ಬ್ರೇಕಿಂಗ್ ನ್ಯೂಸ್
12-10-21 12:07 pm Mangalore Correspondent ಕರಾವಳಿ
ಮಂಗಳೂರು, ಅ.12 : ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳು ಬೆಳಗಾವಿ, ಮೈಸೂರು ಸುತ್ತಿ ಕಡೆಗೆ ಮಂಗಳೂರಿನಲ್ಲಿ ಸಿಕ್ಕಿಬೀಳುವುದಕ್ಕೆ ಪ್ರಮುಖ ಕಾರಣವಾಗಿದ್ದು ಇಬ್ಬರು ಆಟೋ ಚಾಲಕರು. ಇಂದು ಬೆಳಗ್ಗೆ 7 ಗಂಟೆಗೆ ನಗರದ ಜ್ಯೋತಿ ವೃತ್ತದಲ್ಲಿ ಬೆಂಗಳೂರು ಬಸ್ ಇಳಿದಿದ್ದ ಮಕ್ಕಳು ಆಟೋ ಚಾಲಕರ ಬಳಿಗೆ ತೆರಳಿದ್ದರು.
ಆಟೋ ಸ್ಟಾಂಡ್ ಬಳಿಗೆ ಬಂದು ಇಲ್ಲಿ ಉಳಿದುಕೊಳ್ಳೋಕೆ ಎಲ್ಲಾದ್ರೂ ಲಾಡ್ಜ್ ಸಿಗುತ್ತಾ ಎಂದು ಕೇಳಿದ್ದಾರೆ. ಮೂರು ದಿನಗಳಿಂದ ಅಲೆದಾಡಿದ್ದರಿಂದ ಸುಸ್ತಾಗಿತ್ತೋ ಏನೋ.. ಮಕ್ಕಳು ಲಾಡ್ಜ್ ಬಗ್ಗೆ ವಿಚಾರಿಸಿದ್ದರಿಂದ ಆಟೋ ಚಾಲಕರು ಸಹಜವಾಗೇ ಅನುಮಾನಗೊಂಡಿದ್ದಾರೆ.
ನೋಡೋಕೆ ದೊಡ್ಡವರ ಮಕ್ಕಳಂತೆ ಇದ್ದಾರೆ, ಏನೋ ಮನೆ ಬಿಟ್ಟು ಬಂದವರ ರೀತಿ ಇದ್ದಾರೆಂದು ಸಂಶಯದಿಂದ ಮಾತನಾಡಿಸಿದ್ದಾರೆ. ಅದರಲ್ಲಿ ಒಬ್ಬಾಕೆ ಇಲ್ಲಿ ಚಿನ್ನ ಅಡ ಇಟ್ಟು ಹಣ ತೆಗೆಸಿಕೊಡಬಹುದಾ ಎಂದು ಕೇಳಿದ್ದಾಳೆ. ಇನ್ನೊಬ್ಬ ಬೇರೆಯವರಿಂದ ಮೊಬೈಲ್ ಪಡೆದು ಕರೆ ಮಾಡಲು ತೊಡಗಿದ್ದಾನೆ. ಇದರಿಂದ ಅನುಮಾನಗೊಂಡ ಆಟೋ ಚಾಲಕರಾದ ರಮೇಶ್ ಮತ್ತು ಪ್ರಶಾಂತ್ ಸೇರಿ ಮಕ್ಕಳ ಬಗ್ಗೆ ವಿಚಾರಿಸಿದ್ದು ತಾವು ಮನೆ ಬಿಟ್ಟು ಬಂದಿದ್ದ ಬಗ್ಗೆ ನಿಜ ವಿಚಾರವನ್ನು ಮಕ್ಕಳು ಹೇಳಿದ್ದಾರೆ.


ಕೂಡಲೇ ಎಚ್ಷೆತ್ತ ಅಟೋ ಚಾಲಕರು ಮಕ್ಕಳನ್ನು ನೇರವಾಗಿ ಪಾಂಡೇಶ್ವರ ಠಾಣೆಗೆ ಒಯ್ದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಟೋ ಚಾಲಕ, ಮಧ್ಯವಯಸ್ಕರಾದ ರಮೇಶ್, ಬೆಳಗ್ಗೆ ಸುಮಾರು 7:30ರ ಸುಮಾರಿಗೆ ಬಸ್ಸಿನಿಂದ ನಾಲ್ಕು ಮಕ್ಕಳು ಇಳಿದಿದ್ದರು. ಮಕ್ಕಳ ಚಲನ ವಲನ ಗಮನಿಸಿ ನಮಗೆ ಅನುಮಾನ ಬಂತು. ಉಳಿದುಕೊಳ್ಳಲು ಲಾಡ್ಜ್ ಸಿಗುತ್ತಾ ಎಂದು ನಮ್ಮನ್ನೇ ಕೇಳಿ, ಚಿನ್ನ ಅಡವು ಇಡುವ ಬಗ್ಗೆ ಮಾಹಿತಿ ಕೇಳಿದ್ರು. ಮಕ್ಕಳ ಬಗ್ಗೆ ಅನುಮಾನದಿಂದ ಪೊಲೀಸರ ಬಳಿಗೆ ಕರೆದೊಯ್ದಿದ್ದೇವೆ ಎಂದು ತಿಳಿಸಿದ್ದಾರೆ.
ಅಟೋದಲ್ಲಿ ಹತ್ತಿಸಿಕೊಂಡು ಲಾಡ್ಜ್ ಗೆಂದು ಕರೆದೊಯ್ತೀವಿ ಎಂದು ಹೇಳಿ ನೇರವಾಗಿ ಪಾಂಡೇಶ್ವರ ಠಾಣೆಗೆ ಮಕ್ಕಳನ್ನು ಕರೆದೊಯ್ದಿದ್ದು ರಕ್ಷಣೆ ಮಾಡಿದ್ದಾರೆ. ಮಕ್ಕಳನ್ನು ಸುರಕ್ಷಿತವಾಗಿ ಪೊಲೀಸರ ಬಳಿಗೆ ಕರೆದೊಯ್ದ ಆಟೋ ಚಾಲಕರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವಿಕೃತ ಮನಸ್ಕರು ಯಾರಾದ್ರೂ ಸಿಗುತ್ತಿದ್ದರೆ ಮಕ್ಕಳ ಸ್ಥಿತಿ ಏನಾಗುತ್ತಿತ್ತೋ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಮನೆಯವರು ಬೈತಾರೆ, ಆಡೋಕೆ ಬಿಡ್ತಾ ಇಲ್ಲವೆಂದು ಬೆಂಗಳೂರು ಮನೆ ಬಿಟ್ಟು ಬಂದಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆ !
Missing children in Bangalore found in Mangalore thanks to two Auto drivers. Three tenth standard students who were studying in Soundarya school within Bagalagunte police station limits and had gone missing two days back, have been found. Further, the four others which included a major and three minor, were found in Mangaluru. The 15-year-olds, Parikshit, Nandan and Kiran, had left their homes duly leaving behind letters explaining that they wanted to pursue a career in sports and were disinterested in studies. The children had left at around 5.30 am on Saturday with Rs 1,500 cash each. A search launched for them had failed to locate them.
11-02-26 11:02 pm
HK News Desk
Breast Cancer Awareness Drive Goes Nationwide...
11-02-26 01:34 pm
ಸ್ತನ ಕ್ಯಾನ್ಸರ್ ಬಗ್ಗೆ ದೇಶವ್ಯಾಪಿ ಜಾಗೃತಿ ; ಕಲಬರಗ...
11-02-26 01:09 pm
ಛೆ… ಇವಳೆಂಥ ಮಗಳು! ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬ...
09-02-26 07:20 pm
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
11-02-26 06:47 pm
HK News Desk
ಹಗಲಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್, ರಾತ್ರಿ ವೇಳೆ...
11-02-26 04:22 pm
ಮಥುರಾದಲ್ಲಿ ಮೂವರು ಮಕ್ಕಳಿಗೆ ವಿಷವುಣಿಸಿ ದಂಪತಿ ಸಾವ...
10-02-26 07:31 pm
ಅಡೂರು ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು...
10-02-26 02:15 pm
ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಕೈದಿ ಫರೀದಾ...
10-02-26 11:44 am
11-02-26 06:00 pm
Mangalore Correspondent
ಎಡಪದವು ಬಳಿ ಹೊಸ ಹೆದ್ದಾರಿಗೆ ಅಗೆತ - ಹಳೆ ರಸ್ತೆ ಕು...
11-02-26 03:45 pm
Love Jihad, Mangalore: ಬಿಎಸ್ಸಿ ಕ್ರಿಮಿನಾಲಜಿ ಓದ...
10-02-26 11:03 pm
Mangaore, Marriage Fraud: ಹಲವಾರು ಹೆಂಡಿರ ಮುದ್ದ...
10-02-26 08:27 pm
Oman Accident: ಒಮಾನ್ ನಲ್ಲಿ ಭೀಕರ ಅಪಘಾತ ; ಕಾಪು...
09-02-26 11:20 pm
11-02-26 10:54 pm
Udupi Correspondent
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಬೆಲೆಯ ಜಮೀನು ಗುಳು...
11-02-26 09:10 pm
ಸಚಿವ ಬೈರತಿ ಸುರೇಶ್ ಕಚೇರಿಯಲ್ಲೇ 300 ಗ್ರಾಂ ಚಿನ್ನಾ...
10-02-26 09:05 pm
Peter Caddy, Arrest: ಉದ್ಯಮಿಗಳಿಗೆ ಸಾಲ ಕೊಡಿಸುವು...
10-02-26 04:38 pm
Belthangady Fake Kidnap: ಕಾಲೇಜು ವಿದ್ಯಾರ್ಥಿನಿ...
10-02-26 10:59 am