ಬ್ರೇಕಿಂಗ್ ನ್ಯೂಸ್
04-09-21 05:33 pm Mangaluru Correspondent ಕರಾವಳಿ
ಮಂಗಳೂರು, ಸೆ.4: ಎರಡು ದಿನಗಳ ಹಿಂದೆ ಮಂಗಳೂರಿನ ಕೋರ್ಟ್ ಕಟ್ಟಡದಲ್ಲಿ ಆರನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಾನಾ ರೀತಿಯ ಚರ್ಚೆಗೆ ನಾಂದಿಹಾಡಿದೆ. ಪೋಕ್ಸೋ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಕಿನ್ಯ ನಿವಾಸಿಯನ್ನು ಉಳ್ಳಾಲ ಪೊಲೀಸರು ಕೋರ್ಟಿಗೆ ಹಾಜರುಪಡಿಸಿದ ವೇಳೆ, ದುರಂತ ನಡೆದಿತ್ತು. ಜಡ್ಜ್ ಮುಂದೆ ಹಾಜರುಪಡಿಸಿದ ಬಳಿಕ ಆರೋಪಿ ರವಿರಾಜ್ ನನ್ನು ಕೋರ್ಟ್ ಕೊಠಡಿಯ ಹೊರಗಡೆ ಕುಳ್ಳಿರಿಸಲಾಗಿತ್ತು.
ಆರೋಪಿಯನ್ನು ಕೋರ್ಟಿಗೆ ಕರೆತಂದಿದ್ದ ಪೊಲೀಸರು ನ್ಯಾಯಾಧೀಶರ ಮುಂದೆ ಸಹಿ ಹಾಕಲೆಂದು ಒಳಗೆ ತೆರಳಿದ್ದರು. ಇದೇ ವೇಳೆ ಆರೋಪಿ ರವಿರಾಜ್ ತನ್ನ ಬಗ್ಗೆ ವಕೀಲರಲ್ಲಿ ನೋವು ಹೇಳಿಕೊಂಡಿದ್ದಾನೆ. ನಾನೇನು ತಪ್ಪು ಮಾಡಿಲ್ಲ ಎಂದು ನೋವು ಹೇಳಿಕೊಂಡಿದ್ದ. ವಕೀಲರು ಆತನ ಮಾತನ್ನು ಕೇಳುತ್ತಲೇ ಏನಾಗಲ್ಲ. ಒಂದೆರಡು ದಿನದಲ್ಲಿ ಜಾಮೀನು ಆಗುತ್ತೆ. ಸಾಕ್ಷ್ಯನೂ ಇಲ್ಲಾಂದ್ರೆ, ಆನಂತರ ಕೇಸ್ ಬಿದ್ದು ಹೋಗುತ್ತೆ ಎಂದು ಸಮಾಧಾನ ಹೇಳಿದ್ದರು. ಅಷ್ಟು ಹೇಳಿದ ವಕೀಲ ಸಚಿನ್ ದೇವೇಂದ್ರ, ಅಲ್ಲಿಯೇ ಇನ್ನೊಬ್ಬ ವಕೀಲರ ಬಳಿ ಮಾತನಾಡುತ್ತಿದ್ದರು. ಅಷ್ಟರಲ್ಲಿ ರವಿರಾಜ್ ತಲೆಯಲ್ಲಿ ಏನು ಗಿರವಿ ಹೊಡೆಯಿತೋ ಏನೋ, ತಾನು ಕುಳಿತಲ್ಲಿಂದಲೇ ಓಡಿಹೋಗಿ ಲಿಫ್ಟ್ ಬಳಿಯಿದ್ದ ಪ್ರಪಾತಕ್ಕೆ ಹಾರಿದ್ದಾನೆ. ಸಾಧಾರಣ 60-70 ಅಡಿ ಎತ್ತರದಿಂದ ಗ್ರೌಂಡ್ ಫ್ಲೋರಿಗೆ ನೇರವಾಗಿ ಬಿದ್ದಿದ್ದು ಕೆಳಗಿದ್ದ ಕಬ್ಬಿಣದ ಕುರ್ಚಿ ಎರಡು, ಮೂರು ಹೋಳಾಗಿ ಪೀಸ್ ಪೀಸ್ ಆಗಿದ್ದು ಅಲ್ಲಿನ ದುರಂತಕ್ಕೆ ಸಾಕ್ಷಿಯಾಗಿತ್ತು. ತಲೆಯ ಭಾಗಕ್ಕೆ ಬಿದ್ದ ಏಟಿನಿಂದಾಗಿ ಚಿಪ್ಪು ಒಡೆದು ರಕ್ತ ಕೋಡಿಯಂತೆ ಹರಿದು ಸ್ಥಳದಲ್ಲೇ 32 ವರ್ಷದ ಯುವಕ ರವಿರಾಜ್ ದುರಂತ ಸಾವು ಕಂಡಿದ್ದ.
ಆದರೆ, ಈ ಅನಾಹುತಕ್ಕೆ ಯಾರು ಹೊಣೆ ಎಂಬ ಬಗ್ಗೆ ಅಲ್ಲಿದ್ದ ವಕೀಲರಲ್ಲಿ ಕೇಳಿದರೆ, ಕೋರ್ಟ್ ಮಹಡಿಯ ವೈಪರೀತ್ಯ ಮತ್ತು ಕೊರತೆಗಳ ಬಗ್ಗೆಯೂ ಬೆರಳು ತೋರಿಸುತ್ತಾರೆ. ಕೋರ್ಟ್ ಕಟ್ಟೆಗೆ ನಾನಾ ರೀತಿಯ ಆರೋಪಿಗಳು, ಅಪರಾಧಿಗಳು, ವಿಕೃತ ಮನಸ್ಕರು, ಮಾನಸಿಕವಾಗಿ ನೊಂದವರು ಬೇರೆ ಬೇರೆ ಕಾರಣಕ್ಕೆ ಬರುತ್ತಾರೆ. ಇಂಥ ಜಾಗದಲ್ಲಿ ಈ ರೀತಿ ಆರೋಪಿಗಳು ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬಲ್ಲ ಸಾಧ್ಯತೆಗಳಿಗೆ ಆಸ್ಪದ ಇರಬಾರದು. ಯಾವುದೇ ಕಾರಣಕ್ಕೂ ನ್ಯಾಯದೇಗುಲ ಆಗಿರುವ ಕಟ್ಟಡವು ಆರೋಪಿ ಅಥವಾ ನ್ಯಾಯಕೇಳಿ ಬಂದವರಿಗೆ ಜೀವ ಕಳಕೊಳ್ಳುವ ಪ್ರಯತ್ನಗಳಿಗೆ ಎಡೆ ಕೊಡುವಂತಿರಬಾರದು. ಆದರೆ, ಮಂಗಳೂರಿನ ಕೋರ್ಟ್ ಮಹಡಿಯಲ್ಲಿ ಈ ರೀತಿ ಮೇಲಿನಿಂದ ಕೆಳಕ್ಕೆ ಹಾರಿ ಆರೋಪಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಇದು ಎರಡನೇ ಬಾರಿ.
ಮೂರು ವರ್ಷಗಳ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಬಜ್ಪೆ ಠಾಣೆ ಪೊಲೀಸ್ ಒಬ್ಬರು ಇದೇ ರೀತಿ ಕೋರ್ಟ್ ಮಹಡಿಯಿಂದ ಹಾರಿ ಸಾವು ಕಂಡಿದ್ದರು. ಆ ಸಂದರ್ಭದಲ್ಲಿ ಕೋರ್ಟ್ ನಿಂದ ಇಳಿಯುವ ಮೆಟ್ಟಲು ಮತ್ತು ಲಿಫ್ಟ್ ಬಳಿಯಿಂದ ಎಂಟು ಮಹಡಿಯನ್ನು ತೋರಿಸುವ ಖಾಲಿ ಪ್ರಪಾತಕ್ಕೆ ಸುತ್ತ ಭದ್ರತಾ ಗೋಡೆ ಕಟ್ಟಬೇಕು ಎನ್ನುವ ಅಭಿಪ್ರಾಯ ಕೇಳಿಬಂದಿತ್ತು. ಅದರ ಬಗ್ಗೆ ಜಿಲ್ಲಾ ನ್ಯಾಯಾಧೀಶರು ಮುತುವರ್ಜಿ ವಹಿಸಿ, ಇಂಜಿನಿಯರನ್ನು ಬರಹೇಳಿ ಚರ್ಚೆ ನಡೆಸಿದ್ದರು ಎನ್ನಲಾಗಿತ್ತು. ಆದರೆ, ಈವರೆಗೂ ಆ ರೀತಿಯ ಭದ್ರತಾ ಗೋಡೆ ನಿರ್ಮಿಸುವ ಕೆಲಸ ಆಗಿಲ್ಲ.
ಇದೇ ವೇಳೆ, ಕೋರ್ಟ್ ಮಹಡಿಯಿಂದ ಕೆಳಕ್ಕೆ ಹಾರಿ ದುರಂತ ಸಾವಿಗೆ ಕಾರಣವಾದ ಎರಡೂ ಪ್ರಕರಣಗಳಲ್ಲಿ ಆತ್ಮಹತ್ಯೆಗೆ ಪ್ರಚೋದಿಸಿದ್ದು ಪೋಕ್ಸೋ ಕಾಯ್ದೆ. ಮಕ್ಕಳ ಮೇಲಿನ ಲೈಂಗಿಕ ಹಿಂಸೆ ಮತ್ತು ಕಿರುಕುಳವನ್ನು ಹತ್ತಿಕ್ಕುವ ಸಲುವಾಗಿ 2012ರಲ್ಲಿ ಜಾರಿಗೆ ತಂದಿರುವ ಪೋಕ್ಸೋ ಪ್ರಬಲ ಕಾಯ್ದೆಯೇ ಸರಿ. ಕಾಯ್ದೆ ಪ್ರಕಾರ, ಮಕ್ಕಳನ್ನು ಲೈಂಗಿಕ ಉದ್ದೇಶದಿಂದ ಮುಟ್ಟುವುದರಿಂದ ತೊಡಗಿ ಯಾವುದೇ ರೀತಿಯ ಹಿಂಸೆ ಅಥವಾ ದೂರ ನಿಂತು ಸನ್ನೆ, ಅಶ್ಲೀಲ ವಿಡಿಯೋ ತೋರಿಸಿ ಪ್ರಚೋದನೆ ಮಾಡಿದ್ರೂ ಅಪರಾಧ. ಇದೇ ಕಾಯ್ದೆಯ ಹದಿನೈದು ಸೆಕ್ಷನ್ ಪ್ರಕಾರ, ಆಯಾ ಪ್ರಕರಣದ ಗಂಭೀರತೆ ಆಧರಿಸಿ ಪೊಲೀಸರು ಆರು ತಿಂಗಳ ಮಗುವಿನಿಂದ ಹಿಡಿದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಹಿಂಸೆ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆ ಹೇರುತ್ತಾರೆ. ಆದರೆ, ಕೆಲವೊಮ್ಮೆ ಈ ಕಾಯ್ದೆ ನಿರಪರಾಧಿಗಳ ಮೇಲೂ ಬಳಕೆಯಾಗಿರುವ ಆರೋಪಗಳಿವೆ. ಅದು ಏನಿದ್ದರೂ, ಆನಂತರ ಕೋರ್ಟಿನಲ್ಲಿ ಬಿದ್ದು ಹೋಗುವ ಪ್ರಮೇಯವೂ ಇರುತ್ತದೆ.
ಉಳ್ಳಾಲ ಪೊಲೀಸರು ರವಿರಾಜ್ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆ ಹೇರಲು ಕೆಲವರ ಒತ್ತಡ ಕೆಲಸ ಮಾಡಿದೆ ಅನ್ನೋ ಆರೋಪಗಳು ಕೇಳಿಬರುತ್ತಿವೆ. ರವಿರಾಜ್ ಆಗಸ್ಟ್ 30ರಂದು ತೊಕ್ಕೊಟ್ಟು ಒಳಪೇಟೆಯ ರಸ್ತೆಯಲ್ಲಿ ಸೈಂಟ್ ಸೆಬಾಸ್ಟಿಯನ್ ಚರ್ಚ್ ಮುಂಭಾಗದಲ್ಲಿ ನಡೆದು ಹೋಗುತ್ತಿದ್ದ. ಈ ವೇಳೆ, 10 ವರ್ಷದ ಬಾಲಕಿಯೊಬ್ಬಳು ಸೈಕಲಿನಲ್ಲಿ ಬಂದಿದ್ದು ಆಕೆಯನ್ನು ತನ್ನ ಪರಿಚಯದ ಮಗುವೆಂದು ಭ್ರಮಿಸಿ ಗಲ್ಲವನ್ನು ಸವರಿದ್ದು ನಡೆದಿತ್ತು. ಸೈಕಲಿನಲ್ಲಿ ಬರುತ್ತಿದ್ದ ಹುಡುಗಿಯನ್ನು ಅಡ್ಡಗಟ್ಟಿ ನಿಲ್ಲಿಸಿದ್ದು ಮತ್ತು ಆಕೆಯ ಮುಖವನ್ನು ಮುಟ್ಟಿದ್ದು ಅಲ್ಲಿನ ಸ್ಥಳೀಯರನ್ನು ಸಹಜವಾಗೇ ಕೆರಳಿಸಿತ್ತು. ಕುಡಿದ ಮತ್ತಿನಲ್ಲಿದ್ದ ರವಿರಾಜ್ ಯಾರೋ ಪರಿಚಯದ ಹುಡುಗಿಯೆಂದು ಎಣಿಸ್ಕೊಂಡು ಹತ್ತಿರ ಹೋಗಿದ್ದು ಸತ್ಯ. ಆದರೆ, ನಡುಬೀದಿಯಲ್ಲಿ ಸಾರ್ವಜನಿಕರ ನಡುವೆಯೇ ಘಟನೆ ನಡೆದಿದ್ದರೂ, ಪ್ರಕರಣ ಗಂಭೀರವಾಗಲು ಕಾರಣವಾಗಿದ್ದು ಹುಡುಗಿ ಅನ್ಯಮತೀಯಳು ಅನ್ನುವ ಕಾರಣ ಅಷ್ಟೇ. ಅಲ್ಲಿ ಸೇರಿದ ಜನರು ಆನಂತರ ಯುವಕನನ್ನು ಯರ್ರಾಬಿರ್ರಿ ಪ್ರಶ್ನೆ ಮಾಡಿದ್ದು ವಿಷಯ ವಿಕೋಪಕ್ಕೆ ಹೋಗುವಂತಾಗಿತ್ತು. ಪ್ರಶ್ನೆ ಮಾಡಿದಾಗ, ನಾನು ಮುಟ್ಟಿದ್ದು ತಪ್ಪು. ಆದರೆ, ನಾನು ತಪ್ಪು ಉದ್ದೇಶದಿಂದ ಮುಟ್ಟಲು ಹೋಗಿಲ್ಲ ಎಂದು ಹೇಳಿದ್ದಾನೆ. ಪದೇ ಪದೇ ತನ್ನ ಅಸಹಾಯಕತೆಯನ್ನು ಹೇಳಿಕೊಂಡರೂ, ಅಲ್ಲಿನ ಯುವಕರು ಮಾತ್ರ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆತನಿಗೆ ಎರಡೇಟು ಬಿಗಿದು ಬಳಿಕ ಉಳ್ಳಾಲ ಪೊಲೀಸರನ್ನು ಕರೆದು ವಶಕ್ಕೆ ಒಪ್ಪಿಸಿದ್ದರು.
ಆದರೆ, ವಿಷ್ಯ ಅಷ್ಟಕ್ಕೇ ಮುಗಿಯಲು ಬಿಡಲಿಲ್ಲ. ಸಂಘಟನೆಯೊಂದರ ಗುಂಪು ಠಾಣೆಗೆ ತೆರಳಿ, ರವಿರಾಜ್ ವಿರುದ್ಧ ಪೋಕ್ಸೋ ಕಾಯ್ದೆ ಹೇರುವಂತೆ ಒತ್ತಡ ಹೇರಿತ್ತು ಅನ್ನೋ ಮಾಹಿತಿಗಳಿವೆ. ಆ ಗುಂಪಿನ ಯುವಕರಿಗೆ ಅಲ್ಲಿ ಏನಾಗಿತ್ತು ಅನ್ನುವ ಬಗ್ಗೆ ಅರಿವಿತ್ತೋ ಗೊತ್ತಿಲ್ಲ. ಉಳ್ಳಾಲ ಪೊಲೀಸರು ವಿಷಯ ಕೋಮು ದ್ವೇಷಕ್ಕೆ ಆಸ್ಪದ ಆಗಬಾರದು ಅನ್ನುವ ನೆಲೆಯಲ್ಲಿ ಕೊನೆಗೆ ಪೋಕ್ಸೋ ಕಾಯ್ದೆಯನ್ನೇ ಹೇರಿದ್ದರು. ಗಲ್ಲ ಮುಟ್ಟಿದ ಕಾರಣಕ್ಕೆ ರವಿರಾಜ್ ಪೋಕ್ಸೋ ಪಾಲಿಗೆ ಬಲಿಪಶುವಾಗಿದ್ದು ಸತ್ಯ. ಪೋಕ್ಸೋ ಕಾಯ್ದೆಯಲ್ಲಿ ಮೈಮುಟ್ಟಿದರೂ ಕೇಸು ಹಾಕಲು ಆಸ್ಪದ ಇದೆ. ಆದರೆ, ಸಂದರ್ಭ, ಸನ್ನಿವೇಶವನ್ನು ಗುರುತಿಸಿ ಪ್ರಕರಣ ದಾಖಲಿಸುವುದು ಪೊಲೀಸರ ಜವಾಬ್ದಾರಿ.
ಯಾವುದೇ ಘಟನೆ ಆದ್ರೂ ಪೊಲೀಸರು ಎಫ್ಐಆರ್ ಮಾಡಬೇಕೋ, ಬೇಡವೋ, ಮಾಡುವುದಿದ್ದರೆ ಯಾವ ರೀತಿ ಕೇಸ್ ಹಾಕಬೇಕು ಅನ್ನೋದ್ರ ಬಗ್ಗೆ ನಿರ್ಧರಿಸುವುದು ಆಯಾ ಠಾಣಾಧಿಕಾರಿಯ ಹೊಣೆ. ಯಾಕಂದ್ರೆ, ನ್ಯಾಯ ತೀರ್ಮಾನದ ಮೊದಲ ಮೆಟ್ಟಿಲು ಪೊಲೀಸ್ ಠಾಣೆ. ಯಾವುದೇ ವಿಚಾರ ಠಾಣೆಗೆ ಬಂದ ಮಾತ್ರಕ್ಕೆ ಎಫ್ಐಆರ್ ಮಾಡಬೇಕು ಎಂದಿಲ್ಲ. ಅದನ್ನು ಸೌಹಾರ್ದ ಮಾತುಕತೆಯಿಂದ ಠಾಣೆಯಲ್ಲಿಯೇ ಮುಗಿಸಲು ಯತ್ನಿಸುವುದು ಪೊಲೀಸರ ನೈತಿಕ ಜವಾಬ್ದಾರಿ. ಮುಗಿಸಲು ಸಾಧ್ಯವಾಗದೆ ಕೋರ್ಟ್ ಕಟಕಟೆಗೆ ಒಯ್ಯುವುದು ಅಗತ್ಯ ಅಂತೆನಿಸಿದರೆ ಮಾತ್ರ ಎಫ್ಐಆರ್ ದಾಖಲು ಮಾಡಬೇಕು. ಆದರೆ, ಕೆಲವೊಮ್ಮೆ ಕೋಮು ಸೂಕ್ಷ್ಮ, ಇನ್ನಿತರ ಒತ್ತಡಗಳ ಕಾರಣ ಪೊಲೀಸರು ತಮ್ಮ ಕರ್ತವ್ಯದಲ್ಲಿ ಎಡವುತ್ತಾರೆ. ರವಿರಾಜ್ ಪ್ರಕರಣದಲ್ಲಿ ತಾನು ಮಾಡದ ತಪ್ಪಿಗೆ ಬೆಲೆ ತೆರಬೇಕಾಯ್ತು ಅನ್ನುವ ಅಳುಕು ಮತ್ತು ಸಮಾಜದ ಬಗೆಗಿನ ಭಯದಿಂದಾಗಿ ತನ್ನ ಜೀವವನ್ನೇ ನ್ಯಾಯ ದೇಗುಲಕ್ಕೆ ಅರ್ಪಿಸಿದ್ದಾನೆ. ಪೊಲೀಸರಿಗೆ ಮತ್ತು ನ್ಯಾಯ ಕರುಣಿಸುವ ಕೋರ್ಟುಗಳಿಗೆ ಈ ಪ್ರಕರಣ ಒಂದು ಪಾಠವಾಗಬೇಕು.
Read: ಮಂಗಳೂರು ಕೋರ್ಟ್ ಮಹಡಿಯಿಂದ ಹಾರಿ ಆರೋಪಿ ಆತ್ಮಹತ್ಯೆ ! ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ ಉಳ್ಳಾಲ ನಿವಾಸಿ !!
A man accused under the POCSO Act died after he jumped from the court building here on Tuesday August 31. Ullal POCSO case accused jumps from 6th floor of Mangalore court complex public questions whose responsible for his death. The deceased is identified as Raviraj (31), a resident of Kinya. He reportedly jumped off from the sixth floor of Mangaluru district court.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm