ಬ್ರೇಕಿಂಗ್ ನ್ಯೂಸ್
25-08-21 01:08 pm Udupi Correspondent ಕರಾವಳಿ
ಉಡುಪಿ, ಆಗಸ್ಟ್ 25: ಬಿ.ಆರ್. ಶೆಟ್ಟಿ ತಾಯಿ ಮತ್ತು ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಎಲ್ಲ ವಿಭಾಗದ ಸಿಬ್ಬಂದಿ ದಿಢೀರ್ ಮುಷ್ಕರ ಹೂಡಿದ್ದಾರೆ. ಹೀಗಾಗಿ ಇಂದು ಎಮರ್ಜೆನ್ಸಿ ಸೇವೆಗಳನ್ನು ಹೊರತುಪಡಿಸಿ ಇತರ ಯಾವುದೇ ಚಿಕಿತ್ಸೆ ನೀಡದೇ ವೈದ್ಯಕೀಯ ಸಿಬಂದಿ ಮುಷ್ಕರ ನಡೆಸಿದ್ದಾರೆ.
ಇದರಿಂದಾಗಿ ಚಿಕಿತ್ಸೆಗಾಗಿ ಬಂದ ರೋಗಿಗಳು ಆಸ್ಪತ್ರೆ ಹೊರಗಡೆ ಪರದಾಟ ಅನುಭವಿಸುತ್ತಿದ್ದಾರೆ. ವೇತನ ನೀಡದ ಕಾರಣವೊಡ್ಡಿ ಎರಡು ದಿನಗಳ ಹಿಂದೆ ಮುಷ್ಕರ ಹೂಡಿದ್ದಕ್ಕಾಗಿ ಅಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ 16 ಸಿಬಂದಿಯನ್ನು ನಿನ್ನೆ ಬಿಆರ್ ಎಸ್ ಆಸ್ಪತ್ರೆಯ ಆಡಳಿತ ಕೆಲಸದಿಂದ ವಜಾ ಮಾಡಿತ್ತು.








16 ಮಂದಿಯನ್ನು ದಿಢೀರ್ ಕೆಲಸದಿಂದ ಕಿತ್ತು ಹಾಕಿದ್ದನ್ನು ವಿರೋಧಿಸಿ ಇಂದು ಆಸ್ಪತ್ರೆಯ ನೂರಕ್ಕೂ ಹೆಚ್ಚು ಸಿಬ್ಬಂದಿ ಮುಷ್ಕರ ಹೂಡಿದ್ದು ಕೆಲಸ ಮಾಡದೆ ಹೊರಗಡೆ ನಿಂತಿದ್ದಾರೆ. 16 ಸಿಬ್ಬಂದಿಯನ್ನು ವಜಾ ಮಾಡಿದ್ದಕ್ಕೆ ಕಾರಣ ಕೊಡಬೇಕು. ಹಾಗೇ ತೆಗೆಯುವುದಿದ್ದರೆ ನಮ್ಮೆಲ್ಲರನ್ನೂ ಕೆಲಸದಿಂದ ತೆಗೆಯಬೇಕು. ನ್ಯಾಯ ಸಿಗುವವರೆಗೂ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಮುಷ್ಕರ ನಿರತರು ಪಟ್ಟು ಹಿಡಿದಿದ್ದಾರೆ.
ಮಹಿಳೆಯರು, ಪುರುಷರು ಸೇರಿ ಆಸ್ಪತ್ರೆ ಸಿಬ್ಬಂದಿ ಮುಷ್ಕರ ನಿರತರಾಗಿದ್ದು ಆಸ್ಪತ್ರೆ ಮ್ಯಾನೇಜ್ ಮೆಂಟ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ರಾತ್ರಿಯಿಂದ ನಿರಂತರ ಮುಷ್ಕರ ನಡೆಯುತ್ತಿದ್ದು ಆಸ್ಪತ್ರೆಯ ಸ್ಥಿತಿ ಬಿಗಡಾಯಿಸಿದೆ. ಈ ನಡುವೆ, ಶಾಸಕ ರಘುಪತಿ ಭಟ್ ಮುಷ್ಕರ ನಿರತರನ್ನು ಮಾತುಕತೆಗೆ ಕರೆದಿದ್ದಾರೆ.
Video:
B R Shetty hospital in Udupi faces salary issue staffs and doctors protest 16 staffs suspended
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm