ಬ್ರೇಕಿಂಗ್ ನ್ಯೂಸ್
12-10-21 10:34 am Mangaluru Correspondent ಕರಾವಳಿ
ಮಂಗಳೂರು, ಅ.12: ಬೆಂಗಳೂರಿನಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಭಾನುವಾರ ಬೆಳಗ್ಗೆ ಚಿಕ್ಕಬಾಣವಾರ ಪ್ರದೇಶದಿಂದ ಬಿಸಿಎ ಓದುತ್ತಿದ್ದ 21 ವರ್ಷದ ಅಮೃತವರ್ಷಿಣಿ ಎಂಬ ಯುವತಿ ಜೊತೆ 12 ವರ್ಷದ ಮೂವರು ಮಕ್ಕಳು ನಾಪತ್ತೆಯಾಗಿದ್ದರು. ಒಂದೇ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಜೊತೆಗೇ ಆಟವಾಡುತ್ತಿದ್ದ ರಾಯನ್ ಸಿದ್ದಾರ್ಥ್, ಚಿಂತನ್, ಭೂಮಿ ಎಂಬ ಮೂವರು ಮಕ್ಕಳ ನಾಪತ್ತೆ ಪ್ರಕರಣ ತೀವ್ರ ಸಂಕಲನಕ್ಕೆ ಕಾರಣವಾಗಿತ್ತು. ಹೆತ್ತವರು ಭಾರೀ ಆತಂಕಕ್ಕೆ ಒಳಗಾಗಿದ್ದರು.
ಮನೆಯ ಪರಿಸರದಲ್ಲಿ ಜೊತೆಗೇ ಆಟವಾಡುತ್ತಿದ್ದರಿಂದ ಓದಿನ ಬಗ್ಗೆ ಆಸಕ್ತಿ ಇಲ್ಲ. ಯಾವತ್ತೂ ಆಟವಾಡುತ್ತೀರಿ. ಹೀಗೇ ಮಾಡಿದ್ರೆ ನಿಮ್ಮನ್ನು ಹಾಸ್ಟೆಲ್ ಹಾಕಿಸ್ತೀವಿ ಎಂದು ಮಕ್ಕಳನ್ನು ಹೆತ್ತವರು ಗದರಿಸಿದ್ದರು. ಇದೇ ನೆಪದಲ್ಲಿ ತಮ್ಮನ್ನು ಹಾಸ್ಟೆಲ್ ಹಾಕ್ತಾರೆಂದು ಹೆದರಿದ ಮಕ್ಕಳು, ಭಾನುವಾರ ಬೆಳಗ್ಗೆ ಮನೆ ಬಿಟ್ಟು ಬಂದಿದ್ದಾರೆ.
ಮೊದಲಿಗೆ, ಬೆಂಗಳೂರಿನಿಂದ ಬೆಳಗಾವಿಗೆ, ಅಲ್ಲಿಂದ ಮೈಸೂರಿಗೆ ಬಂದಿದ್ದ ಮಕ್ಕಳು ಗತಿಕಾಣದೆ ತಿರುಗಿ ಬೆಂಗಳೂರು ತೆರಳಿದ್ದರು. ಆನಂತರ, ನಿನ್ನೆ ರಾತ್ರಿ ಮಂಗಳೂರಿಗೆ ಬರುವ ಸ್ಲೀಪರ್ ಬಸ್ ಹಿಡಿದು ಬಂದಿದ್ದಾರೆ. ಮಂಗಳೂರಿನ ಜ್ಯೋತಿ ವೃತ್ತದಲ್ಲಿ ಬಸ್ ಇಳಿದು ಆಟೋ ಹತ್ತಿದ್ದಾರೆ. ಆಟೋ ಚಾಲಕನಲ್ಲಿ ಯಾವುದೋ ಕಡೆಗೆ ಹೋಗಬೇಕೆಂದು ಹೇಳಿದ್ದಾರೆ. ಆದರೆ, ಮಕ್ಕಳ ವರ್ತನೆ, ಅವರು ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡು ಅನುಮಾನಗೊಂಡ ಆಟೋ ಚಾಲಕ ಮಕ್ಕಳನ್ನು ನೇರವಾಗಿ ಪಾಂಡೇಶ್ವರ ಠಾಣೆಗೆ ಒಯ್ದಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ, ತಾವು ಬೆಂಗಳೂರಿನಿಂದ ಬಂದಿರುವುದನ್ನು ತಿಳಿಸಿದ್ದಾರೆ.
ಮನೆಯವರು ಬೈತಾರೆ, ನಮ್ಮನ್ನ ಬೇರೆಮಾಡಿ ಬಿಡ್ತಾರೆ. ನಾವೆಲ್ಲ ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿದ್ದೆವು. ಆದರೆ, ಮನೆಯವರು ನಾವು ಒಟ್ಟಿಗಿರುವುದನ್ನು ಬಿಡುತ್ತಿರಲಿಲ್ಲ. ಅದಕ್ಕಾಗಿ ಮನೆಯನ್ನೇ ಬಿಟ್ಟು ಹೋಗಲು ನಿರ್ಧರಿಸಿದ್ವಿ. ಹಳ್ಳಿಗೆ ಹೋಗಿ ಒಟ್ಟಾಗಿ ಜೀವನ ಮಾಡಬೇಕೆಂದು ನಿರ್ಧಾರ ಮಾಡಿದ್ವಿ ಎಂದು ಮಕ್ಕಳು ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ.
ಯುವತಿ ಮೇಲೆ ಕ್ರಮ - ಡಿಸಿಪಿ ಮಾಹಿತಿ
ನಾಲ್ವರು ಮಕ್ಕಳನ್ನು ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್ ವಿಚಾರಣೆ ನಡೆಸಿದ್ದಾರೆ. ನಾಲ್ವರು ಮಕ್ಕಳು ಒಂದೇ ಲೇಔಟ್ ನಲ್ಲಿ ನಿವಾಸಿಗಳು. ಎಲ್ಲರೂ ಒಟ್ಟಿಗೆ ಆಡೋಕೆ ಹೋಗ್ತಿದ್ರು. ಆದರೆ ಇವರ ಸ್ನೇಹ ಮನೆಯವರಿಗೆ ಹಿಡಿಸಿರಲಿಲ್ಲ. ಪ್ರಯಾಣಕ್ಕೆ ಎಲ್ಲರೂ ಮನೆಯಿಂದ ಹಣವನ್ನು ಹಿಡಿದು ತಂದಿದ್ದರು. ತಮ್ಮ ಗುರುತನ್ನು ಯಾರೂ ಪತ್ತೆ ಹಚ್ಚಬಾರದೆಂದು ಮೊಬೈಲ್ ಸಿಮ್ ಕಾರ್ಡ್ ಮತ್ತು ಮೈ ಮೇಲಿದ್ದ ಚಿನ್ನಾಭರಣವನ್ನು ಮಂಗಳೂರಿನ ಖಾಸಗಿ ಬಸ್ ನಿಲ್ದಾಣದ ಡಸ್ಟ್ ಬಿನ್ ಗೆ ಎಸೆದಿದ್ದಾರೆ. ಆದರೆ ಸದ್ಯ ಪೊಲೀಸರು ಈ ವಸ್ತುಗಳನ್ನು ರಿಕವರಿ ಮಾಡಿದ್ದಾರೆ. ಮಕ್ಕಳು ಸಿಕ್ಕಿರುವ ಬಗ್ಗೆ ಈಗಾಗಲೇ ಬೆಂಗಳೂರು ಡಿಸಿಪಿಗೆ ಮಾಹಿತಿ ನೀಡಿದ್ದೇವೆ. ಬೆಂಗಳೂರಿನಿಂದ ಹೆತ್ತವರು ಮಂಗಳೂರಿಗೆ ಬರುತ್ತಿದ್ದಾರೆ. ಸಣ್ಣ ಮಕ್ಕಳನ್ನು ಹೆತ್ತವರ ಜೊತೆ ಕಳುಹಿಸುತ್ತೇವೆ. ಆದರೆ ಮಕ್ಕಳನ್ನು ಕರೆತಂದ ಯುವತಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಪಿ ಹರಿರಾಂ ಶಂಕರ್ ಹೇಳಿದ್ದಾರೆ.
Three tenth standard students who were studying in Soundarya school within Bagalagunte police station limits and had gone missing two days back, have been found. Further, the four others which included a major and three minor, were found in Mangalore near KMC Hospital. The 15-year-olds, Parikshit, Nandan and Kiran, had left their homes duly leaving behind letters explaining that they wanted to pursue a career in sports and were disinterested in studies. The children had left at around 5.30 am on Saturday with Rs 1,500 cash each. A search launched for them had failed to locate them.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm