ಬ್ರೇಕಿಂಗ್ ನ್ಯೂಸ್
08-10-21 10:07 pm Headline Karnataka News Network ಕರಾವಳಿ
ಮಂಗಳೂರು, ಅ.8 : ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಸಿದ್ಧತೆ ನಡೆಯುತ್ತಿದ್ದಂತೆ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಇಕನಾಮಿಕ್ಸ್ ಉಪನ್ಯಾಸಕರು ತಳಮಳಕ್ಕೀಡಾಗಿದ್ದಾರೆ. ಎನ್ ಇಪಿ ಆಧರಿಸಿ, ಶಿಕ್ಷಣ ನೀತಿ ಜಾರಿಗೆ ಬಂದರೆ ತಾವು ಕೆಲಸ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಬಿಕಾಂ, ಬಿಬಿಎ ಸೇರಿ ಕಾಮರ್ಸ್ ಪದವಿಗಳಲ್ಲಿ ಇಕನಾಮಿಕ್ಸ್ ವಿಷಯವನ್ನು ಐಚ್ಛಿಕವಾಗಿಸಬೇಕೆಂಬ ತಜ್ಞರ ವರದಿ.
ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಮಂಗಳೂರು ವಿವಿ ವ್ಯಾಪ್ತಿಯ 200ಕ್ಕೂ ಹೆಚ್ಚು ಕಾಲೇಜುಗಳಿವೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರದಲ್ಲಿ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆಯಿಂದ ನೇಮಿಸಲಾಗಿರುವ ಶಿಕ್ಷಣ ತಜ್ಞರ ವರದಿಯಂತೆ ಈ ಕಾಲೇಜುಗಳಲ್ಲಿ ಬೋಧನೆ ಮಾಡಬೇಕಾಗಿರುತ್ತದೆ. ಶಿಕ್ಷಣ ತಜ್ಞರ ಸಮಿತಿಯಿಂದ ಈ ಬಗ್ಗೆ ಮಂಗಳೂರು ವಿವಿಗೆ ವರದಿಯನ್ನು ನೀಡಲಾಗಿದ್ದು, ಅದರಲ್ಲಿ ಬಿಕಾಂ, ಬಿಬಿಎ ಪದವಿಗಳಿಗೆ ಇಕನಾಮಿಕ್ಸ್ ಪಠ್ಯವನ್ನು ಕಡ್ಡಾಯ ಕಲಿಕೆಯಿಂದ ಹೊರತುಪಡಿಸಲಾಗಿದೆ. ಇದರಿಂದಾಗಿ ಇಕನಾಮಿಕ್ಸ್ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ನೂರಾರು ಅರ್ಥಶಾಸ್ತ್ರ ಉಪನ್ಯಾಸಕರು ತಮ್ಮ ಕೆಲಸಕ್ಕೆ ಕುತ್ತು ಬೀಳಲಿದೆ ಎನ್ನುವ ಭೀತಿಗೆ ಒಳಗಾಗಿದ್ದಾರೆ.
ಈ ಬಗ್ಗೆ ನೊಂದಿರುವ ಅರ್ಥಶಾಸ್ತ್ರ ಉಪನ್ಯಾಸಕರ ನಿಯೋಗವು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಮತ್ತು ಮಂಗಳೂರು ವಿವಿಯ ಉಪ ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ ಅವರಿಗೆ ಮನವಿಯನ್ನೂ ನೀಡಿದ್ದಾರೆ. ಮಂಗಳೂರಿನ ಕಾಲೇಜೊಂದರ ಪ್ರಾಂಶುಪಾಲರ ಪ್ರಕಾರ, ಇದೇ ನೀತಿಯನ್ನು ಜಾರಿಗೆ ತರಲು ಹೊರಟಲ್ಲಿ ಮಂಗಳೂರು ವಿವಿ ವ್ಯಾಪ್ತಿಯಲ್ಲಿರುವ 170 ಮತ್ತು ಕರ್ನಾಟಕ ರಾಜ್ಯದಲ್ಲಿ 3 ಸಾವಿರಕ್ಕೂ ಹೆಚ್ಚಿರುವ ಅರ್ಥಶಾಸ್ತ್ರ ಉಪನ್ಯಾಸಕರು ತಮ್ಮ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ.
ಬಿಬಿಎ ಮತ್ತು ಬಿಕಾಂ ಪದವಿಗಳಲ್ಲಿ ಪ್ರಮುಖ ವಿಷಯವಾಗಬೇಕಿದ್ದ ಇಕನಾಮಿಕ್ಸ್ ಅನ್ನು ಐಚ್ಛಿಕವಾಗಿ ಇರಿಸಲಾಗಿದೆ. ಅದರಲ್ಲೂ ನಾಲ್ಕು ವರ್ಷದ ಪದವಿಯಲ್ಲಿ ಕೊನೆಯ ಸೆಮಿಸ್ಟರ್ ನಲ್ಲಿ ಇಕನಾಮಿಕ್ಸ್ ಪಠ್ಯವನ್ನು ಬೇಕಾದವರು ತಗೊಳ್ಳಬಹುದು ಎಂದು ಐಚ್ಛಿಕ ಮಾಡಲಾಗಿದ್ದು ಆಕ್ಷೇಪಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಕೊನೆಯ ಸೆಮಿಸ್ಟರ್ ನಲ್ಲಿ ಪ್ರಮುಖ ಪಠ್ಯವಾಗಿರುವ ಇಕನಾಮಿಕ್ಸ್ ಅನ್ನು ವಿದ್ಯಾರ್ಥಿಗಳು ಆಯ್ದುಕೊಳ್ಳಲು ಬಯಸುವುದಿಲ್ಲ. ಇಕನಾಮಿಕ್ಸ್ ಬದಲಿಗೆ, ಇತರೇ ಸುಲಭ ಪಠ್ಯಗಳನ್ನು ಆಯ್ಕೆ ಮಾಡುತ್ತಾರೆ. ಇದರಿಂದಾಗಿ ಸಹಜವಾಗಿ ಅರ್ಥಶಾಸ್ತ್ರ ಕಲಿಸುವ ಉಪನ್ಯಾಸಕರಿಗೆ ಕೆಲಸ ಇಲ್ಲದಂತಾಗುತ್ತದೆ ಎನ್ನುವ ಮಾತು ಉಪನ್ಯಾಸಕರಿಂದ ಕೇಳಿಬಂದಿದೆ. ಇವರೆಡು ಕೋರ್ಸ್ ಗಳಿಗೂ ಇಕನಾಮಿಕ್ಸ್ ಮೂಲಭೂತ ವಿಷಯ ಆಗಿದ್ದರೂ, ಇದನ್ನು ಹೊರತಾಗಿಸಿ ವಿದ್ಯಾರ್ಥಿಗಳಿಗೆ ಇತರೇ ವಿಷಯಗಳ ಬೋಧನೆಯಿಂದ ಯಾವ ಸಾಧನೆ ಸಾಧ್ಯ ಎಂದು ಕೆಲವು ಉಪನ್ಯಾಸಕರು ಪ್ರಶ್ನಿಸಿದ್ದಾರೆ.
ಉಪನ್ಯಾಸಕರು ಆತಂಕ ಪಡುವ ಅಗತ್ಯ ಇಲ್ಲ - ಕುಲಪತಿ
ಈ ಬಗ್ಗೆ ಮಂಗಳೂರು ವಿವಿ ಕುಲಪತಿ ಯಡಪಡಿತ್ತಾಯ ಬಳಿ ಕೇಳಿದರೆ, ಆ ರೀತಿಯ ಯಾವುದೇ ಆತಂಕ ಅಗತ್ಯವಿಲ್ಲ ಎಂದಿದ್ದಾರೆ. ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಉಪನ್ಯಾಸಕರ ವಿಚಾರದಲ್ಲಿ ಇರುವ ರೀತಿಯಲ್ಲೇ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದೇವೆ. ಕೆಲವು ಕಾಲೇಜುಗಳಲ್ಲಿ ಇಕನಾಮಿಕ್ಸ್ ಉಪನ್ಯಾಸಕರು ಕೇವಲ ಅರ್ಥಶಾಸ್ತ್ರವನ್ನು ಮಾತ್ರ ಬೋಧನೆ ಮಾಡುತ್ತಾರೆ. ಆದರೆ, ಇನ್ನು ಕೆಲವು ಕಾಲೇಜುಗಳಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರು ತಾವು ಕಲಿತಿರುವ ಇನ್ನಿತರ ವಿಷಯಗಳನ್ನೂ ಬೋಧನೆ ಮಾಡಲು ಅವಕಾಶ ಇದೆ. ಇದೇ ನೀತಿಯಡಿ ಎಲ್ಲ ಕಾಲೇಜುಗಳಲ್ಲಿ ವರ್ಕ್ ಲೋಡ್ ಹಂಚಿಕೆ ಆಗಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ವ್ಯಾಪ್ತಿಯ 207 ಕಾಲೇಜುಗಳಲ್ಲಿ ಇದೇ ನೀತಿ ಅಳವಡಿಸಿಕೊಳ್ಳಲು ಒಪ್ಪಿಗೆಯನ್ನೂ ಪಡೆದುಕೊಂಡಿದ್ದೇವೆ ಎಂದು ಪ್ರೊ.ಯಡಪಡಿತ್ತಾಯ ಹೇಳಿದ್ದಾರೆ.
ಕಾಮರ್ಸ್ ಉಪನ್ಯಾಸಕರು ತಮ್ಮ ವರ್ಕ್ ಲೋಡ್ ಕಡಿಮೆಯಾಗಲಿದೆ ಅನ್ಕೋಬೇಕಿಲ್ಲ. ವಿವಿ ವ್ಯಾಪ್ತಿಯಲ್ಲಿ ಎಂಎಸ್ಸಿ ಇಕನಾಮಿಕ್ಸ್, ಬಿಎಸ್ಸಿ ಇಕನಾಮಿಕ್ಸ್ ಕೋರ್ಸ್ ಆರಂಭಿಸಲಾಗುವುದು. ಈವರೆಗೆ ಇಕನಾಮಿಕ್ಸ್ ಎಂಎ ಮತ್ತು ಪಿಎಚ್ ಡಿ ಮಾತ್ರ ಇತ್ತು. ಇದರ ಜೊತೆಗೆ ಫೈನಾನ್ಸಿಯಲ್ ಲಿಟರಸಿ ಮತ್ತು ಡಿಜಿಟಲ್ ಲಿಟರಸಿ ಎನ್ನುವ ಹೊಸ ಕೋರ್ಸ್ ಬರಲಿದೆ. ಅದನ್ನೂ ಕಾಮರ್ಸ್ ಉಪನ್ಯಾಸಕರೇ ಬೋಧನೆ ಮಾಡಬೇಕು. ಇದರಿಂದ ಪೀರಿಯಡ್ ಕಡಿಮೆಯಾಗುವ ಬದಲು ವರ್ಕ್ ಫ್ಲೋ ಇನ್ನಷ್ಟು ಹೆಚ್ಚಲಿದೆ. ಪೂರ್ತಿಯಾಗಿ ಶಿಕ್ಷಣ ನೀತಿ ಜಾರಿಗೆ ಬಂದಲ್ಲಿ ಈಗ ಇರುವುದಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಉಪನ್ಯಾಸಕರ ಅಗತ್ಯ ಬೀಳಬಹುದು ಎಂದು ಕುಲಪತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
A proposed change in syllabus as per the National Education Policy (NEP) has left Economics teachers of Mangalore University-affiliated colleges worried about their jobs. This is because the university, which has colleges across Dakshina Kannada, Udupi and Kodagu districts, has decided to comply with the framework issued by an expert committee appointed by the Karnataka State Higher Education Council which excludes Economics as a compulsory subject for B Com and BBA courses. The expert committee’s report was released in September 2021.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm