ವನ್ ಸೈಡ್ ಲವ್ ; ಕಬಡ್ಡಿ ಪ್ರಾಕ್ಟೀಸ್ ತೆರಳುತ್ತಿದ್ದ 14 ವರ್ಷದ ಹುಡುಗಿಯ ಮೇಲೆ ಚೂರಿಯಿಂದ ಇರಿದು ಕೊಂದ ಹುಡುಗರು!  

13-10-21 08:18 pm       Mangaluru Correspondent   ಕರಾವಳಿ

ಕಬಡ್ಡಿ ಪ್ರಾಕ್ಟೀಸ್ ಮಾಡಲು ತೆರಳುತ್ತಿದ್ದ 14 ವರ್ಷದ ಹುಡುಗಿಯನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿದ ಅಪ್ರಾಪ್ತ ಹುಡುಗರು ಆಕೆಯ ಮೇಲೆ ಚೂರಿಯಿಂದ ಇರಿದು ಕೊಲೆಗೈದ ಘಟನೆ ಪುಣೆಯಲ್ಲಿ ನಡೆದಿದೆ.

ಪುಣೆ, ಅ.13: ಕಬಡ್ಡಿ ಪ್ರಾಕ್ಟೀಸ್ ಮಾಡಲು ತೆರಳುತ್ತಿದ್ದ 14 ವರ್ಷದ ಹುಡುಗಿಯನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿದ ಅಪ್ರಾಪ್ತ ಹುಡುಗರು ಆಕೆಯ ಮೇಲೆ ಚೂರಿಯಿಂದ ಇರಿದು ಕೊಲೆಗೈದ ಘಟನೆ ಪುಣೆಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಒಬ್ಬ 22 ವರ್ಷದ ಯುವಕನಾಗಿದ್ದು, ಇಬ್ಬರು ಅಪ್ರಾಪ್ತ ಹುಡುಗರಾಗಿದ್ದು, ಎಂಟನೇ ಕ್ಲಾಸ್ ಓದುತ್ತಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ, ಏಕಮುಖ ಪ್ರೀತಿಯನ್ನು ಹೊಂದಿದ್ದ ಹುಡುಗಿಯ ದೂರದ ಸಂಬಂಧಿಯಾಗಿರುವ ಯುವಕನೇ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಬೀಬೆವಾಡಿ ಏರಿಯಾದ ಯಶ್ ಲಾನ್ ನಲ್ಲಿ ಕಬಡ್ಡಿ ಪ್ರಾಕ್ಟೀಸ್ ಮಾಡುವುದಕ್ಕಾಗಿ ಹುಡುಗಿ ತೆರಳುತ್ತಿದ್ದಳು. ಸಂಜೆ 5.45ಕ್ಕೆ ಪ್ರಾಕ್ಟೀಸ್ ಕೇಂದ್ರ ತಲುಪುವುದಕ್ಕೂ ಮುನ್ನ ಎದುರು ಸಿಕ್ಕಿದ್ದ ಗೆಳತಿಯರ ಜೊತೆ ಮಾತನಾಡುತ್ತಿದ್ದಳು. ಇದೇ ವೇಳೆ, ಇಬ್ಬರು ಒಂದು ಬೈಕಿನಲ್ಲಿ ಬಂದಿದ್ದಾರೆ. ಮತ್ತೊಬ್ಬ ಅಲ್ಲಿಯೇ ಇದ್ದ. ಇಬ್ಬರು ಸೇರಿ ಏಕಾಏಕಿ ಹುಡುಗಿ ಮೇಲೆ ಚೂರಿಯಿಂದ ಹಲ್ಲೆ ಮಾಡಿದ್ದಾರೆ.

ಕುತ್ತಿಗೆ ಮತ್ತು ದೇಹದ ವಿವಿಧ ಭಾಗಗಳಿಗೆ ಚೂರಿಯಿಂದ ಹಲವು ಬಾರಿ ತಿವಿದಿದ್ದು, ತೀವ್ರ ರಕ್ತಸ್ರಾವಗೊಂಡು ಹುಡುಗಿ ನೆಲಕ್ಕೆ ಬಿದ್ದಿದ್ದಾಳೆ. ಯುವಕರ ಬರ್ಬರ ದಾಳಿಯಿಂದಾಗಿ 14 ವರ್ಷದ ಹುಡುಗಿ ಸ್ಥಳದಲ್ಲೇ ಸಾವು ಕಂಡಿದ್ದಾಳೆ ಎಂದು ಬೀಬೆವಾಡಿ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸುನಿಲ್ ಝವಾರೆ ತಿಳಿಸಿದ್ದಾರೆ.

ಘಟನೆಯ ಬಳಿಕ ಯುವಕರು ಸ್ಥಳದಿಂದ ಓಡಿ ಪರಾರಿಯಾಗಿದ್ದರು. ಆನಂತರ, ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ಈ ಪೈಕಿ 22 ವರ್ಷದ ಶುಭಮ್ ಭಾಗ್ವತ್ ಎಂಬಾತ ಹುಡುಗಿಯ ದೂರದ ಸಂಬಂಧಿಯಾಗಿದ್ದು ಕೆಲವೊಮ್ಮೆ ಅವರ ಮನೆಗೇ ಬಂದು ಇರುತ್ತಿದ್ದ. ಈ ವೇಳೆ, ಹುಡುಗಿಯನ್ನು ವನ್ ಸೈಡೆಡ್ ಆಗಿ ಪ್ರೀತಿಸುತ್ತಿದ್ದ. ಈ ಬಗ್ಗೆ ತಿಳಿಯದ ಹುಡುಗಿ ತನ್ನಷ್ಟಕ್ಕೇ ಇದ್ದಳು. ಈಗ ಏಕಾಏಕಿ ಆಕೆಯ ಮೇಲೆ ದಾಳಿ ನಡೆಸಿ ಕೊಲೆ ನಡೆಸಿದ್ದಾನೆ. ಆಕೆ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಕೊಲೆ ಮಾಡಿದ್ದಾನೆಯೇ ಬೇರೆ ಕಾರಣ ಇದೆಯೇ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

A Class 8 girl was stabbed multiple times on a street by a man in the Bibwewadi area of Pune when she was on her way to Kabaddi practice, police said on Tuesday. The victim has been identified as 14-year-old Kshitija, who was rushed to hospital but was declared dead on arrival. "Kshitija was on her way to practice Kabaddi in the evening at Yash Lawns in the Bibewadi area around 5.45 pm when her relative Hrishikesh alias Shubham Bhagwat (22) came on his friend's motorcycle and brutally attacked the girl with a sharp weapon. She was stabbed multiple times and the attack was so brutal that the girl died on the spot", Namrata Patil, Deputy Commissioner of Police, Maharashtra, said.