ಬ್ರೇಕಿಂಗ್ ನ್ಯೂಸ್
01-10-21 07:13 pm Mangaluru Correspondent ಕರಾವಳಿ
ಮಂಗಳೂರು, ಅ.1: ಉಚಿತ ಕೊಟ್ಟರೆ ಅದಕ್ಕೆ ಬೆಲೆ ಕಡಿಮೆ ಎನ್ನುತ್ತಾರೆ. ಕೊರೊನಾ ಲಸಿಕೆ ವಿಚಾರದಲ್ಲೂ ಈ ಮಾತು ನಿಜವಾಗುತ್ತಿದೆ. ದೇಶಾದ್ಯಂತ ಕೊರೊನಾ ಲಸಿಕೆಯನ್ನು ಸರಕಾರದಿಂದ ಉಚಿತ ನೀಡುತ್ತಿದ್ದರೆ, ಅದೆಷ್ಟೋ ಮಂದಿ ಲಸಿಕೆ ಪಡೆಯದೇ ಅಸಡ್ಡೆ ವಹಿಸಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಪ್ರತಿ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕೆಂಬ ಗುರಿಯನ್ನು ಜಿಲ್ಲಾಡಳಿತಕ್ಕೆ ವಹಿಸಿದ್ದರೆ, ಹೆಚ್ಚಿನ ಕಡೆಗಳಲ್ಲಿ ಒಟ್ಟು ಜನಸಂಖ್ಯೆಯ 20 ಶೇಕಡಾ ಮಂದಿ ಲಸಿಕೆಯಿಂದಲೇ ದೂರ ಉಳಿದಿದ್ದಾರೆ.
ರಾಜ್ಯದಲ್ಲಿ ಮುಂದುವರಿದ ಜಿಲ್ಲೆಗಳೆನಿಸಿರುವ ದಕ್ಷಿಣ ಕನ್ನಡ, ಉಡುಪಿಯಲ್ಲಿ ಇನ್ನೂ 90 ಶೇಕಡಾ ಗುರಿ ತಲುಪಲು ಸಾಧ್ಯವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 87 ಶೇಕಡಾ ಮಂದಿಗೆ ಲಸಿಕೆ ನೀಡಲಾಗಿದ್ದರೆ, ಇನ್ನೂ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಲಸಿಕೆ ಹಾಕಿಸದೆ ಉಳಿದುಕೊಂಡಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಈಗ ಲಸಿಕೆ ಪಡೆಯದ ಮಂದಿಯನ್ನು ಹುಡುಕುವ ಸ್ಥಿತಿ ಎದುರಾಗಿದೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿಯ ಪತ್ತೆಗಾಗಿ ಜಿಲ್ಲಾಡಳಿತ ಈಗ ಪಟ್ಟಿ ರೆಡಿ ಮಾಡುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ 18 ವರ್ಷ ಮೇಲ್ಪಟ್ಟವರ ಪೈಕಿ 18 ಲಕ್ಷ ಮಂದಿಯನ್ನು ಲಸಿಕೆ ಹಾಕಿಸಲು ಗುರುತಿಸಿದ್ದು, ಯುದ್ಧೋಪಾದಿಯಲ್ಲಿ ಲಸಿಕಾ ಆಂದೋಲನ ಏರ್ಪಡಿಸಿತ್ತು. ವಿವಿಧ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳಿಂದ ಲಸಿಕಾ ಶಿಬಿರಗಳು ನಡೆದಿದ್ದರಿಂದ ಕೇವಲ ನಾಲ್ಕು ತಿಂಗಳಲ್ಲಿ ಗುರಿ ಪೂರೈಸುವತ್ತ ಸಾಗಿತ್ತು. ಇದರಂತೆ, ದ.ಕ. ಜಿಲ್ಲೆಯಲ್ಲಿ 15.66 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಎರಡು ಲಕ್ಷಕ್ಕೂ ಹೆಚ್ಚು ಜನ ಲಸಿಕೆಯಿಂದಲೇ ದೂರ ಉಳಿದಿದ್ದಾರೆ.
ಆರಂಭದಲ್ಲಿ ಕೊರೊನಾ ಲಸಿಕೆಯ ಬಗ್ಗೆ ಜನರಲ್ಲಿ ಗೊಂದಲ, ಅಪನಂಬಿಕೆ ಇತ್ತು. ಲಸಿಕೆ ತೆಗೆದುಕೊಂಡರೆ ಪುರುಷತ್ವ ನಾಶವಾಗುತ್ತದೆ ಎಂಬ ವದಂತಿ ಹರಡಿದ್ದರಿಂದ ಭಯವೂ ಕೆಲವರಲ್ಲಿತ್ತು. ಆದರೆ, ಸ್ವತಃ ತಜ್ಞರೇ ಲಸಿಕೆಯನ್ನು ಪಡೆದು ಭಯ ಪಡುವ ಅಗತ್ಯವಿಲ್ಲವೆಂದು ಜಾಗೃತಿ ಮೂಡಿಸಿದ್ದರು. ಹಳ್ಳಿ ಹಳ್ಳಿಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಲಸಿಕೆ ಪಡೆದು ಜನರ ಭಯ ನಿವಾರಿಸಿದ್ದರು. ಆದರೆ, ಇವೆಲ್ಲ ಮುಗಿದು ಎಲ್ಲರೂ ಲಸಿಕೆ ಪಡೆಯುತ್ತಿದ್ದರೆ, ಎರಡು ಲಕ್ಷ ಮಂದಿ ಒಂದು ಡೋಸ್ ಪಡೆಯುವುದಕ್ಕೂ ಬಾರದೆ ದೂರ ಉಳಿದಿದ್ದಾರೆ.
ಮಂಗಳೂರಿನಂಥ ನಗರದಲ್ಲೂ ಬಹಳಷ್ಟು ಮಂದಿ ಲಸಿಕೆ ಪಡೆಯದೆ ಉಳಿದುಕೊಂಡಿದ್ದಾರೆ ಎಂಬ ಮಾಹಿತಿಗಳಿವೆ. ಬಾಕಿ ಉಳಿಸಿಕೊಂಡವರ ಪೈಕಿ ಹೆಚ್ಚಿರುವುದು 45 ವರ್ಷಕ್ಕಿಂತ ಹೆಚ್ಚಿನವರು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಕೆಲವರು ತಮ್ಮ ರೋಗ, ಇನ್ನಿತರ ಕಾರಣದಿಂದ ಲಸಿಕೆಯಿಂದ ದೂರ ಉಳಿದಿದ್ದರೆ, ಹಳ್ಳಿ ಪ್ರದೇಶಗಳಲ್ಲಿ ಕೊರೊನಾ ಭಯವೇ ತಮಗಿಲ್ಲ. ಲಸಿಕೆ ಯಾಕೆ ಬೇಕು ಎನ್ನುವ ಹುಂಬತನದಲ್ಲಿ ಅಸಡ್ಡೆ ವಹಿಸಿದ್ದಾರೆ ಎನ್ನಲಾಗುತ್ತಿದೆ.
Mangalore 20 percent of people don't want to get vaccinated, health administration in Trouble. 87 percent of the people have been vaccinated whereas 20 percent are totally far.
02-10-25 03:50 pm
Bangalore Correspondent
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
03-10-25 04:50 pm
HK News Desk
ಮುಂದಿನ ವಾರ ಅಫ್ಘಾನಿಸ್ತಾನದ ತಾಲಿಬಾನ್ ಸಚಿವ ಭಾರತಕ್...
03-10-25 04:48 pm
India-Russia Summit, Vladimir Putin: ಡಿಸೆಂಬರ್...
02-10-25 03:45 pm
ಆರೆಸ್ಸೆಸ್ ಶತಮಾನೋತ್ಸವ ; ಭಾರತ ಮಾತೆಯ ಚಿತ್ರವಿರುವ...
01-10-25 09:44 pm
Cough Syrup Side Effects Suspected, Kidney Fa...
01-10-25 05:32 pm
03-10-25 02:11 pm
Mangalore Correspondent
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
Illegal Slaughterhouse in Mangalore: ಬೆನ್ನು ಬ...
02-10-25 10:43 pm
D.K. Shivakumar, Mangaluru Dasara: ದೇವರೇ ನನ್ನ...
02-10-25 11:43 am
Mangalore, Pilinalike 2025: ಪಿಲಿನಲಿಕೆ ಉತ್ಸವಕ್...
01-10-25 11:00 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm