ಗೋವಧೆ ವಿಡಿಯೋ ವೈರಲ್ ಖಂಡಿಸಿ ಗಂಗೊಳ್ಳಿ ಬಂದ್ ; ಸಾವಿರಾರು ಸಂಖ್ಯೆಯಲ್ಲಿ ಹಿಂದು ಸಂಘಟನೆ ಕಾರ್ಯಕರ್ತರ ಮೆರವಣಿಗೆ

01-10-21 02:23 pm       Udupi Correspondent   ಕರಾವಳಿ

ಗೋಹತ್ಯೆ ಮಾಡುವ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಗಂಗೊಳ್ಳಿ ಪರಿಸರದಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತರ ಆಕ್ರೋಶ ಎದ್ದಿದ್ದು ಗಂಗೊಳ್ಳಿಯಲ್ಲಿ ಬಂದ್ ನಡೆಸಲಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ‌

ಕುಂದಾಪುರ, ಅ.1: ಗೋಹತ್ಯೆ ಮಾಡುವ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಗಂಗೊಳ್ಳಿ ಪರಿಸರದಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತರ ಆಕ್ರೋಶ ಎದ್ದಿದ್ದು ಗಂಗೊಳ್ಳಿಯಲ್ಲಿ ಬಂದ್ ನಡೆಸಲಾಗಿದ್ದು ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ‌

ವಿಡಿಯೋ ಖಂಡಿಸಿ, ಅದನ್ನು ಮಾಡಿರುವ ವ್ಯಕ್ತಿಗಳನ್ನು ಬಂಧಿಸಲು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯಿಂದ ಗಂಗೊಳ್ಳಿ ಬಂದ್ ನಡೆಸಲು ಕರೆ ಕೊಡಲಾಗಿತ್ತು. ಅದರಂತೆ, ಬಂದ್ ಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟು ಬಂದ್ ಮಾಡಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಮೀನುಗಾರಿಕಾ ಬಂದರಿನಿಂದ ಹೊರಟ 5000ಕ್ಕೂ ಅಧಿಕ ಹಿಂದು ಸಂಘಟನೆಯ ಕಾರ್ಯಕರ್ತರು, ಮಹಿಳೆಯರು ಗಂಗೊಳ್ಳಿಯ ಪ್ರಮುಖ ಬೀದಿಗಳಲ್ಲಿ ಸಾಗುತ್ತಾ ಗೋ ಹಂತಕರ ವಿರುದ್ಧ ಘೋಷಣೆ ಕೂಗಿದ್ದಾರೆ. ಗಂಗೊಳ್ಳಿಯಲ್ಲಿ ಕಾರ್ಯಾಚರಿಸುವ ಅಕ್ರಮ ಮಸೀದಿ ಮತ್ತು ಕಸಾಯಿಖಾನೆಗಳನ್ನು ಕೂಡಲೇ ಮುಚ್ಚಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ರಸ್ತೆಯುದ್ದಕ್ಕೂ ಜನರು ಘೋಷಣೆ ಕೂಗುತ್ತಾ ಸಾಗಿದ್ದು ಪೊಲೀಸರ ಬಂದೋಬಸ್ತ್ ನಡುವೆಯೇ ಶಾಂತಿಯುತ ಪ್ರತಿಭಟನೆ ನಡೆಸಲಾಗಿದೆ. ಎರಡು ದಿನಗಳ ಹಿಂದೆ, ಗಂಗೊಳ್ಳಿಯಲ್ಲಿ ಗೋವನ್ನು ವಧೆ ಮಾಡುವ ವಿಡಿಯೋ ವೈರಲ್ ಮಾಡಲಾಗಿತ್ತು. ಉದ್ದೇಶಪೂರ್ವಕ ಈ ರೀತಿ ವಿಡಿಯೋ ಮಾಡಿ, ಹಿಂದುಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿತ್ತು.‌

Video: 

Kundapura Hindu activists join in large number over slaughtering of cow made live, demand arrest of those who made it live