್ತಾ ಇದೆ. ಈ ಹಿಂದೆ ದಿನಕ್ಕೆ ಏಳು ಸಾವಿರ ಪರೀಕ್ಷೆ ಆಗುತ್ತಿದ್ದಾಗ ಪಾಸಿಟಿವ್ ರೇಟ್ 3.9 ಇತ್ತು. ಈಗ ನಾಲ್ಕರಷ್ಟು ಇದೆ. ಇಂದಿನ ಸಭೆಯಲ್ಲಿ ಟೆಸ್ಟಿಂಗನ್ನು ಹೆಚ್ಚಿಸಲು ನಿರ್ಧಾರಕ್ಕೆ ಬರಲಾಗಿದೆ. 14 ರಿಂದ 15 ಸಾವಿರ ಟೆಸ್ಟ್ ಮಾಡಲು ನಿರ್ಧರಿಸಿದ್ದು ಆಮೂಲಕ ಸೋಂಕು ಸಮುದಾಯಕ್ಕೆ ಹರಡಿರುವುದನ್ನು ಪತ್ತೆ ಮಾಡಲಾಗುವುದು. ಪಾಸಿಟಿವ್ ಹೆಚ್ಚು ಬಂದರೂ, ಅದನ್ನು ನಿರ್ವಹಣೆ ಮಾಡುವಷ್ಟು ಸಾಮರ್ಥ್ಯ ಜಿಲ್ಲೆಯಲ್ಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕೇರಳದಿಂದ ಬಂದಿರುವ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆಗೆಟಿವ್ ಸರ್ಟಿಫಿಕೇಟ್ ಹೊಂದಿದ್ದರೂ ಕ್ವಾರಂಟೈನ್ ಬಳಿಕ ಪಾಸಿಟಿವ್ ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಕಾಲೇಜು ಆಡಳಿತದ ವಿರುದ್ಧ ನೋಟೀಸ್ ನೀಡಲಾಗಿದೆ. ಯಾವ ಲೋಪದಿಂದ ಪಾಸಿಟಿವ್ ಆಗಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದ್ದಾರೆ.
Mangalore Next week PUC colleges to start, delay in opening schools states Dc Rajendra Kumar
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
07-09-26 09:57 pm
HK News Staffer
ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್...
07-09-26 01:22 pm
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
07-09-26 08:56 pm
HK News Staffer
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm
ಮಂಜೇಶ್ವರ ; ಹೊಸಂಗಡಿ ಬಳಿ ಕೂಲಿ ಕಾರ್ಮಿಕನ ಹತ್ಯೆಗೈದ...
07-09-26 04:09 pm
ಹೂ ಕಟಾವಿಗೆ ಹೊರಟಿದ್ದ ಕೂಲಿ ಕಾರ್ಮಿಕರ ದುರಂತ ಅಂತ್ಯ...
07-09-26 03:42 pm
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm